ಓಹಿಯೋ: ಹವಾಮಾನ ದುರಂತದಿಂದ ಜಗತ್ತಿನಾದ್ಯಂತ ಆಗುತ್ತಿರುವ ಕೆಟ್ಟ ಪರಿಣಾಮಗಳಲ್ಲಿ ಒಂದು ಬಾಲ್ಯವಿವಾಹದ ಏರಿಕೆಯೂ ಆಗಿದ್ದು, ಈ ಬಗ್ಗೆ ಜನರು ಹೆಚ್ಚಿನ ಗಮನ ಹರಿಸಿಲ್ಲ ಎಂದು ಸಂಶೋಧನೆ ತಿಳಿಸಿದೆ.
ಓಹಿಯೋ ಸ್ಟೇಟ್ ಯುನಿವರ್ಸಿಟಿ, ಈ ಸಂಬಂಧ ಬರ, ಪ್ರವಾಹ ಮತ್ತಿತರ ವಿಪರೀತ ಹವಾಮಾನ ಸಂಬಂಧಿತ 20 ಅಧ್ಯಯನಗಳ ವ್ಯವಸ್ಥಿತ ವಿಶ್ಲೇಷಣೆ ನಡೆಸಿದೆ. ಈ ವೇಳೆ ತೀವ್ರ ಹವಾಮಾನ ಘಟನೆಗಳು ಮಧ್ಯಮ ಮತ್ತು ಕಡಿಮೆ ಆದಾಯದ ದೇಶಗಳಲ್ಲಿ ಮಕ್ಕಳಿಗೆ ಬೇಗ ಮತ್ತು ಬಲವಂತದ ಮದುವೆ ಹೆಚ್ಚಾಗಿದೆ.
ಒಟ್ಟಾರೆ ಅಧ್ಯಯನವೂ ಸಮಸ್ಯೆಯ ಬಲವಾದ ಪುರಾವೆಗಳನ್ನು ನೀಡಿದೆ ಎಂದು ಓಹಿಯೋ ಸ್ಟೇಟ್ನ ಸೋಶಿಯಲ್ ವರ್ಕ್ನ ಡಾಕ್ಟರಲ್ ಅಭ್ಯರ್ಥಿ ಹಾಗೂ ಅಧ್ಯಯನದ ಪ್ರಮುಖ ಲೇಖಕರಾದ ಫಿಯೋನಾ ಡೊಹರ್ಟಿ ತಿಳಿಸಿದ್ದಾರೆ.
ತೀವ್ರ ಹವಾಮಾನ ಪರಿಣಾಮಗಳು ಬಾಲ್ಯ ವಿವಾಹದ ನೇರ ಪರಿಣಾಮವನ್ನು ಹೊಂದಿದೆ ಎಂದು ಡೊಹರ್ಟಿ ತಿಳಿಸಿದ್ದಾರೆ. ಹವಾಮಾನ ದುರಂತಗಳು ಪ್ರಸ್ತುತ ಇರುವ ಸಮಸ್ಯೆಯನ್ನು ಹೆಚ್ಚಿಸುವ ಜೊತೆಗೆ ಲಿಂಗ ಅಸಮಾನತೆ ಮತ್ತು ಬಡತನವನ್ನು ಹೆಚ್ಚಿಸಿ, ಕುಟುಂಬವೂ ಇದರ ನಿರ್ವಹಣೆಗೆ ಬಾಲ್ಯ ವಿವಾಹಕ್ಕೆ ಮುಂದಾಗುವಂತೆ ಮಾಡುತ್ತದೆ ಎಂದಿದ್ದಾರೆ.
ಕಡಿಮೆ ಮತ್ತು ಮಧ್ಯಮ ಆದಾಯದ ದೇಶದಲ್ಲಿ ಹೆಚ್ಚಿನ ಪರಿಣಾಮ: ಈ ಅಧ್ಯಯನವನ್ನು ಇಂಟರ್ನ್ಯಾಷನಲ್ ಸೋಷಿಯಲ್ ವರ್ಕ್ ಜರ್ನಲ್ನಲ್ಲಿ ಪ್ರಕಟಿಸಲಾಗಿದೆ. ಜಾಗತಿಕವಾಗಿ, ಐವರಲ್ಲಿ ಓರ್ವ ಹುಡುಗಿಗೆ 18 ವರ್ಷ ವಯಸ್ಸು ತುಂಬುವ ಮೊದಲೇ ಮದುವೆಯಾಗುತ್ತಿದೆ. ಕಡಿಮೆ ಮತ್ತು ಮಧ್ಯಮ ಆದಾಯದ ದೇಶದಲ್ಲಿ ಈ ಸಂಖ್ಯೆ ಶೇ 40ರಷ್ಟು ಹೆಚ್ಚಿದೆ. ಈ ಸಂಖ್ಯೆಗಳು ಪರಿಸರ ಬದಲಾವಣೆಗಳೊಂದಿಗೆ ಹೆಚ್ಚುತ್ತದೆ. ಅಲ್ಲದೇ, ಬಾಲ್ಯ ವಿವಾಹದ ಸುತ್ತಲಿನ ಸಂಕೀರ್ಣತೆಯನ್ನು ಈ ತೀವ್ರ ಹವಾಮಾನ ಬದಲಾವಣೆ ಮತ್ತಷ್ಟು ಕೆಟ್ಟದಾಗಿಸುತ್ತದೆ ಎಂದು ಅಧ್ಯಯನದ ಸಹ ಲೇಖಕರಾದ ಓಹಿಯಾ ಸ್ಟೇಟ್ನ ಸೋಷಿಯಲ್ ವರ್ಕ್ ವಿಭಾಗದ ಅಸಿಸ್ಟೆಂಟ್ ಪ್ರೊ ಸ್ಮಿತಾ ರಾವ್ ತಿಳಿಸಿದ್ದಾರೆ.
ಈ ಅಧ್ಯಯನಕ್ಕಾಗಿ ಸಂಶೋಧಕರು 1990ರಿಂದ 2022ರ ವರೆಗೆ ಪ್ರಕಟವಾದ 20 ಅಧ್ಯಯನಗಳನ್ನು ಪರಿಶೀಲನೆ ನಡೆಸಿದ್ದಾರೆ. ತೀವ್ರ ಹವಾಮಾನಗಳು ಬಾಲ್ಯವಿವಾಹದೊಂದಿಗೆ ಸಂಬಂಧ ಹೊಂದಿದೆ. ಅದರಲ್ಲೂ 18 ವರ್ಷಕ್ಕಿಂತ ಕಡಿಮೆ ಯುವತಿಯರಲ್ಲಿ ಎಂದಿದ್ದಾರೆ. ಬಹುತೇಕ ಅಧ್ಯಯನಗಳು ಕಡಿಮೆ ಮತ್ತು ಮಧ್ಯಮ ಆದಾಯದ ದೇಶವಾದ ಏಷ್ಯಾ, ಆಫ್ರಿಕಾ ಸೇರಿದಂತೆ ಬಾಂಗ್ಲಾದೇಶ, ಭಾರತ, ಪಾಕಿಸ್ತಾನ, ಕೀನ್ಯಾ, ನೇಪಾಳ್ ಮತ್ತು ವಿಯೆಟ್ನಾಂನಲ್ಲಿ ನಡೆಸಲಾಗಿದೆ.