ಹೈದರಾಬಾದ್: ಮೈಗ್ರೇನ್ ತಲೆನೋವಿನಿಂದಾಗುವ ಯಾತನೆಯನ್ನು ಪದಗಳ ಹೇಳೋಕೆ ಸಾಧ್ಯವಿಲ್ಲ. ತಲೆಯೊಳಗೆ ಏನೋ ಒತ್ತುತ್ತಿದೆ ಎಂಬಂತೆ ಒಂದೇ ಸಮನೆ ನೋವು ಬರುತ್ತದೆ. ವಾಂತಿ, ತಲೆತಿರುಗುವುದು ಹಾಗೂ ವಾಕರಿಕೆ ಸಹ ಮೈಗ್ರೇನ್‌ನ ಸಾಮಾನ್ಯ ಲಕ್ಷಣಗಳಾಗಿವೆ.
ಒಮ್ಮೆ ಮೈಗ್ರೇನ್ ಆರಂಭವಾದರೆ ಸುಮಾರು 4 ಗಂಟೆಗಳಿಂದ 72 ಗಂಟೆಗಳವರೆಗೆ ಇರುತ್ತದೆ. ಕೆಲವರು ಇದರಿಂದ ಯಾವುದೇ ಕೆಲಸ ಮಾಡಲು ಸಾಧ್ಯವಿಲ್ಲ. ಸಾಮಾನ್ಯವಾಗಿ ಪುರುಷರಿಗಿಂತ ಮಹಿಳೆಯರಲ್ಲಿ ಮೈಗ್ರೇನ್ 2-3 ಹೆಚ್ಚಾಗಿ ಕಂಡು ಬರುತ್ತದೆ. ಇದಕ್ಕೆ ಮುಖ್ಯ ಕಾರಣ ಈಸ್ಟ್ರೊಜೆನ್ ಎಂಬ ಹಾರ್ಮೋನ್.