ಬೆಂಗಳೂರು: ಮಳೆಗಾಲದ ಹಿನ್ನೆಲೆ ರಾಜ್ಯದಲ್ಲಿ ಡೆಂಘೀ ಪ್ರಕರಣಗಳ ವರದಿ ಹೆಚ್ಚಾಗುತ್ತಿದೆ. ಬಹುತೇಕ ಜನರಲ್ಲಿ ಅಧಿಕ ಜ್ವರ, ತಲೆನೋವು, ಮೈಕೈ ನೋವು ಮತ್ತು ತಲೆ ಸುತ್ತುವಿಕೆಯಂತಹ ಲಕ್ಷಣಗಳು ಕಾಣಿಸುತ್ತದೆ. ಡೆಂಘಿಗೆ ನಿರ್ದಿಷ್ಟ ಚಿಕಿತ್ಸೆ ಇಲ್ಲದಿರುವುದಿಂದ ನೋವು ನಿವಾರಣಕ ಔಷಧಗಳ ಮೂಲಕ ಇದಕ್ಕೆ ಚಿಕಿತ್ಸೆ ನೀಡಲಾಗುವುದು.
ಡೆಂಘೀ ಸೋಂಕಿತರಲ್ಲಿ ಸಾಮಾನ್ಯವಾಗಿ ಪ್ಲೆಟ್ಲೆಟ್ ಸಂಖ್ಯೆ ಕಡಿಮೆಯಾಗುತ್ತದೆ. ತಜ್ಞರ ಪ್ರಕಾರ ಇದು ಸೋಂಕಿನ ಅತ್ಯಂತ ನಿರ್ಣಾಯಕ ಲಕ್ಷಣವಾಗಿದೆ, ಅನಾರೋಗ್ಯದ ತೀವ್ರ ಹಂತದಲ್ಲಿ ಇದು ಕಂಡು ಬರುತ್ತದೆ. ಡಬ್ಲ್ಯುಎಚ್ಒ ಪ್ರಕಾರ, ಯಾರಿಗೆ ಎರಡನೇ ಬಾರಿ ಡೆಂಘೀ ಸೋಂಕು ಕಾಣಿಸಿಕೊಳ್ಳುತ್ತದೆ. ಅವರಲ್ಲಿ ಅಪಾಯ ಹೆಚ್ಚು.
ಈ ಸೋಂಕಿಗೆ ನಿರ್ದಿಷ್ಟ ಚಿಕಿತ್ಸೆ ಇಲ್ಲದಿರುವ ಹಿನ್ನೆಲೆ ವೈದ್ಯರು ಸಾಮಾನ್ಯವಾಗಿ, ನೋವಿನ ಆಧಾರದ ಮೇಲೆ ಚಿಕಿತ್ಸೆ ನೀಡುತ್ತಾರೆ. ಡಬ್ಲ್ಯೂಎಚ್ಒ ಪ್ರಕಾರ, ಅಸಿನ್ತ್ರೊಮಿನೊಫೆನ್ (ಪ್ಯಾರಾಸಿಟಮೆಲ್) ಇದರ ನಿಯಂತ್ರಣ ಮಾಡುತ್ತದೆ. ಸ್ಟಿರಿಯಾಡ್ಯೇತರ ಊರಿಯುತ ವಿರೋಧಿ ಜೌಷಧವಾಗಿರುವ ಇಬುಪ್ರೊಫೆನ್ ಮತ್ತು ಆಸ್ಪಿರಿನ್ ಅನ್ನು ತಪ್ಪಿಸಬೇಕು ಇದು ರಕ್ತಸ್ರಾವವನ್ನು ಹೆಚ್ಚಿಸುತ್ತದೆ.
ಪಪ್ಪಾಯ ಸಹಾಯಕವೇ? :ಪ್ರತಿ ವರ್ಷ, ಡೆಂಘೀ ಪ್ರಕರಣಗಳು ಹೆಚ್ಚಾದಂತೆ ಪಪ್ಪಾಯ ಎಲೆಗಳ ಬೇಡಿಕೆ ಕೂಡ ಹೆಚ್ಚುತ್ತದೆ. ಪಪ್ಪಾಯ ಎಲೆಗಳು ಡೆಂಗ್ಯೂ ರೋಗಿಗಳಲ್ಲಿ ಪ್ಲೆಟ್ಲೆಟ್ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗುತ್ತದೆ ಎಂದು ನಂಬಲಾಗಿದೆ. ಡೆಂಘೀ ರೋಗಿಗಳ ಪಪ್ಪಾಯ ಎಲೆಗಳನ್ನು ಸೇವಿಸಬಾರದು ಎಂಬುದಕ್ಕೆ ಅನೇಕ ಕಾರಣ ಇದೆ. ಪಪ್ಪಾಯ ಎಲೆಗಳು ಡೆಂಘೀ ರೋಗಿಗಳ ಔಷಧಿಯ ಪ್ರಯೋಜನ ನೀಡುತ್ತದೆ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಆಧಾರಗಳಿಲ್ಲ. ಕೆಲವು ಅಧ್ಯಯನಗಳು ಸಂಭಾವ್ಯ ಪರಿಣಾಮಗಳನ್ನು ಸೂಚಿಸಿದರೆ, ಹೆಚ್ಚಿನ ಸಂಶೋಧನೆಯು ಸೀಮಿತವಾಗಿದೆ.ದೃಢವಾದ ಕ್ಲಿನಿಕಲ್ ಪ್ರಯೋಗಗಳನ್ನು ಹೊಂದಿಲ್ಲ ಎಂದು ನವದೆಹಲಿಯ ಡಾ ರಾಕೇಶ್ ಕುಮಾರ್ ತಿಳಿಸಿದ್ದಾರೆ.