ಕರ್ನಾಟಕ

karnataka

ETV Bharat / sukhibhava

2030ರ ಹೊತ್ತಿಗೆ 50 ವರ್ಷದೊಳಗಿನವರಲ್ಲಿ ಕ್ಯಾನ್ಸರ್​ ಸಂಬಂಧಿ ಸಾವಿನ ಪ್ರಮಾಣ ಏರಿಕೆ: ಅಧ್ಯಯನ - ನ್ಸರ್​​ ಮತ್ತು ಅದರಿಂದ ಸಂಬಂಧಿ ಸಾವಿಗೆ ಒಳಗಾಗುವ ಸಾಧ್ಯತೆ

2014ರಿಂದ ಭಾರತ ಸೇರಿದಂತೆ ಹಲವು ದೇಶದಲ್ಲಿನ 29 ವಿಧದ ಕ್ಯಾನ್ಸರ್​​ ಸ್ಥಿತಿಯನ್ನು ವಿಶ್ಲೇಷಣೆ ನಡೆಸಲಾಗಿದೆ.

Cancer cases deaths to rise globally among under 50s by 2030
Cancer cases deaths to rise globally among under 50s by 2030

By ETV Bharat Karnataka Team

Published : Sep 5, 2023, 4:15 PM IST

ನವದೆಹಲಿ: ವಿಶ್ವದಾದ್ಯಂತ ಕ್ಯಾನ್ಸರ್​ ಪ್ರಕರಣದಲ್ಲಿ ಗಮನಾರ್ಹ ಏರಿಕೆ ಕಂಡು ಬರಲಿದೆ. 2030ರ ಹೊತ್ತಿಗೆ ಭಾರತದಲ್ಲಿ 50 ವರ್ಷದೊಳಗಿನ ಜನರು ಕ್ಯಾನ್ಸರ್​​ ಮತ್ತು ಅದರಿಂದ ಸಂಬಂಧಿ ಸಾವಿಗೆ ಒಳಗಾಗುವ ಸಾಧ್ಯತೆ ಹೆಚ್ಚಿದೆ ಎಂದು ಅಧ್ಯಯನ ತಿಳಿಸಿದೆ. ಬಿಎಂಜೆ ಅನ್​ಕೊಲಾಜಿಯಲ್ಲಿ ಪ್ರಕಟಿಸಲಾಗಿದೆ. ಫಲಿತಾಂಶದಲ್ಲಿ 50 ವರ್ಷದೊಳಗಿನ ಮಂದಿಯಲ್ಲಿ ಕ್ಯಾನ್ಸರ್​ ಆರಂಭವು ಜಾಗತಿಕವಾಗಿ ಶೇ 31ರಷ್ಟು ಹೆಚ್ಚಲಿದೆ. ಇದೇ ವೇಳೆ ಕ್ಯಾನ್ಸರ್​ ಮತ್ತು ಕ್ಯಾನ್ಸರ್​ ಸಂಬಂಧಿ ಸಾವಿನ ಸಂಖ್ಯೆ ಶೇ 21ರಷ್ಟು ಏರಿಕೆ ಕಾಣಲಿದೆ ಎಂದು ತಿಳಿಸಲಾಗಿದೆ.

ಈ ಅಧ್ಯಯನವೂ ಗ್ಲೋಬಲ್​ ಬರ್ಡನ್​ ಆಫ್​ ಡಿಸೀಸ್​ ವರದಿ 2019 ವರದಿ ಆಧಾರಿಸಿದೆ. 2014ರಿಂದ ಭಾರತ ಸೇರಿದಂತೆ ಹಲವು ದೇಶದಲ್ಲಿನ 29 ವಿಧದ ಕ್ಯಾನ್ಸರ್​​ ಸ್ಥಿತಿಯನ್ನು ವಿಶ್ಲೇಷಣೆ ನಡೆಸಲಾಗಿದೆ. 1990ರಿಂದ 2019ರಲ್ಲಿ ಮೂರು ದಶಕಗಳಿಂದ 50 ವರ್ಷದೊಳಗಿನ ಕ್ಯಾನ್ಸರ್​ ಕೇಸ್​ ಪ್ರಕರಣಗಳಲ್ಲಿ ಶೇ 79ರಷ್ಟು ಏರಿಕೆ ಕಂಡಿದೆ. 1990ರಲ್ಲಿ 1.82 ಮಿಲಿಯನ್​ ಕ್ಯಾನ್ಸರ್​ ಪ್ರಕರಣಗಳು 2019ರಲ್ಲಿ 3.26 ಮಿಲಿಯನ್​ ಏರಿಕೆ ಕಂಡಿದೆ. ಇದರ ಸಂಬಂಧಿ ಸಾವಿನ ಸಂಖ್ಯೆಯು ಈ ಅವಧಿಯಲ್ಲಿ ಶೇ 29ರಷ್ಟು ಇಳಿಕೆ ಕಂಡಿದೆ

