ಬಾರ್ಸಿಲೋನಾ: ಬಾಲ್ಯದಲ್ಲಿ ದೀರ್ಘಕಾಲ ಮೊಬೈಲ್ ಅಥವಾ ಲಾಪ್ಟಾಪ್ ಸೇರಿದಂತೆ ಸ್ಕ್ರೀನ್ಗಳಲ್ಲಿ ಮಕ್ಕಳ ಕಳೆಯುತ್ತಿರುವ ಸಮಯದ ಕುರಿತು ಇತ್ತೀಚಿನ ವರ್ಷಗಳಲ್ಲಿ ಅಧಿಕ ಸಂಶೋಧನೆಗಳು ನಡೆಯುತ್ತಿವೆ. ಈ ಅಧ್ಯಯನಗಳಲ್ಲಿ ಅಧಿಕ ಕಾಲ ಸ್ಕ್ರೀನ್ ಟೈಂ ವೀಕ್ಷಣೆ( ಮೊಬೈಲ್) ಮಗುವಿನ ನರದ ಅಭಿವೃದ್ಧಿ ಮತ್ತು ಸಾಮಾಜೀಕರಣದ ಮೇಲೆ ಪರಿಣಾಮ ಬೀರುತ್ತದೆ ಎಂದು ಸೂಚಿಸಿದೆ.
ಮಕ್ಕಳು ಅಧಿಕ ಕಾಲ ಸ್ಕ್ರೀನ್ನಲ್ಲಿ ಕಳೆಯುವುದರಿಂದ ತಮ್ಮ ಸುತ್ತಮುತ್ತಲಿನ ಪರಿಸರದೊಂದಿಗೆ ಸಂಬಂಧವನ್ನು ಕಡಿದುಕೊಳ್ಳುತ್ತಾರೆ. ಈ ಚಟವೂ ಅನೇಕ ಬಾರಿ ಮಾನಸಿಕ ಆರೋಗ್ಯ ವೃತ್ತಿಪರರ ಮೇಲ್ವಿಚಾರಣೆ ನಡೆಸುವಂತೆ ಆಗುತ್ತದೆ. ಜೊತೆಗೆ ಹೆಚ್ಚಿನ ಮೊಬೈಲ್ ಬಳಕೆ ನರ ಅರಿವಿನ (ನ್ಯೂರೋಕಾಂಗ್ನಿಟಿವ್) ಕಲಿಕೆ ಅಸ್ವಸ್ಥತೆಯನ್ನು ಬಾಲ್ಯದ ಆರಂಭದ ಅವಧಿಯಲ್ಲಿ ಉಂಟು ಮಾಡುತ್ತದೆ. ಇದಕ್ಕಿಂತ ಹೆಚ್ಚಾಗಿ ಮಕ್ಕಳು ಮತ್ತು ಪ್ರೌಢರು ಅಧಿಕ ಕಾಲ ಟಿವಿ, ವಿಡಿಯೋ ಗೇಮ್, ಮೊಬೈಲ್ ಫೋನ್ ಮತ್ತು ಟ್ಯಾಬ್ಲೆಟ್ಗಳನ್ನು ಬಳಸುವುದರಿಂದ ಅವರಲ್ಲಿ ಜಢ ಜೀವನಶೈಲಿ ಉಂಟಾಗುತ್ತದೆ.
ಮಕ್ಕಳು ಸ್ಕ್ರೀ ಟೈಂನಲ್ಲಿ ಹೆಚ್ಚಿನ ಕಾಲ ಕಳೆಯುವುದರಿಂದ ಅವರಲ್ಲಿ ಜಢ ಜೀವನಶೈಲಿ ಅಭಿವೃದ್ಧಿ ಆಗುತ್ತದೆ ಎಂಬುದು ಈಗಾಗಲೇ ಸಾಬೀತಾಗಿದೆ. ಇದೀಗ, ಇದಕ್ಕೆ ಹೊಸ ಆಯಾಮ ಸಿಕ್ಕಿದ್ದು, ಮಕ್ಕಳು ದೂರದರ್ಶನ, ವಿಡಿಯೋ ಗೇಮ್‌ಗಳು ಮತ್ತು ಮೊಬೈಲ್ ಫೋನ್‌ಗಳ ಮುಂದೆ ಕಳೆಯುವ ಸಮಯವನ್ನು ಸೀಮಿತಗೊಳಿಸುವುದಕ್ಕೆ ಕಾರಣ ಸಿಕ್ಕಿದೆ.
ಕುಯೋಪಿಯೊದಲ್ಲಿನ ಈಸ್ಟರ್ನ್ ಫಿನ್‌ಲ್ಯಾಂಡ್ ವಿಶ್ವವಿದ್ಯಾಲಯದಲ್ಲಿ ಆಂಡ್ರ್ಯೂ ಅಗ್ಬಾಜೆ ನೇತೃತ್ವದಲ್ಲಿ ನಡೆದ ಸಂಶೋಧನೆಯಲ್ಲಿ, ಬಾಲ್ಯದಲ್ಲಿ ಮಕ್ಕಳಲ್ಲಿ ಅಭಿವೃದ್ಧಿಯಾಗುವ ಜಢ ಜೀವನಶೈಲಿಯು ಅವರಲ್ಲಿ ಹೃದಯದ ಹಾನಿ ಅಪಾಯವನ್ನು ಹೆಚ್ಚಿಸುತ್ತದೆ ಎಂದಿದ್ದಾರೆ. ಬಾಲ್ಯದಲ್ಲಿನ ಹೆಚ್ಚಿನ ಚಟುವಟಿಕೆಯಿಂದ ಕೂಡಿರದಿರುವಿಕೆಯು ನಂತರದ ಜೀವನದಲ್ಲಿ ಅವರ ರಕ್ತದೊತ್ತಡವು ಸಾಮಾನ್ಯವಾಗಿದ್ದರೂ ಅವರಲ್ಲಿ ಹೃದಯಾಘಾತ ಮತ್ತು ಪಾರ್ಶ್ವವಾಯುವಿನಂತಹ ಅಪಾಯಕ್ಕೆ ಕಾರಣವಾಗಬಹುದು.