ಕರ್ನಾಟಕ

karnataka

By

Published : Mar 28, 2023, 10:57 AM IST

ETV Bharat / sukhibhava

ಕ್ರೀಡೆಯಲ್ಲಿ ತೊಡಗಿದ್ದ ಮಕ್ಕಳು ಲಾಕ್​ಡೌನ್​ ಸವಾಲು ಎದುರಿಸುವಲ್ಲಿ ಯಶಸ್ವಿ

ಕ್ಯಾಂಪಸ್​ನಲ್ಲಿ ಮಕ್ಕಳು ಕ್ರೀಡಾ ಮನರಂಜನಾ ಚಟುವಟಿಕೆಯಲ್ಲಿ ಭಾಗವಹಿಸುವುದರಿಂದ ದೈಹಿಕ ಆರೋಗ್ಯದ ಜೊತೆ ಮಾನಸಿಕ ಆರೋಗ್ಯವೂ ವೃದ್ಧಿ.

children-who-were-involved-in-sports-activities-before-covid-successfully-faced-the-challenge-of-lockdown
children-who-were-involved-in-sports-activities-before-covid-successfully-faced-the-challenge-of-lockdown

ಕೋವಿಡ್​ ಲಾಕ್​ಡೌನ್​ ಸಮಯದಲ್ಲಿ ಅನೇಕ ಮಕ್ಕಳು ಒತ್ತಡಕ್ಕೊಳಗಾದರು. ಇದರಲ್ಲಿ ಈ ಹಿಂದೆ ಕ್ರೀಡೆಗಳಂತಹ ಕ್ಯಾಂಪಸ್​ ಹಾಗೂ ಮನರಂಜನಾ ಚಟುವಟಿಕೆಯಲ್ಲಿ ತೊಡಗಿದ್ದವರು ಈ ಸವಾಲನ್ನು ಸುಲಭವಾಗಿ ನಿಭಾಯಿಸಿದ್ದಾರೆ ಎಂದು ಹೊಸ ಅಧ್ಯಯನ ತಿಳಿಸಿದೆ.

ಅಧ್ಯಯನದ ಅನುಸಾರ ಕ್ಯಾಂಪಸ್​ ಮನರಂಜನಾ ಚಟುವಟಿಕೆಯಲ್ಲಿ ಮಕ್ಕಳು ಭಾಗವಹಿಸುವುದರಿಂದ ಒತ್ತಡ ಕಡಿಮೆ ಆಗುತ್ತದೆ. ಇಂಥ ಚಟುವಟಿಕೆಯಲ್ಲಿ ಭಾಗಿಯಾಗುವ ಇತಿಹಾಸ ಹೊಂದಿರುವ ಮಕ್ಕಳು ಲೌಕ್​ಡೌನ್​ನಂತಹ ಒತ್ತಡದಲ್ಲಿಯೂ ತಮ್ಮ ಶೈಕ್ಷಣಿಕ ಪ್ರಗತಿ ಕಾಯ್ದುಕೊಂಡಿದ್ದಾರೆ. ಇದರ ಕುರಿತಾಗಿ ವಾಟರ್​​ ಲೂ ಯುನಿವರ್ಸಿಟಿ ಅಧ್ಯಯನ ನಡೆಸಿದೆ. ಫಿಟ್​ನೆಟ್​​ ಕ್ಲಾಸಸ್​​, ಕ್ರೀಡೆ ಇತಿಹಾಸ ಹೊಂದಿರುವ ಮಕ್ಕಳು ಲಾಕ್​ಡೌನ್​ ಸಮಯದ ಸವಾಲುಗಳನ್ನು ನಿಭಾಯಿಸಿದ್ದಾರೆ. ಅಷ್ಟೇ ಅಲ್ಲ, ಲಾಕ್​ಡೌನ್​ ವರ್ಕ್​ಲೋಡ್​ ಕೂಡ ನಿಭಾಯಿಸಿದ್ದಾರೆ ಎಂಬುದನ್ನು ಸಂಶೋಧನೆ ಕಂಡುಕೊಂಡಿದೆ.

ಅಧ್ಯಯನಕ್ಕಾಗಿ ಕ್ಯಾಂಪಸ್​ ಚಟುವಟಿಕೆಯಲ್ಲಿ ಕ್ರಿಯಾಶೀಲವಾಗಿದ್ದ 116 ವಿದ್ಯಾರ್ಥಿಗಳನ್ನು ಒಳಪಡಿಸಲಾಗಿದೆ. ಜನವರಿ 2020 ಅಂದರೆ ಕೋವಿಡ್ ಸಾಂಕ್ರಾಮಿಕತೆಗೆ ಮೊದಲು ಮತ್ತು ಲಾಕ್​ಡೌನ್​ ಬಳಿಕ ಏಪ್ರಿಲ್​ 2020ರಲ್ಲಿ ಎರಡು ಬಾರಿ ಅಧ್ಯಯನಕ್ಕೆ ಒಳಪಡಿಸಲಾಗಿದೆ. ಈ ಅಧ್ಯಯನದಲ್ಲಿ ಕ್ಯಾಂಪಸ್​ ಮನರಂಜನಾ ಚಟುವಟಿಕೆಗಳು ಕೇವಲ ದೈಹಿಕ ಆರೋಗ್ಯ ಪ್ರಯೋಜನಕ್ಕೆ ಸೀಮಿತವಾಗದೇ, ಮಕ್ಕಳ ಒಟ್ಟಾರೆ ಯೋಗಕ್ಷೇಮಕ್ಕೆ ಕೊಡುಗೆ ನೀಡಿದೆ ಎಂದು ಸಂಶೋಧನೆ ತಿಳಿಸಿದ್ದಾಗಿ ಸಂಶೋಧಕ ಸ್ಟೀವನ್ ಮೊಕ್​ ವಿವರ ನೀಡಿದರು.