2019ರಲ್ಲಿ 50 ವರ್ಷದ ಕ್ಯಾನ್ಸರ್​ ಆರಂಭಿಕ ಪ್ರಕರಣದಲ್ಲಿ ಸ್ತನ ಕ್ಯಾನ್ಸರ್​ ಹೆಚ್ಚಿನ ಅಂಕಿ - ಅಂಶವನ್ನು ಹೊಂದಿದೆ ಎಂದು ಅಧ್ಯಯನ ತೋರಿಸಿದೆ. ಇದರ ನಂತರ ನಸೊಫರೆನ್ಸ್​​ ಅಂದರೆ ವಿಂಡ್​ ಪೈಪ್​ ಕ್ಯಾನ್ಸರ್​ ವಾರ್ಷಿಕ 2.28ರಷ್ಟಿದೆ. ಬಳಿಕ ಪ್ರಾಸ್ಟೆಸ್​ 2.23ರಷ್ಟಯ ಹೆಚ್ಚಳ ಕಂಡಿದೆ. ಯಕೃತ್​​ ಕ್ಯಾನ್ಸರ್​ನ ಆರಂಭಿಕ ಹಂತವೂ ಈ ಅವಧಿಯಲ್ಲಿ ಶೇ 2.88ರಷ್ಟು ಹೆಚ್ಚಾಗಿದೆ.

ಜಡ ಜೀವನಶೈಲಿ, ಜಂಕ್​ ಮತ್ತು ಫಾಸ್ಟ್​ ಫುಡ್​ನಂತ ಪಾಶ್ಚಿಮಾತ್ಯ ಆಹಾರ ಶೈಲಿ , ಸ್ಕ್ರೀನ್​ ಟೈಂ ಹೆಚ್ಚಳ, ವ್ಯಾಯಾಮದ ಕೊರತೆ ಭಾರತ ಸೇರಿದಂತೆ ಜಾಗತಿಕವಾಗಿ ಕ್ಯಾನ್ಸರ್​​ ಪ್ರಕರಣಗಳ ಹೆಚ್ಚಳಕ್ಕೆ ಕಾರಣವಾಗಿದೆ. ಸ್ಥೂಲಕಾಲ, ಒತ್ತಡ, ಧೂಮಪಾನ, ಮದ್ಯಪಾನ, ತಂಬಾಕು ಕೂಡ ಕ್ಯಾನ್ಸರ್​ ಹೆಚ್ಚಳಕ್ಕೆ ಕೊಡಗೆ ನೀಡುತ್ತದೆ.

ಗ್ಲೋಬಲ್​ ಕ್ಯಾನ್ಸರ್​ ಅಬ್ಸರ್ವೆಟರಿ ಅಂದಾಜಿಸಿದಂತೆ 2020ರಲ್ಲಿ ಜಾಗತಿಕವಾಗಿ 19.3 ಮಿಲಿಯನ್​ ಮಂದಿ ಕ್ಯಾನ್ಸರ್​ನಿಂದ ಬಳಲುತ್ತಿದ್ದು, ಭಾರತ ಇದರಲ್ಲಿ ಮೂರನೇ ಸ್ಥಾನವನ್ನು ಪಡೆದಿದೆ. ಮೊದಲ ಸ್ಥಾನದಲ್ಲಿ ಅಮೆರಿಕ ಇದ್ದರೆ, ಎರಡನೇ ಸ್ಥಾನದಲ್ಲಿ ಚೀನಾ ಇದೆ. ಆರೋಗ್ಯಯುತ ಜೀವನಶೈಲಿ ರೂಢಿಸಿಕೊಳ್ಳುವುದು. ಮನೆ ಆಹಾರ ಅದರಲ್ಲೂ ಹಸಿರು ಎಲೆ ಆಹಾರಗಳಿಗೆ ಒತ್ತು ನೀಡಿ, ದಿನನಿತ್ಯ ನಿಯಮಿತ ವ್ಯಾಯಾಮ ಮತ್ತು ಒತ್ತಡ ರಹಿತ ಜೀವನ ಕ್ಯಾನ್ಸರ್​ ವಿರುದ್ಧ ಸಹಾಯ ಮಾಡುತ್ತದೆ.

ಇದನ್ನೂ ಓದಿ: World Spinal Cord Injury Day: ಭಾರತದಲ್ಲಿ ಶೇ 15-20ರಷ್ಟು ಬೆನ್ನು ಮೂಳೆ ಸಮಸ್ಯೆಗೆ ಕಾರಣ ರಸ್ತೆ ಅಪಘಾತ; ವೈದ್ಯರು

ABOUT THE AUTHOR

...view details