ಕರ್ನಾಟಕ

karnataka

ETV Bharat / sukhibhava

ವೈದ್ಯರು ಆ್ಯಂಟಿಬಯೋಟಿಕ್ಸ್​​​ ಶಿಫಾರಸು ಮಾಡುವಾಗ ಕಾರಣ ಬರೆಯುವುದು ಕಡ್ಡಾಯ: ಕೇಂದ್ರ ಸರ್ಕಾರ - ಆ್ಯಂಟಿಬಯೋಟಿಕ್ಸ್ ದುರ್ಬಳಕೆ

ಆ್ಯಂಟಿಬಯೋಟಿಕ್ಸ್ ದುರ್ಬಳಕೆ ತಡೆಯುವ ಉದ್ದೇಶದಿಂದ ಕೇಂದ್ರ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ.

central-govt-move-to-curb-misuse-of-antibiotics
central-govt-move-to-curb-misuse-of-antibiotics

By ETV Bharat Karnataka Team

Published : Jan 19, 2024, 11:03 AM IST

ನವದೆಹಲಿ: ದೇಶದಲ್ಲಿ ಆ್ಯಂಟಿಬಯೋಟಿಕ್ಸ್/ ಆ್ಯಂಟಿಮೈಕ್ರೊಬಿಯಲ್ ಔಷಧಿಗಳ ದುರುಪಯೋಗ ತಡೆಯುವ ಉದ್ದೇಶದಿಂದ ಕೇಂದ್ರ ಸರ್ಕಾರ ಹೊಸ ನಿಯಮ ಜಾರಿಗೆ ತಂದಿದೆ. ಈ ನಿಯಮದಂತೆ ಇನ್ನು ಮುಂದೆ ವೈದ್ಯರು ಮತ್ತು ಎಲ್ಲಾ ಫಾರ್ಮಾಸಿಸ್ಟ್​​ಗಳು ಆ್ಯಂಟಿಬಯೋಟಿಕ್ಸ್​​ ಶಿಫಾರಸು ಮಾಡುವಾಗ ತಮ್ಮ ಪ್ರಿಸ್ಕ್ರಿಪ್ಷನ್‌ಗಳ ಮೇಲೆ ನಿಖರವಾದ ಕಾರಣಗಳನ್ನು ಬರೆಯುವುದು ಕಡ್ಡಾಯ.

ಅರ್ಹ ವೈದ್ಯರು ಪ್ರಿಸ್ಕ್ರಿಪ್ಷನ್​ ನೀಡಿರೆ ಮಾತ್ರ ಆ್ಯಂಟಿಬಯೋಟಿಕ್​ ವಿತರಿಸುವಂತೆ ದೇಶದ ಎಲ್ಲಾ ಫಾರ್ಮಾಸಿಸ್ಟ್​​ ಅಸೋಸಿಯೇಷನ್​ಗಳಿಗೆ ಕೇಂದ್ರ ಸರ್ಕಾರ ಸೂಚಿಸಿದೆ. ಆರೋಗ್ಯ ಸೇವೆಗಳ ಮಹಾನಿರ್ದೇಶನಾಲಯ(ಡಿಜಿಎಚ್​ಎಸ್​) ಆ್ಯಂಟಿಬಯೋಟಿಕ್ಸ್‌ ದುರುಪಯೋಗ ತಡೆಯಲು ಈ ಕುರಿತು ಕಾಲೇಜು ವೈದ್ಯರು, ವೈದ್ಯಕೀಯ ಸಂಘಗಳು ಮತ್ತು ಫಾರ್ಮಾಸಿಸ್ಟ್ ಸಂಘಗಳಿಗೆ ಕೇಂದ್ರ ಪತ್ರ ಬರೆದಿದೆ.

ಆ್ಯಂಟಿಮೈಕ್ರೊಬಿಯಲ್‌ಗಳ ದುರುಪಯೋಗ ಮತ್ತು ಅತಿಯಾದ ಬಳಕೆ ಔಷಧ ನಿರೋಧಕ ರೋಗಕಾರಕಗಳ ಹೊರಹೊಮ್ಮುವಿಕೆಗೆ ಕಾರಣವಾಗುತ್ತಿದೆ. ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಹೊಸ ಆ್ಯಂಟಿಬಯೋಟಿಕ್ಸ್​ ಪ್ರತಿರೋಧದ ಬೆಳವಣಿಗೆಯನ್ನು ವಿಳಂಬಗೊಳಿಸುವ ಏಕೈಕ ಆಯ್ಕೆ ಎಂದು ಈ ಪತ್ರದಲ್ಲಿ ತಿಳಿಸಲಾಗಿದೆ. ಎಲ್ಲ ಪತ್ರಗಳಿಗೆ ಆರೋಗ್ಯ ಸೇವೆಗಳ ಮಹಾನಿರ್ದೇಶಕ ಅತುಲ್ ಗೋಯೆಲ್ ಸಹಿ ಹಾಕಿದ್ದಾರೆ. ವ್ಯಕ್ತಿ ಎದುರಿಸುತ್ತಿರುವ ಜಾಗತಿಕ ಸಾರ್ವಜನಿಕ ಆರೋಗ್ಯ ಬೆದರಿಕೆಯಲ್ಲಿ ಆ್ಯಂಟಿಮೈಕ್ರೊಬಿಯಲ್ ರೆಸಿಸ್ಟೆನ್ಸ್ ಒಂದು.

