ಹೈದರಾಬಾದ್:ಬೆಳವಣಿಗೆಯ ಅಸ್ವಸ್ಥತೆಗಳನ್ನು ಅರ್ಥ ಮಾಡಿಕೊಳ್ಳುವುದು ಮತ್ತು ಸರಿಯಾದ ಚಿಕಿತ್ಸೆ ನೀಡುವುದು ಮಗುವಿನ ಭವಿಷ್ಯಕ್ಕೆ ನಿರ್ಣಾಯಕವಾಗಿದೆ. ಅನೇಕ ಬಾರಿ ಸೂಕ್ಷ್ಮ ಚಿಹ್ನೆಗಳು ಬಹಳ ಸಮಯದವರೆಗೆ ಗೋಚರಿಸದೇ ಇರಬಹದು.
'ಈಟಿವಿ ಭಾರತ' ಸುಖೀಭವ ತಂಡವು ಗೋವಾದ ಸಾಲಿಗಾವೊದ ಸೇತು ಸೆಂಟರ್ ಫಾರ್ ಚೈಲ್ಡ್ ಡೆವಲಪ್ಮೆಂಟ್ ಆ್ಯಂಡ್ ಫ್ಯಾಮಿಲಿ ಗೈಡೆನ್ಸ್ನ ಶಿಶುವೈದ್ಯ ಮತ್ತು ನಿರ್ದೇಶಕಿ ಡಾ.ನಂದಿತಾ ಡಿ ಸೋಜಾ ಅವರೊಂದಿಗೆ ಸಂವಾದ ನಡೆಸಿದೆ.
ಪ್ರತಿ ವರ್ಷ ಏಪ್ರಿಲ್‌ನಲ್ಲಿ ವಿಶ್ವ ಆಟಿಸಂ ಜಾಗೃತಿ ತಿಂಗಳನ್ನು ಏಕೆ ಆಚರಿಸುತ್ತೇವೆ?
ಆಟಿಸಂ ಎಂಬುದು ಸಂವಹನ ಮತ್ತು ನಡವಳಿಕೆಯನ್ನು ನಿಯಂತ್ರಿಸುವಲ್ಲಿನ ತೊಂದರೆಗಳಿಂದ ವ್ಯಕ್ತವಾಗುತ್ತದೆ. ಪ್ರಪಂಚದಾದ್ಯಂತ ಆಟಿಸಂ ಪ್ರಮಾಣವು ಸ್ಥಿರವಾಗಿ ಏರುತ್ತಿದೆ. ಭಾರತದಲ್ಲಿ ಆಟಿಸಂ ಹೊಂದಿರುವ 2 ದಶಲಕ್ಷಕ್ಕೂ ಹೆಚ್ಚು ಜನರಿದ್ದಾರೆ ಎಂದು ಅಂದಾಜಿಸಲಾಗಿದೆ.
ಆರಂಭಿಕ ಚಿಕಿತ್ಸೆಯೊಂದಿಗೆ ಆಟಿಸಂ ಹೊಂದಿರುವ ಮಕ್ಕಳು ತಮ್ಮ ಬೆಳವಣಿಗೆಯಲ್ಲಿ ಪ್ರಗತಿ ಸಾಧಿಸಬಹುದು. ಹೀಗಾಗಿ, ಇದರ ಆರಂಭಿಕ ಚಿಹ್ನೆಗಳ ಕುರಿತು ಪೋಷಕರು, ಶಿಕ್ಷಕರು ಮತ್ತು ಮಕ್ಕಳನ್ನು ನೋಡಿಕೊಳ್ಳುವ ಎಲ್ಲರಿಗೂ ಶಿಕ್ಷಣ ನೀಡಲು ಏಪ್ರಿಲ್ ಸೂಕ್ತ ಸಮಯ.
ಆಟಿಸಂನ ಆರಂಭಿಕ ಲಕ್ಷಣಗಳು ಯಾವುವು?
ಆಟಿಸಂನ ಆರಂಭಿಕ ಚಿಹ್ನೆಗಳ ಕುರಿತು ಕುಟುಂಬಗಳು, ಶಿಕ್ಷಕರು ಮತ್ತು ವೈದ್ಯರು ತಿಳಿದಿರಬೇಕು. ಆ ಚಿಹ್ನೆಗಳನ್ನು ಇಲ್ಲಿ ನೀಡಲಾಗಿದೆ.
6 ತಿಂಗಳ ಹೊತ್ತಿಗೆ: ದೊಡ್ಡ ನಗು ಅಥವಾ ಇತರ ಸಂತೋಷದಾಯಕ ಅಭಿವ್ಯಕ್ತಿಗಳು ಇರುವುದಿಲ್ಲ.
9 ತಿಂಗಳ ಹೊತ್ತಿಗೆ: ಶಬ್ದಗಳು, ನಗು ಅಥವಾ ಇತರ ಮುಖದ ಅಭಿವ್ಯಕ್ತಿಗಳನ್ನು ಹಂಚಿಕೊಳ್ಳುವುದಿಲ್ಲ.