ನವದೆಹಲಿ:ಕೇಂದ್ರ ಸರ್ಕಾರವು ಅಂಗಾಂಗ ದಾನ ಮತ್ತು ಅದಕ್ಕೆ ಸಂಬಂಧಪಟ್ಟ ಸಾರಿಗೆ ವಿಚಾರವಾಗಿ ಒಂದು ರಾಷ್ಟ್ರ ಒಂದು ನೀತಿಯನ್ನು ಜಾರಿಗೆ ತರಲು ಎಲ್ಲ ಕ್ರಮಗಳನ್ನು ಜಾರಿಗೆ ತರಲು ಹೊಸ ನೀತಿ ರೂಪಿಸುತ್ತಿದೆ. ಇದಕ್ಕಾಗಿ ವಾಸಸ್ಥಳದ ಅಗತ್ಯವನ್ನು ತೆಗೆದುಹಾಕಲು ನಿರ್ಧರಿಸಿದೆ ಮತ್ತು ಎಲ್ಲಾ ರಾಜ್ಯಗಳಿಗೆ ಅದರ ಬಗ್ಗೆ ತಿಳಿಸಲಾಗಿದೆ. ಈಗ ಅಗತ್ಯವಿರುವ ವ್ಯಕ್ತಿಯು ದೇಶದ ಯಾವುದೇ ರಾಜ್ಯಕ್ಕೆ ಹೋಗಿ ಅಂಗಾಂಗ ಪಡೆಯಲು ನೋಂದಾಯಿಸಿಕೊಳ್ಳಬಹುದು ಮತ್ತು ಕಸಿ ಮಾಡಿಸಿಕೊಳ್ಳಬಹುದು. ಈ ಮೊದಲು ಇಂತಹ ವ್ಯವಸ್ಥೆಯ ಬಳಕೆಗೆ ವ್ಯಕ್ತಿಯು ವಾಸಸ್ಥಳದ ಪ್ರಮಾಣ ಪತ್ರ ಹಾಗೂ ಅಗತ್ಯ ದಾಖಲೆಗಳನ್ನು ಒದಗಿಸಬೇಕಿತ್ತು. ಹಾಗೂ ಸಂಬಂಧ ಪಟ್ಟ ರಾಜ್ಯಗಳ ಪರವಾನಗಿ ಹಾಗೂ ಆಯಾ ರಾಜ್ಯಗಳ ದೇಣಿಗೆ ನೀತಿಯ ಅನ್ವಯ ನಡೆದುಕೊಳ್ಳಬೇಕಾಗಿತ್ತು.
ಈ ನಿಯಮವನ್ನು ಸರಳೀಕರಣಗೊಳಿಸಲು ಕೇಂದ್ರ ಆರೋಗ್ಯ ಇಲಾಖೆ ಮುಂದಾಗಿದೆ. ರಾಜ್ಯಗಳ ಅಂಗಾಂಗ ದಾನ ಹಾಗೂ ರಾಜ್ಯಗಳ ದೇಣಿಗೆ ನೀತಿ ಅನ್ವಯ ಹಲವು ಷರತ್ತುಗಳನ್ನು ವಿಧಿಸುತ್ತಿತ್ತು. ಈ ಷರತ್ತು ಜೀವಿಸುವ ಹಕ್ಕನ್ನು ಉಲ್ಲಂಘಿಸುವುದರಿಂದ ರಾಷ್ಟ್ರೀಯ ಅಂಗ ಮತ್ತು ಅಂಗಾಂಶ ಕಸಿ ಸಂಸ್ಥೆಯ ಮಾರ್ಗಸೂಚಿಗಳಲ್ಲಿನ ನಿಯಮಗಳನ್ನು ತೆಗೆದುಹಾಕಲು ಕೇಂದ್ರ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ. ಈಗ ಯಾವುದೇ ವಯಸ್ಸಿನ ವ್ಯಕ್ತಿಯು ಅಂಗಾಂಗ ಕಸಿಗೆ ನೋಂದಾಯಿಸಿಕೊಳ್ಳಬಹುದು ಎಂದು ಮೂಲಗಳು ಹೇಳಿವೆ.
ಏನು ಹೇಳುತ್ತೆ ಮಾರ್ಗಸೂಚಿ:ಮಾರ್ಗಸೂಚಿಗಳ ಪ್ರಕಾರ, 65 ವರ್ಷಕ್ಕಿಂತ ಮೇಲ್ಪಟ್ಟ ಜನರು ಅಂಗವನ್ನು ಸ್ವೀಕರಿಸಲು ಮತ್ತು ಅಂಗಾಂಗ ದಾನಕ್ಕೆ ನೋಂದಾಯಿಸಲು ನಿರ್ಬಂಧವಿದೆ. ಆದರೆ, ಈ ವಯೋಮಿತಿಯನ್ನು ರದ್ದುಗೊಳಿಸಲು ಕೇಂದ್ರ ನಿರ್ಧರಿಸಿದೆ. ಈಗ ಯಾವುದೇ ವಯಸ್ಸಿನ ವ್ಯಕ್ತಿಯು ಅಂಗವನ್ನು ಸ್ವೀಕರಿಸಲು ಹಾಗೂ ನೀಡಲು ಸಾಧ್ಯವಾಗುತ್ತದೆ ಎಂದು ಮೂಲಗಳು ತಿಳಿಸಿವೆ.