ಜೀವನ ವಸ್ತುಗಳ ಬೆಲೆ ಏರಿಕೆಯಿಂದಾಗಿ ಜಿಮ್ ಸದಸ್ಯತ್ವ ಮತ್ತು ಫಿಟ್ನೆಸ್ ಕ್ಲಾಸ್ಗಳು ಲಭ್ಯತೆ ಕೂಡ ಎಲ್ಲರ ಕೈಗೆಟುಕದಂತೆ ಆಗಿದೆ. ಹಾಗೆಂದ ಮಾತ್ರಕ್ಕೆ ಚಿಂತೆ ಮಾಡುವ ಅವಶ್ಯಕತೆ ಇಲ್ಲದೇ, ಮನೆಯಲ್ಲಿಯೇ ಅದೇ ರೀತಿಯ ಜಿಮ್ ಸೆಟ್ ಅಪ್ ಮಾಡಿ ಆರೋಗ್ಯದ ಕಾಳಜಿ ವಹಿಸಬಹುದಾಗಿದೆ. ಇದರಿಂದ ನಿನ್ನ ಹೃದಯದ ಆರೋಗ್ಯದ ಸುರಕ್ಷತೆ, ಸ್ನಾಯುಗಳ ಬಲ ಜೊತೆಗೆ ದೇಹದ ಸರಾಗತೆಗೆ ಸಂಪೂರ್ಣ ಒತ್ತು ನೀಡಬಹುದು. ಸ್ವಲ್ಪ ಮತ್ತು ಯಾವುದೇ ಸಾಧನಗಳು ಇಲ್ಲದೇ, ನೀವು ಜಿಮ್ ರೀತಿಯ ವ್ಯಾಯಾಮ ಕಾರ್ಯಕ್ರಮ ನಡೆಸಬಹುದಾಗಿದೆ.
ಹೃದಯದ ಸಹಿಷ್ಣುತೆ:ಹೃದಯ ಸಹಿಷ್ಣುತೆ ವ್ಯಾಯಾಮ ಅಥವಾ ಕಾರ್ಡಿಯೋಗಳು ಹೃದಯ ಮತ್ತು ಶ್ವಾಸಕೋಶಕ್ಕೆ ಆಮ್ಲಜನಕದ ಉತ್ತಮ ಪೂರೈಕೆ ನಡೆಸಿ, ಸ್ನಾಯು ಬೆಳವಣಿಗೆಗೆ ಸಹಾಯ ಮಾಡುತ್ತದೆ. ಹೃದಯ ಸಮಸ್ಯೆಗಳು ಅನೇಕ ಬಾರಿಗೆ ಸಾವಿಗೆ ಕಾರಣವಾಗುತ್ತದೆ. ಇದರಿಂದ ಆರೋಗ್ಯಯುತ ಹೃದಯಕ್ಕೆ ಕೆಲವು ಕಾರ್ಡಿಯೋ ವ್ಯಾಯಾಮಗಳನ್ನು ರೂಢಿಸಿಕೊಳ್ಳುವುದು ಅವಶ್ಯ. ಇದಕ್ಕೆ ಫ್ಯಾನ್ಸಿ ಸಾಧನಗಳು ಬೇಡ. ಬದಲಾಗಿ ವಾಕಿಂಗ್, ಜಾಗಿಂಗ್ ಅಥವಾ ರನ್ನಿಂಗ್ ಆಯ್ಕೆ ಮಾಡಬಹುದು. ಜೊತೆಗೆ ಸೈಕಲಿಂಗ್, ಸ್ಕಿಪ್ಪಿಂಗ್ ಅಥವಾ ಈಜು ನಡೆಸಿ. ಇದರ ಜೊತೆಗೆ ಹೃದಯದ ಸಹಿಷ್ಣುಗೆ ಎರಡು ರೀತಿಯ ವ್ಯಾಯಾಮದ ಆಯ್ಕೆ ನಡೆಸಬಹುದು.
ಹೆಚ್ಚಿನ ತೀವ್ರತೆಯ ಮಧ್ಯಂತರ ತರಬೇತಿ (ಎಚ್ಐಐಟಿ) ಇದರಲ್ಲಿ ಅಧಿಕ ವ್ಯಾಯಾಮ ಒಳಗೊಂಡಿರುತ್ತದೆ. ಈ ವೇಳೆ, ಹೃದಯ ಬಡಿತ ದರ 80 ರಿಂದ 95ರಷ್ಟಿರುತ್ತದೆ. ಕಡಿಮೆ ತೀವ್ರತೆಯ ಸ್ಥಿರತೆ (ಎಲ್ಐಎಸ್ಎಸ್) ತರಬೇತಿಗಳು ಏರೋಬಿಕ್ ನಂತಹ ಚಟುವಟಿಕೆಯನ್ನು ಹೊಂದಿದೆ. ಇದು ಕಡಿಮೆಯಿಂದ ಹೆಚ್ಚಿನ ತೀವ್ರತೆ ಹೊಂದಿರುತ್ತದೆ. ಇದರಲ್ಲಿ ಹೃದಯ ಬಡಿತ 50 ರಿಂದ 65ರಷ್ಟಿರುತ್ತದೆ.
ಈ ಎರಡು ವ್ಯಾಯಾಮಗಳು ಉತ್ತಮವಾಗಿದೆ. ಹೆಚ್ಚಿನ ತೀವ್ರತೆ ಮಧ್ಯಂತರ ತರಬೇತಿಗೆ ಹೆಚ್ಚಿನ ಸಮಯ ಬೇಕಿದೆ. ಕಡಿಮೆ ತೀವ್ರತೆಯ ಸ್ಥಿರ ಸ್ಥಿತಿಗೆ ಆನಂದ ದಾಯಕ ಮತ್ತು ದೀರ್ಘಕಾಲದ ಸುಸ್ಥಿರತೆ ಹೊಂದಿದೆ. ಇದರಲ್ಲಿ ಯಾವುದೇ ವ್ಯಾಯಾಮ ನಡೆಸಿದರೂ ಅದು 150 ನಿಮಿಷಯದ ಸಾಧಾರಣದಿಂದ ತೀವ್ರತೆ ವ್ಯಾಯಾಮ ಆಗಿರಲಿ.
ಇನ್ನು ನಿಮ್ಮ ವ್ಯಾಯಾಮ ಸರಿಯಾದ ತೀವ್ರತೆ ಹೊಂದಿದೆ ಎಂಬುದು ಹೇಗೆ ತಿಳಿಯುತ್ತೀರಿ ಎಂಬುದಕ್ಕೆ ಉತ್ತರ ಸ್ಮಾರ್ಟ್ ವಾಚ್ ಆಗಿದೆ. ಈ ಮೂಲಕ ನೀವು ಹೃದಯ ಬಡಿತದ ತೀವ್ರತೆ ನಿರ್ವಹಣೆ ಮಾಡಬಹುದು. ಅಥವಾ ಮಾತಿನ ಪರೀಕ್ಷೆ ನಡೆಸಬಹುದು. ಕಡಿಮೆ ತೀವ್ರತೆ ಚಟುವಟಿಕೆಯಲ್ಲಿ ಸಂಪೂರ್ಣ ವಾಕ್ಯವನ್ನು ನೀವು ಹೇಳಲು ಸಾಧ್ಯ. ಅದೇ ತೀವ್ರ ಚಟುವಟಿಕೆಯಲ್ಲಿ ತೊಡಗಿಸಿಕೊಂಡಾಗ ಒಂದೇ ಉಸಿರಿನಲ್ಲಿ ವಾಕ್ಯವನ್ನು ಹೇಳಬಹುದು