ಕರ್ನಾಟಕ

karnataka

ETV Bharat / sukhibhava

JN.1 ತಳಿ ಮೇಲೆ ಕಣ್ಗಾವಲಿಡಿ, ಕೋವಿಡ್​ ಏರಿಕೆ ಕಾಣದಂತೆ ಜಾಗ್ರತೆ ವಹಿಸಿ; ರಾಜ್ಯಗಳಿಗೆ ಕೇಂದ್ರದ ಸೂಚನೆ - ಜೆಎನ್​1 ಸೋಂಕಿನ ಲಕ್ಷಣ

Covid sub variant JN.1: ಕೋವಿಡ್​ 19 ಉಪ ತಳಿ ಆಗಿರುವ ಜೆಎನ್.​1 ಭಾರತದಲ್ಲಿ ಮೊದಲ ಬಾರಿಗೆ ಕೇರಳದಲ್ಲಿ ಡಿಸೆಂಬರ್​ 8ರಂದು ಪತ್ತೆಯಾಗಿದೆ.

Centre  asked states and union territories to maintain constant vigil an covid
Centre asked states and union territories to maintain constant vigil an covid

By ETV Bharat Karnataka Team

Published : Dec 19, 2023, 10:31 AM IST

ನವದೆಹಲಿ: ದೇಶದಲ್ಲಿ ಹೊಸ ಜೆಎನ್​.1 (JN.1) ತಳಿ ಪತ್ತೆಯಾಗಿದ್ದು, ಕೋವಿಡ್​ ಪ್ರಕರಣಗಳಲ್ಲೂ ಏರಿಕೆ ಕಾಣುತ್ತಿರುವ ಹಿನ್ನಲೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ನಿರಂತರ ಮೇಲ್ವಿಚಾರಣೆ ನಡೆಸುವ ಮೂಲಕ ಸೋಂಕಿನ ಬಗ್ಗೆ ಕಣ್ಗಾವಲನ್ನು ಇರಿಸಬೇಕು ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಈ ಕುರಿತು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿರುವ ಕೇಂದ್ರ ಆರೋಗ್ಯ ಕಾರ್ಯದರ್ಶಿ ಸುಧಾಂಶ್​​ ಪಂತ್​​, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಸ್ಥಿರ ಮತ್ತು ಸಹಯೋಗದ ಕ್ರಮಗಳಿಂದಾಗಿ, ಕೋವಿಡ್​​ ಸೋಂಕಿನ ದರವನ್ನು ಕಡಿಮೆ ಮಾಡಲು ಸಾಧ್ಯವಾಯಿತು. ಆದಾಗ್ಯೂ ಕೋವಿಡ್​ 19 ಸೋಂಕಿ ನಿರಂತರವಾಗಿ ಪ್ರಸರಣವಾಗುತ್ತಿದ್ದು, ಭಾರತದ ಹವಾಮಾನ ಪರಿಸ್ಥಿತಿಯಲ್ಲೂ ಸಾಂಕ್ರಾಮಿಕ ಹೆಚ್ಚು ಪ್ರಸರಣ ಆಗಿದೆ. ಇದು ಇತರೆ ಸಾಮಾನ್ಯ ರೋಗದಂತೆ ಪ್ರಸರಣ ಹೊಂದಿರುವ ಈ ಹಿನ್ನೆಲೆ ಸಾರ್ವಜನಿಕರ ಆರೋಗ್ಯದ ಮೇಲೆ ಪರಿಣಾಮ ಬೀರುವ ಹಿನ್ನೆಲೆ ಇದನ್ನು ಎದುರಿಸುವುದು ಪ್ರಮುಖವಾಗಿದೆ. ಇತ್ತೀಚಿಗೆ ಕೇರಳ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಕೋವಿಡ್​​ 19 ಪ್ರಕರಣ ಏರಿಕೆ ಕಂಡಿದೆ ಎಂದು ತಿಳಿಸಿದ್ದಾರೆ.

ಕೋವಿಡ್​ 19 ಉಪ ತಳಿ ಆಗಿರುವ ಜೆಎನ್​1 ಭಾರತದಲ್ಲಿ ಮೊದಲ ಬಾರಿಗೆ ಕೇರಳದಲ್ಲಿ ಡಿಸೆಂಬರ್​ 8ರಂದು ಪತ್ತೆಯಾಗಿದೆ. ತಮಿಳುನಾಡಿನ ತಿರುಚಿರಪ್ಪಳ್ಳಿ ಜಿಲ್ಲೆಯಿಂದ ಪ್ರಯಾಣಿಸಿದ ವ್ಯಕ್ತಿಯಲ್ಲಿ ಜೆಎನ್​1 ಸೋಂಕು ಪತ್ತೆಯಾಗಿತ್ತು. ಮುಂಬರುವ ಹಬ್ಬಗಳ ದಿನಾಚರಣೆ ಹಿನ್ನೆಲೆ ರಾಜ್ಯಗಳು ಸಾರ್ವಜನಿಕ ಆರೋಗ್ಯ ಸುರಕ್ಷತಾ ಮತ್ತು ಇತರೆ ವ್ಯವಸ್ಥೆಯನ್ನು ನಡೆಸಬೇಕಿದ್ದು, ಸೋಂಕು ಪ್ರಸರಣ ಆಗುವ ಅಪಾಯವನ್ನು ಕಡಿಮೆ ಮಾಡಬೇಕಿದೆ.