ಅಂದಾಜಿನಂತೆ, 2019ರಲ್ಲಿ ಜಾಗತಿಕವಾಗಿ 4.95 ಮಿಲಿಯನ್​ ಜನರ ಸಾವಿಗೆ ಈ ಬ್ಯಾಕ್ಟೀರಿಯಾ ಎಎಂಆರ್​ ನೇರ ಕಾರಣವಾಗಿದೆ. ಅಲ್ಲದೇ, 4.95 ಮಿಲಿಯನ್​ ಜನರ ಸಾವು ಡ್ರಗ್ಸ್​​​ ರೆಸಿಸ್ಟಂಟ್​ ಸೋಂಕಿನಿಂದಾಗಿದೆ. ಇವು ಆಧುನಿಕ ಔಷಧಗಳ ಲಾಭಗಳ ನಡುವೆ ಅಪಾಯ ತರುತ್ತದೆ. ಇದು ನಿರೋಧಕ ಸೂಕ್ಷ್ಮಜೀವಿಗಳಿಂದ ಉಂಟಾಗುವ ಸೋಂಕುಗಳ ಪರಿಣಾಮಕಾರಿ ತಡೆಗಟ್ಟುವಿಕೆ ಮತ್ತು ಚಿಕಿತ್ಸೆ ಹೊಂದಿದೆ. ಇದು ದೀರ್ಘಕಾಲದ ಅನಾರೋಗ್ಯ ಮತ್ತು ಸಾವಿನ ಅಪಾಯ ಉಂಟು ಮಾಡುತ್ತದೆ. ಅಲ್ಲದೇ ಎರಡನೇ ಸಾಲಿನ ಔಷಧಗಳು ಚಿಕಿತ್ಸೆ ನೀಡಲು ವಿಫಲವಾಗಬಹುದು ಎಂದು ಗೋಯೆಲ್​ ತಿಳಿಸಿದ್ದಾರೆ.

ಈ ಪತ್ರದಲ್ಲಿ, ವೈದ್ಯಕೀಯ ಕಾಲೇಜುಗಳು ಮುಂದಿನ ಪೀಳಿಗೆಯ ವೈದ್ಯರಿಗೆ ಈ ಆ್ಯಂಟಿಮೈಕ್ರೊಬಿಯಲ್‌ಗಳ ವಿವೇಚನಾಯುಕ್ತ ಬಳಕೆಗೆ ಸೂಚಿಸುವ ಅಗತ್ಯವಿದೆ. ಅವರು ಈ ಬಿಕ್ಕಟ್ಟನ್ನು ಹೆಚ್ಚಾಗಿ ಎದುರಿಸುತ್ತಾರೆ ಎಂದಿದೆ. ಔಷಧಗಳು ಮತ್ತು ಸೌಂದರ್ಯವರ್ಧಕ ನಿಯಮಗಳ ಶೆಡ್ಯೂಲ್ ಎಚ್​ ಮತ್ತು ಎಚ್​1 ನಿಯಮದ ಅನುಸಾರ, ವೈದ್ಯರ ಸೂಕ್ತ ಪ್ರಿಸ್ಕ್ರಿಪ್ಷನ್‌ಗಳ ಆಧಾರದ ಮೇಲೆ ಮಾತ್ರ ಆ್ಯಂಟಿಬಯೋಟಿಕ್​ ಅನ್ನು ಫಾರ್ಮಸಿಸ್ಟ್​​ಗಳು ವಿತರಿಸಬೇಕಿದೆ ಎಂದು ಕೂಡ ಉಲ್ಲೇಖಿಸಿದೆ.

ಇದನ್ನೂ ಓದಿ: ನಕಲಿ ಔಷಧ ಪ್ರಕರಣ: ಸಿಬಿಐ ತನಿಖೆಗೆ ದೆಹಲಿ ವಿಚಕ್ಷಣ ಇಲಾಖೆ ಒತ್ತಾಯ

ABOUT THE AUTHOR

...view details