ಲಂಡನ್: ಕೊರೊನಾ ವೈರಸ್ ಸೋಂಕಿಗೆ ಒಳಗಾದ ಹೆಚ್ಚಿನ ಮಕ್ಕಳಲ್ಲಿ ಸೌಮ್ಯ ಲಕ್ಷಣಗಳು ಕಂಡು ಬರುತ್ತವೆ. ಕೆಲವರಿಗೆ ಯಾವುದೇ ರೋಗ ಲಕ್ಷಣಗಳಿಲ್ಲ. ಅವರಲ್ಲಿ ಕೋವಿಡ್‌ನಿಂದಾಗಿ ಆರೋಗ್ಯ ಹದಗೆಡುವುದು ತೀರಾ ಕಡಿಮೆ.
ಇಮ್ಯುನೊ ಡಿಫಿಷಿಯನ್ಸಿ ಕಾಯಿಲೆ ಇರುವ ಮಕ್ಕಳು ಕೋವಿಡ್ -19ರಿಂದ ಮರಣ ಹೊಂದುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಸ್ವೀಡನ್‌ನ ಕರೋಲಿನ್ಸ್ಕಾ ಇನ್‌ಸ್ಟಿಟ್ಯೂಟ್‌ನ ಸಂಶೋಧಕರುಕಂಡು ಹಿಡಿದಿದ್ದಾರೆ. ವೈರಸ್ ಸೋಂಕಿನ ವಿರುದ್ಧ ದೇಹದ ಪ್ರತಿರಕ್ಷಣಾ ವ್ಯವಸ್ಥೆ ನಿಯಂತ್ರಿಸುವ ಜೀನ್‌ಗಳ ಮೇಲೆ ಕರೋನಾ ಪರಿಣಾಮ ಬೀರುವುದೇ ಇದಕ್ಕೆ ಕಾರಣ ಎಂದು ಸಂಶೋಧಕರು ವಿವರಿಸಿದ್ದಾರೆ.
ಆದರೆ, ಇದಕ್ಕೆ ಭಯ ಪಡುವ ಅಗತ್ಯ ಇಲ್ಲ ಎಂದು ಸಂಶೋಧನೆ ತಿಳಿಸಿದೆ. ತೀವ್ರವಾದ ಕೋವಿಡ್ ರೋಗ ಲಕ್ಷಣಗಳು ಅಥವಾ ಮಲ್ಟಿ-ಇನ್‌ಫ್ಲಮೇಟರಿ ಸಿಂಡ್ರೋಮ್‌ನಿಂದ ಬಳಲುತ್ತಿರುವ ಮಕ್ಕಳು ಮೂಲಭೂತ ರೋಗನಿರೋಧಕ ಪರೀಕ್ಷೆಗಳು ಮತ್ತು ಆನುವಂಶಿಕ ವಿಶ್ಲೇಷಣೆ ಪರೀಕ್ಷೆಗಳಿಗೆ ಒಳಗಾಗಬೇಕು. ಆನುವಂಶಿಕ ಬದಲಾವಣೆಗಳಿಗೆ ಅನುಗುಣವಾಗಿ ಚಿಕಿತ್ಸೆಯನ್ನು ಒದಗಿಸುವ ಮೂಲಕ ಅವರನ್ನು ರಕ್ಷಿಸಬಹುದು ಎಂದು ಸಂಶೋಧಕ ಪ್ಯಾನ್ ಹಮ್ಮರ್‌ಸ್ಟಾಮ್ ಹೇಳಿದ್ದಾರೆ. ಜರ್ನಲ್ ಆಫ್ ಅಲರ್ಜಿ ಮತ್ತು ಕ್ಲಿನಿಕಲ್ ಇಮ್ಯುನೊಲಾಜಿಯಲ್ಲಿ ವರದಿ ಪ್ರಕಟವಾಗಿದೆ.
ಇದನ್ನೂ ಓದಿ :ಅಲ್ಝೈಮರ್ ಮೆದುಳಿನ ರೋಗ ಅಲ್ಲ: ಇದು ಬುದ್ಧಿಮಾಂದ್ಯತೆಯ ಸಾಮಾನ್ಯ ರೂಪ