ರಾಜ್ಯಗಳು ಎಲ್ಲಾ ಜಿಲ್ಲೆಗಳಲ್ಲಿ ಕೋವಿಡ್​ ಮಾರ್ಗಸೂಚಿ ಪಾಲನೆ ಜೊತೆಗೆ ಆರ್​ಟಿ-ಪಿಸಿಆರ್​​ ಮತ್ತು ಆ್ಯಂಟಿಜೆನ್​ ಪರೀಕ್ಷೆಯ ನಿರ್ವಹಣೆ ಮಾಡುವ ಮೂಲಕ ಅಗತ್ಯ ಸುರಕ್ಷತೆವಹಿಸುವಂತೆ ಸಲಹೆ ನೀಡಲಾಗಿದೆ. ಇದೇ ವೇಳೆ ಆರ್​ಟಿ ಪಿಸಿಆರ್​ ಪರೀಕ್ಷೆ ಮತ್ತು ಜೀನೋಮ್​ ಅನುಕ್ರಮಗಳ ಪಾಸಿಟಿವ್​​ ಮಾದರಿಗಳನ್ನು ಭಾರತದ ಸಾರ್ಸ್​ ಕೋವ್​ 1 ಜೀನೋಮಿಕ್ಸ್​ ಕನ್ಸೋರ್ಟಿಯಂ ಪ್ರಯೋಗಾಲಯಕ್ಕೆ ಕಳುಹಿಸಿ. ಇದರಿಂದ ದೇಶದಲ್ಲಿ ಹೊಸ ರೂಪಾಂತರಗಳನ್ನು ಸಕಾಲಿಕವಾಗಿ ಪತ್ತೆಹಚ್ಚಲು ಸಹಾಯವಾಗುತ್ತದೆ ಎಂದು ಕೇಂದ್ರ ಹೇಳಿದೆ.

ರಾಜ್ಯಗಳು ಕೂಡ ಕೋವಿಡ್​ 19 ನಿರ್ವಹಣೆಗೆ ಜನರ ಬೆಂಬಲವನ್ನು ಕೋರಿ ಸಮುದಾಯಗಳಲ್ಲಿ ಜಾಗೃತಿಯನ್ನು ಹೆಚ್ಚಿಸಬೇಕು. ಇದೇ ವೇಳೆ ಜೆಎನ್​. 1 (ಬಿಎ.2.86.1.1) ತಳಿ ಭಾರತದಲ್ಲಿ ಕಂಡು ಬಂದಿರುವ ಕುರಿತು ಮಾಹಿತಿಯನ್ನು ನೀಡಿದ್ದು, ತಳಿಯ ಬಗೆಗಿನ ವಿವರ ಹಂಚಿಕೊಂಡಿದ್ದಾರೆ.

ಜೆಎನ್​1 ಎಂಬುದು ಬಿಎ.2.68 ಓಮಿಕ್ರಾನ್​ ತಳಿಯ ವಂಶಾವಳಿಯಾಗಿದ್ದು, ಮೊದಲ ಬಾರಿಗೆ ಆಗಸ್ಟ್​ನಲ್ಲಿ ಲಕ್ಸಂಬರ್ಗ್​​ನಲ್ಲಿ ಕಂಡು ಬಂದಿತು. ಬಿಎ.2.86 ಎಂಬುದನ್ನು ಪಿರೋಲಾ ತಳಿಯಿಂದಲೂ ಪರಿಚಿತವಾಗಿದ್ದು, ಇದು ಮೊದಲಿಗೆ ಜುಲೈನಲ್ಲಿ ಡೆನ್ಮಾರ್ಕ್​ನಲ್ಲಿ ಪತ್ತೆಯಾಗಿತ್ತು. (ಪಿಟಿಐ)

ಇದನ್ನೂ ಓದಿ:ಕೇರಳದಲ್ಲಿ ಪತ್ತೆಯಾಯ್ತು ಕೋವಿಡ್​​ ವಂಶಾವಳಿ JN 1: ಆತಂಕ ಬೇಡ, ಇರಲಿ ಮುನ್ನೆಚ್ಚರಿಕೆ ಎಂದ ತಜ್ಞರು

ABOUT THE AUTHOR

...view details