ಹೈದರಾಬಾದ್: ರಾಷ್ಟ್ರೀಯ ಹೆಣ್ಣು ಮಕ್ಕಳ ದಿನದಂದು ಸೆರಂ ಇನ್ಸಿಟಿಟ್ಯೂಟ್ ಆಫ್ ಇಂಡಿಯಾ ಪ್ರೈವೇಟ್ ಲಿಮಿಡೆಟ್ (ಎಸ್ಐಐ) ಗರ್ಭಕಂಠದ ಕ್ಯಾನ್ಸರ್ ವಿರುದ್ಧ ಮೊದಲ ಸ್ವದೇಶಿ ಲಸಿಕೆ ಸೆರ್ವವಾಕ್ (Cervavac) ಅನ್ನು ಬಿಡುಗಡೆ ಮಾಡಿದೆ. Cervavacನ ಈ ಹಿಂದಿನ ಅಧ್ಯಯನ ಫಲಿತಾಂಶದಲ್ಲಿ, ಗರ್ಭಕಂಠ ಕ್ಯಾನ್ಸರ್ ತಡೆಯುವಲ್ಲಿ ಇದು ಇದು ಶೇ 100ರಷ್ಟು ಪರಿಣಾಮಕಾರಿ ಎಂಬುದು ಸಾಬೀತಾಗಿದೆ. ಮಹಿಳೆಯರಲ್ಲಿ ಕಾಡುವ ಮಾರಾಣಾಂತಿಕ ಕ್ಯಾನ್ಸರ್ಗಳಲ್ಲಿ ಗರ್ಭಕಂಠದ ಕ್ಯಾನ್ಸರ್ ಒಂದಾಗಿದ್ದು, ಇತ್ತೀಚಿನ ದಿನಗಳಲ್ಲಿ ಈ ಪ್ರಕರಣಗಳ ಸಂಖ್ಯೆ ಏರಿಕೆ ಕಂಡಿದೆ. ಭಾರತದಲ್ಲಿ ಸರಿಸುಮಾರು ಒಂದು ಲಕ್ಷ ಮಹಿಳೆಯರು ಈ ಗರ್ಭಕಂಠದ ಕ್ಯಾನ್ಸರ್ಗೆ ತುತ್ತಾಗುತ್ತಿದ್ದು, 67 ಸಾವಿರ ಮಂದಿ ಸಾವನ್ನಪ್ಪುತ್ತಿದ್ದಾರೆ.
ಈ ಗರ್ಭಕಂಠದ ಕ್ಯಾನ್ಸರ್ ತಡೆಗೆ ಈಗಾಗಲೇ ಹಲವು ಲಸಿಕೆಗಳು ಇವೆ. ಈ ಎಲ್ಲವುಗಳಿಗಿಂತ ಈ ಲಸಿಕೆ ಹೆಚ್ಚು ಪರಿಣಾಮ ಕಾರಿಯಾಗಿದೆ ಎಂದು ನಂಬಲಾಗಿದೆ. ಇನ್ನು ಈ ಗರ್ಭಕಂಠದ ಕ್ಯಾನ್ಸರ್ ಯಾಕೆ ಬರುತ್ತದೆ ಎಂಬುದರ ಕುರಿತು ತಜ್ಞರು ಈಟಿವಿ ಭಾರತ್ನೊಂದಿಗೆ ಮಾತನಾಡಿದ್ದು, ಈ ಕ್ಯಾನ್ಸರ್ ತಡೆಗೆ ಲಸಿಕೆ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂದು ತಿಳಿಸಿದ್ದಾರೆ.
ಏನಿದು ಗರ್ಭ ಕಂಠದ ಕ್ಯಾನ್ಸರ್:ಮಹಿಳೆಯರಲ್ಲಿ ಕಂಡು ಬರುವ ಮಾರಣಾಂತಿಕ ಕ್ಯಾನ್ಸರ್ಗಳಲ್ಲಿ ಒಂದಾಗಿರುವ ಈ ಗರ್ಭ ಕಂಠದ ಕ್ಯಾನ್ಸರ್ ಜಗತ್ತಿನಲ್ಲಿ ತಡೆಗಟ್ಟಬಹುದಾದ ನಾಲ್ಕನೇ ಕ್ಯಾನ್ಸರ್ ಆಗಿದೆ. ಭಾರತದಲ್ಲಿ ಮಹಿಳೆಯರಲ್ಲಿ ಕಂಡು ಬರುತ್ತಿರುವ ಎರಡನೇ ಕ್ಯಾನ್ಸರ್ ಇದಾಗಿದೆ. 30 ವರ್ಷದ ಬಳಿಕ ಮಹಿಳೆಯರಲ್ಲಿ ಇದು ಕಂಡು ಬರುತ್ತದೆ. ಕೆಲವು ರೀತಿಯ ಹ್ಯೂಮನ್ ಪ್ಯಾಪಿಲೋಮ ವೈರಸ್ (HPV) ಇದಕ್ಕೆ ಪ್ರಮುಖ ಕಾರಣವಾಗಿದೆ. ಎಲ್ಲ ರೀತಿಯ ಎಚ್ಪಿವಿ ಗರ್ಭಕಂಠದ ಕ್ಯಾನ್ಸರ್ಗೆ ಕಾರಣವಾಗುವುದಿಲ್ಲ.
ಎಚ್ಪಿವಿ ಲೈಂಗಿಕವಾಗಿ ವರ್ಗಾಂತರವಾಗುವ ವೈರಸ್ ಆಗಿದ್ದು, ಸೋಂಕಿನಿಂದ ಉಂಟಾಗುವ ಸಾಧ್ಯತೆ ಒದೆ. ಇದರ ಸ್ಪಷ್ಟ ಲಕ್ಷಣಗಳ ಬಗ್ಗೆ ಸರಿಯಾಗಿ ಗೋಚರ ಆಗುವುದಿಲ್ಲ. ಇದರ ಲಕ್ಷಣ ಆರಂಭವಾದಾಗ ಸೋಂಕು ಹೆಚ್ಚುತ್ತದೆ. ರೋಗ ನಿರೋಧಕ ವ್ಯವಸ್ಥೆ ದುರ್ಬಲ ಆಗಿರುವುದು ಕೂಡ ಇದಕ್ಕೆ ಪ್ರಮುಖ ಕಾರಣವಾಗುತ್ತದೆ. ಗರ್ಭಕೋಶದ ಕೆಳಭಾಗದಲ್ಲಿ ಇದು ಜೀವಕೋಶಗಳನ್ನು ಅಭಿವೃದ್ಧಿ ಪಡಿಸುತ್ತದೆ. ಈ ಗರ್ಭ ಕೋಶ ಯೋನಿಯೊಂದಿಗೆ ಸಂಬಂಧ ಹೊಂದಿದೆ. ಸೋಂಕಿನ ರೂಪದಲ್ಲಿ ಆರಂಭವಾಗಿ ಬಳಿಕ ಕ್ಯಾನ್ಸರ್ಗೆ ಇದು ಕಾರಣವಾಗುತ್ತದೆ ಎನ್ನುತ್ತಾರೆ ಸ್ತ್ರೀರೋಗ ತಜ್ಞೆ ಡಾ ನಿಧಿ ಕೊಟಾರಿ.