ಬೀಜಿಂಗ್: ಜಗತ್ತನ್ನು ಕಾಡುತ್ತಿರುವ ಕೊರೊನಾ ವೈರಸ್ ವಿರುದ್ಧ ಪರಿಣಾಮಕಾರಿ ಲಸಿಕೆ ಶೇ 90ರಷ್ಟು ಯಶಸ್ಸು ಸಾಧಿಸಿದ್ದಾಗಿ ಅಮೆರಿಕದ ಫೈಜರ್ ಮತ್ತು ಬಯೋ ಆ್ಯಂಡ್ ಟೆಕ್ ಕಪನಿಗಳು ಜಂಟಿ ಹೇಳಿಕೆಯ ಸಿಹಿ ಸುದ್ದಿ ನೀಡಿದ್ದವು. ಮತ್ತೊಂದಡೆ, ಬ್ರೆಜಿಲ್‌ನಲ್ಲಿ ಪ್ರಯೋಗ ನಡೆಸುತ್ತಿರುವ ಚೀನಾದ ಮುಂಚೂಣಿ ಲಸಿಕೆ ಪ್ರಯೋಗವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ.
ಗಂಭೀರ ಪ್ರತಿಕೂಲ ಘಟನೆಯಿಂದಾಗಿ ಚೀನಾದ ಮುಂಚೂಣಿಯಲ್ಲಿರುವ ಲಸಿಕೆ ಮೆಂಬರ್ನ ಅಂತಿಮ ಹಂತದ ಪ್ರಯೋಗವನ್ನು ಬ್ರೆಜಿಲ್‌ನಲ್ಲಿ ನಿಲ್ಲಿಸಲಾಗಿದೆ. ಏಷ್ಯಾ ರಾಷ್ಟ್ರಗಳು ಅಭಿವೃದ್ಧಿಪಡೆಸುತ್ತಿರುವ ಕೋವಿಡ್ ಲಸಿಕೆಯ ಮುಂಚೂಣಿಯಲ್ಲಿರುವ ಚೀನಾದ ಲಸಿಕೆಗೆ ಮೊದಲ ಬಾರಿಗೆ ಇಂತಹ ಹಿನ್ನಡೆ ಎದುರಾಗಿದೆ.
ಅಕ್ಟೋಬರ್ 29ರಂದು ಸಂಭವಿಸಿದ ಘಟನೆಯ ನಂತರ ಸಿನೊವಾಕ್ ಬಯೋಟೆಕ್ ಲಿಮಿಟೆಡ್‌ನ ಲಸಿಕೆ, ಕೊರೊನಾವಾಕ್ ಎಂಬುದನ್ನು ಬ್ರೆಜಿಲ್‌ನಲ್ಲಿ ಸ್ಥಗಿತಗೊಳಿಸಲಾಗಿದೆ ಎಂದು ಬ್ರೆಜಿಲ್ ಆರೋಗ್ಯ ಸಂಸ್ಥೆ
ತಿಳಿಸಿದೆ. ಏನಾಯಿತು ಎಂಬುದರ ಕುರಿತು ಹೆಚ್ಚಿನ ವಿವರಗಳನ್ನು ಅದು ನೀಡಲಿಲ್ಲ. ಅಧ್ಯಯನವು ಮುಂದುವರಿಯಬೇಕೆ ಎಂಬ ಪ್ರಶ್ನೆಗೆ, ನಿಯಮಗಳಿಗೆ ಅನುಸಾರವಾಗಿ ಅಧ್ಯಯನವು ಅಡಚಣೆಯಾಗುತ್ತದೆ ಎಂದಷ್ಟೆ ಹೇಳಿದೆ.
ಸ್ಥಳೀಯವಾಗಿ ಲಸಿಕೆ ತಯಾರಿಸಲು ಸಿನೊವಾಕ್ ಜೊತೆ ಪಾಲುದಾರಿಕೆ ಹೊಂದಿರುವ ಸಾವೊ ಪಾಲೊನ ಇನ್ಸ್ಟಿಟ್ಯೂಟೊ ಬುಟಾಂಟನ್, ಈ ನಿರ್ಧಾರದಿಂದ ಆಶ್ಚರ್ಯವಾಗಿದೆ. ಅಧ್ಯಯನದಲ್ಲಿ ಏನಾಯಿತು ಎಂಬುದರ ವಿವರಗಳನ್ನು ಪರಿಶೀಲಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಒರ್ವ ಸ್ವಯಂಸೇವಕ ಸಾವನ್ನಪ್ಪಿದ್ದಾನೆ. ಆದರೆ ಸಾವು ಲಸಿಕೆಗೆ ಸಂಬಂಧಿಸಿದ್ದಲ್ಲ ಎಂದು ನಿರ್ದೇಶಕ ಡಿಮಾಸ್ ಕೋವಾಸ್ ಸಂದರ್ಶನದಲ್ಲಿ ಹೇಳಿದ್ದಾರೆ.