ಪ್ಯಾರಿಸ್( ಫ್ರಾನ್ಸ್): ಅಸ್ತಮಾ ಮತ್ತು ಕ್ರಾನಿಕಲ್ ಅಬ್ಸ್ಟ್ರಾಕ್ಟಿವ್ ಪಲ್ಮನರಿ ಡಿಸೀಸ್ (ಸಿಒಪಿಡಿ)ಯಂತಹ ಶ್ವಾಸಕೋಶ ಸಮಸ್ಯೆಯನ್ನು ಎದುರಿಸುತ್ತಿರುವ ಮಕ್ಕಳು ಮತ್ತು ವಯಸ್ಕರಲ್ಲಿ ಹವಾಮಾನ ಬದಲಾವಣೆ ಹೆಚ್ಚಿನ ಅಪಾಯ ಒಡ್ಡಲಿದೆ ಎಂದು ಅಧ್ಯಯನ ತಿಳಿಸಿದೆ.
ಯುರೋಪಿಯನ್ ರೆಸ್ಪಿರೇಟರಿ ಜರ್ನಲ್ನಲ್ಲಿ ಈ ಅಧ್ಯಯನ ಪ್ರಕಟಿಸಲಾಗಿದೆ. ಹವಾಮಾನ ಬದಲಾವಣೆಗಳಾದ ಶಾಖದ ಅಲೆ, ಕಾಳ್ಗಿಚ್ಚು ಮತ್ತು ಪ್ರವಾಹ ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಕುರಿತು ಸಾಕ್ಷ್ಯವನ್ನು ತಂದಿದೆ. ಇದರಿಂದ ವಿಶ್ವದಲ್ಲಿ ಮಿಲಿಯಂತರ ಜನರು ವಿಶೇಷವಾಗಿ ಮಕ್ಕಳು ಮತ್ತು ವೃದ್ಧರಲ್ಲಿ ಉಸಿರಾಟದ ಸಮಸ್ಯೆ ಹೆಚ್ಚಿಸುತ್ತದೆ.
ಹವಾಮಾನ ಬದಲಾವಣೆ ಪ್ರತಿಯೊಬ್ಬರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಅದರಲ್ಲೂ ಉಸಿರಾಟ ಸಮಸ್ಯೆ ಹೊಂದಿರುವ ರೋಗಿಗಳಲ್ಲಿ ಇದು ಮತ್ತಷ್ಟು ಕಳಪೆ ಪರಿಣಾಮ ಬೀರುತ್ತದೆ. ಈ ಜನರು ಈಗಾಗಲೇ ಉಸಿರಾಟದ ಸಮಸ್ಯೆ ಎದುರಿಸಿದ್ದು, ಅವರು ಈ ಹವಾಮಾನ ಬದಲಾವಣೆಯಿಂದ ಮತ್ತಷ್ಟು ಸೂಕ್ಷ್ಮಗೊಳ್ಳುತ್ತಾರೆ. ಅವರ ರೋಗದ ಲಕ್ಷಣಗಳು ಮತ್ತಷ್ಟು ಕೆಟ್ಟದಾಗುತ್ತದೆ ಎಂದು ಯುರೋಪಿಯನ್ ರೆಸ್ಪಿರೇಟರಿ ಸೊಸೈಟಿ ಎನ್ವರಮೆಂಟಲ್ ಅಂಡ್ ಹೆಲ್ತ್ ಕಮಿಟಿ ಫ್ರೊ ಜೊರಾನಾ ಜೊವನೊವಿಕ್ ಅಂಡ್ರೆಸೆನ್ ತಿಳಿಸಿದ್ದಾರೆ.
ವಾಯು ಮಾಲಿನ್ಯ ಈಗಾಗಲೇ ಶ್ವಾಸಕೋಶವನ್ನು ಹಾನಿ ಮಾಡಿದೆ. ಇದೀಗ ಹವಾಮಾನ ಬದಲಾವಣೆ ಶ್ವಾಸಕೋಶ ರೋಗಿಗಳಿಗೆ ಭಾರಿ ಆಘಾತ ಉಂಟು ಮಾಡುವ ಪರಿಣಾಮವನ್ನು ಹೊಂದಿದ್ದೆ ಎಂದಿದ್ದಾರೆ. ಈ ಪರಿಣಾಮವೂ ಹೆಚ್ಚಿನ ತಾಪಮಾನ ಮತ್ತು ಪರ್ಯಾಯವಾಗಿ ಗಾಳಿಮೂಲದ ಅಲರ್ಜಿಗಳನ್ನು ಹೆಚ್ಚಿಸುತ್ತದೆ.