ಶ್ರೀನಗರ( ಕಾಶ್ಮೀರ): ವಿದ್ಯಾರ್ಥಿಗಳ ಮೇಲೆ ಶೈಕ್ಷಣಿಕ ಒತ್ತಡ ಹೆಚ್ಚುತ್ತಿರುವುದು ವರದಿಯಾಗುತ್ತಲೇ ಇದೆ. ಈ ಕುರಿತು ಈಗ ಎನ್ಸಿಆರ್ಟಿಇ ಕೂಡ ಸಮೀಕ್ಷೆ ನಡೆಸಿದೆ. ದೇಶದ ಇತರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶ ಸೇರಿದಂತೆ ಕಾಶ್ಮೀರ ಕಣಿವೆಯ ವಿದ್ಯಾರ್ಥಿಗಳು ಅಧ್ಯಯನದಿಂದ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿದ್ದಾರೆ ಎಂದು ಸಮೀಕ್ಷೆ ವರದಿ ತಿಳಿಸಿದೆ. ಪರೀಕ್ಷೆ ಅಥವಾ ಅಧ್ಯಯನದಿಂದ ಕಣಿವೆ ರಾಜ್ಯದ ಶೇ 10ರಷ್ಟು ಮಕ್ಕಳು ಮಾನಸಿಕ ಒತ್ತಡಕ್ಕೆ ಒಳಾಗುತ್ತಿದ್ದಾರೆ. ವಾರ್ಷಿಕ ಪರೀಕ್ಷೆ ವೇಳೆ ಈ ಅಂಕಿ - ಅಂಶ ಶೇ 30ರಷ್ಟು ತಲುಪಲಿದೆ. ಬಾಲಕ ಮತ್ತು ಬಾಲಕಿಯರಿಬ್ಬರಲ್ಲೂ ಈ ಒತ್ತಡ ಕಂಡು ಬರುತ್ತಿದ್ದು, ಇದರಲ್ಲಿ ಅತಿ ಹೆಚ್ಚು ಹುಡುಗಿರಯರು ಮಾನಸಿಕ ಒತ್ತಡಕ್ಕೆ ಬಲಿಯಾಗುತ್ತಿದ್ದಾರೆ ಎಂದು ತಿಳಿಸಿಲಾಗಿದೆ
ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಮಂಡಳಿ ಸಮೀಕ್ಷೆಯ ಪ್ರಕಾರ, ಶೈಕ್ಷಣಿಕ ಒತ್ತಡದಿಂದ ಬಾಲಕರಿಗಿಂದ 6ರಿಂದ 12ನೇ ತರಗತಿ ಬಾಲಕಿಯರು ಆತಂಕದ ಸಮಸ್ಯೆ ಮತ್ತು ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಕಾಶ್ಮೀರ ಕಣಿವೆಯಲ್ಲಿ 6ರಿಂದ 12ನೇ ತರಗತಿ ಅಧ್ಯಯನ ನಡೆಸುತ್ತಿರುವ 2,00,00 ಹುಡುಗಿರಯನ್ನು ಮತ್ತು ಅದೇ ಪ್ರಮಾಣದ ಬಾಲಕರನ್ನು ಈ ಸಮೀಕ್ಷೆಗೆ ಒಳಪಡಿಸಲಾಗಿದೆ
ಮಾನಸಿಕ ಒತ್ತಡ:ಇದರಲ್ಲಿ 12. 25ರಷ್ಟು ಬಾಲಕಿಯರು ಪರೀಕ್ಷೆ ಮತ್ತು ಅಧ್ಯಯನದ ವೇಳೆ ಮಾನಸಿಕ ಒತ್ತಡ ಮತ್ತು ಆತಂಕಕ್ಕೆ ಒಳಗಾಗುತ್ತಿದ್ದಾರೆ. ಶೆ 9.98ರಷ್ಟು ಬಾಲಕರು ಕೂಡ ಈ ಸಮಸ್ಯೆಗೆ ಒಳಗಾಗಿದ್ದಾರೆ ಎಂದು ವರದಿ ತಿಳಿಸಿದೆ. ಇನ್ನು ಸಮೀಕ್ಷೆ ವೇಳೆ ಕೂಡ 81.1ರಷ್ಟು ಬಾಲಕಿಯರು ಕೆಲವು ಬಾರಿ ಅಧ್ಯಯನದ ಹಿನ್ನೆಲೆ ಆತಂಕ ಮತ್ತು ಒತ್ತಡಕ್ಕೆ ಒಳಗಾಗುತ್ತಿರುವುದಾಗಿ ತಿಳಿಸಿದ್ದಾರೆ. ಇನ್ನು ಶೇ 77.7ರಷ್ಟು ಬಾಲಕರು ಕೂಡ ಶೈಕ್ಷಣಿಕ ಒತ್ತಡಕ್ಕೆ ಒಳಗಾಗುತ್ತಿರುವುದನ್ನು ಒಪ್ಪಿಕೊಂಡಿದ್ದಾರೆ.