ಹೈದರಾಬಾದ್: ಸೆರೆಬ್ರಲ್ ಪಾಲ್ಸಿ ಎಂಬುದು ಮಿದುಳಿನ ಅಸ್ವಸ್ಥತೆ ಅಥವಾ ನರಗಳ ಅಸ್ವಸ್ಥತೆಯಾಗಿದೆ. ಪ್ರತಿ ವರ್ಷ ಅಕ್ಟೋಬರ್ 6ರಂದು ವಿಶ್ವ ಸೆರೆಬ್ರಲ್ ಪಾಲ್ಸಿ ದಿನವನ್ನು ಆಚರಿಸಲಾಗುವುದು. ಸಮಾಜದಲ್ಲಿ ಸೆರೆಬ್ರಲ್ ಪಾಲ್ಸಿ ಬಗ್ಗೆ ಅರಿವು ಮೂಡಿಸುವುದು, ಈ ಸಮಸ್ಯೆಯಿಂದ ಬಳಲುತ್ತಿರುವ ಮಂದಿ ಸಾಧ್ಯವಾದಷ್ಟು ಮಂದಿಗೆ ದೊಡ್ಡ ಅಥವಾ ಚಿಕ್ಕ ಸಹಾಯ ಮಾಡುವುದು ಈ ದಿನದ ಪ್ರಮುಖ ಉದ್ದೇಶವಾಗಿದೆ. ಸೆರೆಬ್ರಲ್ ಎಂದರೆ ಮಿದುಳು ಆಗಿದ್ದು, ಪಾಲ್ಸಿ ಎಂದರೆ ದುರ್ಬಲತೆ, ಪಾರ್ಶ್ವವಾಯುವಿನಂತಹ ಸ್ಥಿತಿಯಾಗಿದೆ.
ಈ ದಿನಾಚರಣೆಯ ಪ್ರಮುಖ ಉದ್ದೇಶ: ವಿಶ್ವ ಸೆರೆಬ್ರಲ್ ಪಾಲ್ಸಿ ದಿನದ ಪ್ರಮುಖ ಉದ್ದೇಶ ಈ ಕುರಿತು ಜಾಗೃತಿ ಮಾತ್ರ ಮೂಡಿಸುವುದಲ್ಲ. ಈ ಸಮಸ್ಯೆಗೆ ಕಾರಣ, ಇದರ ಲಕ್ಷಣ ತಿಳಿಸುವ ಜೊತೆಗೆ ಈ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಸ್ವ ಸಹಾಯಕ್ಕೆ ನೆರವಾಗುವ ಮೂಲಕ ಅವರ ಜೀವನ ಮಟ್ಟವನ್ನು ಸುಧಾರಿಸುವುದೇ ಈ ದಿನದ ಮಹತ್ವ ಹಾಗೂ ಉದ್ದೇಶ ಆಗಿದೆ. ಹಾಗೇಯೇ ಈ ಸಮಸ್ಯೆ ಹೊಂದಿರುವ ಜೀವಿಸಲು ಎಲ್ಲ ಹಕ್ಕು ನೀಡುವುದಾಗಿದೆ. ಇಂತಹ ಸಮಸ್ಯೆಯಿಂದ ಬಳಲುತ್ತಿರುವವರಿಗೆ ವೈದ್ಯಕೀಯ ಮತ್ತು ಅಗತ್ಯವಾದ ಚಿಕಿತ್ಸೆಯನ್ನು ಲಭ್ಯವಾಗುವಂತೆ ನೋಡಿಕೊಳ್ಳುವುದು ಮತ್ತು ಸಾರ್ವಜನಿಕರು ಇಂತಹ ಸಂತ್ರಸ್ತರ ಸಹಾಯಕ್ಕೆ ಮುಂದೆ ಬರುವಂತೆ ಹುರಿದುಂಬಿಸುವುದಾಗಿದೆ.
ಈ ಸಮಸ್ಯೆಯಿಂದ ಬಳಲುತ್ತಿರುವ ಜನರಿಗೆ ರೋಗ ನಿರ್ಣಯ ಮತ್ತು ಚಿಕಿತ್ಸೆಯೊಂದಿಗೆ ಸಹಾಯ ಮಾಡಲು ಮತ್ತು ಅವರಿಗೆ ಧನಸಹಾಯವನ್ನು ನೀಡಲು 1948 ರಲ್ಲಿ ಯುನೈಟೆಡ್ ಸೆರೆಬ್ರಲ್ ಪಾಲ್ಸಿ ಅಸೋಸಿಯೇಷನ್ ಅನ್ನು ಕೂಡ ರಚಿಸಲಾಯಿತು.