ನ್ಯೂಯಾರ್ಕ್: ಗರ್ಭಾವಸ್ಥೆ ವೇಳೆ ಒತ್ತಡ, ಖಿನ್ನತೆ ಅಥವಾ ಆತಂಕದಂತಹ ಸಮಸ್ಯೆ ಇರುವ ತಾಯಂದಿರಿಗೆ ಜನಿಸಿದ ಮಕ್ಕಳು ತಮ್ಮ ಹದಿ ವಯಸ್ಸಿನಲ್ಲಿ ಮಾನಸಿಕ ಆರೋಗ್ಯ ಹೊಂದುವ ಅಪಾಯ ಹೆಚ್ಚಿರುತ್ತದೆ ಎಂದು ಸಂಶೋಧನೆಯೊಂದರಿಂದ ತಿಳಿದುಬಂದಿದೆ.
ನಮ್ಮ ಸಂಶೋಧನೆ, ಗರ್ಭಾವಸ್ಥೆ ಅವಧಿಯಲ್ಲಿ ಮಾನಸಿಕ ಯಾತನೆಯು ಆಕ್ರಮಣಕಾರಿ, ನಿಷೇಧಿತ ಮತ್ತು ಹಠಾತ್ ವರ್ತನೆಗಳು ಮಕ್ಕಳ ಮೇಲೆ ನಿರಂತರ ಪರಿಣಾಮ ಬೀರುತ್ತವೆ ಎಂದು ಕ್ಯಾಲಿಫೋರ್ನಿಯಾ ಸ್ಟೇಟ್ ಯುನಿವರ್ಸಿಟಿಯ ಇರೆನೆ ಟಂಗ್ ತಿಳಿಸಿದ್ದಾರೆ.
ಗರ್ಭಾವಸ್ಥೆಯಲ್ಲಿ ಕಾಡುವ ಮಾನಸಿಕ ಆರೋಗ್ಯ ರಕ್ಷಣೆ ಮತ್ತು ಬೆಂಬಲವನ್ನು ನೀಡುವುದರಿಂದ ಮಕ್ಕಳಿಗೆ ಕಾಡುವ ಸಮಸ್ಯೆಗಳಿಗೆ ನಿರ್ಣಾಯಕ ಹಂತವಾಗಿದೆ ಎಂಬುದಕ್ಕೆ ಪುರಾವೆಯನ್ನು ಒದಗಿಸುತ್ತದೆ ಟಂಗ್ ತಿಳಿಸಿದ್ದಾರೆ.
ಈ ಅಧ್ಯಯನವನ್ನು ಜರ್ನಲ್ ಸೈಕಾಲಾಜಿಕಲ್ ಬುಲೆಟಿನ್ನಲ್ಲಿನ ಅಮೆರಿಕನ್ ಸೈಕಾಲಾಜಿಕಲ್ ಅಸೋಸಿಯೇಷನ್ ಪ್ರಕಟಿಸಿದೆ. ಈ ಅಧ್ಯಯನದಲ್ಲಿ 45 ಸಾವಿರ ಭಾಗಿದಾರರನ್ನು ಬಳಕೆ ಮಾಡಲಾಗಿದ್ದು, 55 ಅಧ್ಯಯನಗಳನ್ನು ವಿಶ್ಲೇಷಣೆ ಮಾಡಲಾಗಿದೆ.
ಅಧ್ಯಯನದಲ್ಲಿ ಗರ್ಭಾವಸ್ಥೆಯಲ್ಲಿ ಮಹಿಳೆಯರ ಒತ್ತಡ, ಖಿನ್ನತೆ ಮತ್ತು ಆತಂಕ ಸೇರಿದಂತೆ ಮಾನಸಿಕ ಸಮಸ್ಯೆ ಅಳೆಯಲಾಗಿದೆ. ಜೊತೆಗೆ ಮಕ್ಕಳ ಬಾಹ್ಯ ವರ್ತನೆಗಳನ್ನು ಅಳೆಯಲಾಯಿತು. ಈ ವೇಳೆ ಮಕ್ಕಳು ಏಕಾಗ್ರತೆ ಕೊರತೆಯಂತಹ ಮಾನಸಿಕ ಆರೋಗ್ಯ ರೋಗಲಕ್ಷಣಗಳು, ಗಮನದ ಕೊರತೆ, ಹೈಪರ್ ಆಕ್ಟಿವಿಟಿ ಡಿಸಾರ್ಡರ್ ಸಮಸ್ಯೆ ಕಂಡು ಬಂದಿದೆ.