ಮಕ್ಕಳಲ್ಲಿ ಸೋಲು- ಗೆಲುವಿನ ಮನೋಭಾವನೆ ವೃದ್ಧಿ: ಕ್ರೀಡೆ ಮತ್ತು ಮನರಂಜನಾ ಚಟುವಟಿಕೆಯ ಸಂದರ್ಭದಲ್ಲಿ ಎದುರಾಗುವ ಸವಾಲುಗಳು ಮತ್ತು ಸೋಲು ಎದುರಿಸುವುದನ್ನು ವಿದ್ಯಾರ್ಥಿಗಳು ಕಲಿತಿರುತ್ತಾರೆ. ಇದರಿಂದ ಸಾಂಕ್ರಾಮಿಕತೆಯ ವೇಳೆ ತಮ್ಮ ಕೌಶಲ್ಯ ಅಭಿವೃದ್ಧಿ ಪಡಿಸಿಕೊಂಡು ಹೊಂದಾಣಿಕೆ ಮಾಡಿಕೊಳ್ಳುವುದನ್ನು ಕಲಿಯುವುದು ಸಾಧ್ಯ. 2020ರ ಚಳಿಗಾಲದ ಆರಂಭದಲ್ಲಿ ವಿದ್ಯಾರ್ಥಿಗಳ ಒತ್ತಡ ಸಾಮಾನ್ಯವಾಗಿ ಕಡಿಮೆ ಇರುತ್ತದೆ. ಶೈಕ್ಷಣಿಕ ಬೇಡಿಕೆಗಳನ್ನು ನಿರ್ವಹಿಸುವುದು, ಹೊಸ ಸಂಬಂಧಗಳ ನಿರ್ಮಾಣ ಮತ್ತು ವೈಯಕ್ತಿಕ ಗುರಿಗಳನ್ನು ಸಾಧನೆ ವಿದ್ಯಾರ್ಥಿಗಳ ಮುಂದಿರುವ ಪ್ರಮುಖ ಮೂರು ಒತ್ತಡವಾಗಿದೆ.

ಅನಿರೀಕ್ಷಿತ ಲಾಕ್​ಡೌನ್​ನಿಂದ ಒತ್ತಡ: ಸಾಂಕ್ರಾಮಿಕತೆ ಸಮಯದಲ್ಲೂ ಶೈಕ್ಷಣಿಕ ರಜೆ ಮುಗಿಸಿ ಬಂದ ಅವರಿಗೆ ಶೈಕ್ಷಣಿಕ ವರ್ಕ್​ಲೋಡ್​ ಕಡಿಮೆಯಾಗಿದೆ. ಅಲ್ಲದೇ, ಕೋವಿಡ್​​ 19ನಂತಹ ಸಾಮಾಜಿಕ ಅಡಚಣೆಯನ್ನು ಅವರು ನಿರೀಕ್ಷಿಸಿರಲಿಲ್ಲ. ಏಪ್ರಿಲ್​​2020ರಲ್ಲಿ ಲಾಕ್​ಡೌನ್​ ಶುರುವಾದಾಗ ಮಧ್ಯಭಾಗದಲ್ಲಿ ಎಲ್ಲಾ ಒತ್ತಡಗಳು ಹೆಚ್ಚಾದವು. ಆನ್​ಲೈನ್​ ತರಗತಿ ಮತ್ತು ಕ್ವಿಜ್​ ಮತ್ತು ಪರೀಕ್ಷೆಗಳಿಂದ ಒತ್ತಡಗಳು ಬದಲಾದವು. ಪದವಿ ವಿದ್ಯಾರ್ಥಿಗಳು ಮತ್ತು ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು ಕೋವಿಡ್​​ಗೆ ಮೊದಲು ಕ್ಯಾಂಪಸ್ ಮನರಂಜನಾ ಕ್ರೀಡೆಗಳಲ್ಲಿ ಕಡಿಮೆ ಭಾಗಿಯಾಗಿದ್ದು, ಅಧ್ಯಯನದಲ್ಲಿ ಪತ್ತೆಯಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಕ್ಯಾಂಪಸ್ ಮನರಂಜನಾ ಕ್ರೀಡೆಗಳು ಒತ್ತಡದ ಘಟನೆಗಳನ್ನು ಸರಿದೂಗಿಸಿ ಜೀವಮಾನದ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ. ಈ ಹಿನ್ನೆಲೆಯಲ್ಲಿ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳ ಮಾನಸಿಕ ಆರೋಗ್ಯ ಮತ್ತು ಯೋಗಕ್ಷೇಮವನ್ನು ಹೆಚ್ಚಿಸಲು ಕ್ಯಾಂಪಸ್ ಮನರಂಜನಾ ಕ್ರೀಡೆಗಳನ್ನು ಆದ್ಯತೆಯಾಗಿ ಪರಿಗಣಿಸುವುದು ಉತ್ತಮ ಎಂದು ಅಧ್ಯಯನ ಶಿಫಾರಸು ಮಾಡಿದೆ.

ಇದನ್ನೂ ಓದಿ: ಬಾಲ್ಯದಲ್ಲಿ ಅನುಭವಿಸಿದ ಆಘಾತಗಳು ವಯಸ್ಕರಲ್ಲಿನ ಕೋಪಕ್ಕೆ ಕಾರಣ; ಅಧ್ಯಯನ

ABOUT THE AUTHOR

...view details