ಶರೀರದ ಮೇಲಾಗುವ ದದ್ದುಗಳು, ಶರೀರ ದ್ರವಗಳು (ದ್ರವ, ಕೀವು, ಅಥವಾ ಗಾಯಗಳಿಂದ ಸೋರುವ ರಕ್ತ), ಮತ್ತು ಮಾಗುತ್ತಿರುವ ಗಾಯಗಳು ಬಹುತೇಕ ಸಾಂಕ್ರಾಮಿಕವಾಗಿರುತ್ತವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.
ವೈರಸ್ಗಳು ಉಗುಳಿನ ಮೂಲಕವೂ ಹರಡಬಹುದಾಗಿದ್ದರಿಂದ ಹುಣ್ಣು ಮತ್ತು ಗಾಯಗಳು ಸಹ ಸಾಂಕ್ರಾಮಿಕವಾಗಬಹುದು. ಸೋಂಕಿತ ವ್ಯಕ್ತಿಯೊಂದಿಗೆ ಸಂಪರ್ಕದಲ್ಲಿರುವ ವಸ್ತುಗಳು - ಉದಾಹರಣೆಗೆ ಬಟ್ಟೆ, ಹಾಸಿಗೆ, ಟವೆಲ್‌ಗಳು - ಅಥವಾ ಆಹಾರ ಸೇವಿಸಲು ಉಪಯೋಗಿಸುವ ಪಾತ್ರೆಗಳಂಥ ವಸ್ತುಗಳು ಸಹ ಸೋಂಕಿನ ಮೂಲವಾಗಿರಬಹುದು.
ದೈಹಿಕ ಸಂಪರ್ಕದ ಮೂಲಕ ರೋಗಗಳು ಹರಡುವುದು ತಿಳಿದಿರುವುದರಿಂದ, ಲೈಂಗಿಕವಾಗಿ ಹರಡುವ ರೋಗಗಳು ಲೈಂಗಿಕ ಜೀವನದ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದು ಎಂಬ ಬಗ್ಗೆ ಈಗ ಸಂಶೋಧನೆಗಳು ನಡೆದಿವೆ.
ವ್ಯಕ್ತಿಯೊಬ್ಬರಿಗೆ ಯಾವುದೇ ರೋಗವಿದ್ದು, ಅದರ ಲಕ್ಷಣಗಳು ಕಾಣಿಸಿಕೊಂಡಿದ್ದರೆ ಅಂಥ ರೋಗ ಸಾಂಕ್ರಾಮಿಕವೂ ಆಗಿರಬಹುದು (ಸಾಮಾನ್ಯವಾಗಿ ಮೊದಲ ಎರಡರಿಂದ ನಾಲ್ಕು ವಾರಗಳು). ಇನ್ನು ರೋಗಲಕ್ಷಣಗಳಿಲ್ಲದ ವ್ಯಕ್ತಿಗಳಿಂದ ಸೋಂಕು ಹರಡುತ್ತದಾ ಅಥವಾ ಇಲ್ಲವಾ ಎಂಬುದು ಸ್ಪಷ್ಟವಾಗಿಲ್ಲ.
ಲೈಂಗಿಕ ಸಂಪರ್ಕದಿಂದ ಮಂಕಿಪಾಕ್ಸ್ ಹರಡುವಿಕೆ:ಸರ್ ಗಂಗಾ ರಾಮ್ ಆಸ್ಪತ್ರೆಯ ತೀವ್ರ ರೋಗ ತಜ್ಞ ಮತ್ತು ಹಿರಿಯ ಸಮಾಲೋಚಕರಾದ ಡಾ. ಧೀರೇನ್ ಗುಪ್ತಾ ಹೇಳುವ ಪ್ರಕಾರ, "ಲೈಂಗಿಕ ಸಂಪರ್ಕದ ಸಮಯದಲ್ಲಿ ಮಂಕಿಪಾಕ್ಸ್ ಹರಡುವಿಕೆಯ ಸಾಧ್ಯತೆಗಳು ತುಂಬಾ ಹೆಚ್ಚಾಗುತ್ತವೆ.
ಮುಖಾಮುಖಿ ಸಂಪರ್ಕ ಈ ರೋಗ ತರಬಹುದು:ಮಂಕಿಪಾಕ್ಸ್ ಹೊಂದಿರುವ ವ್ಯಕ್ತಿಯೊಂದಿಗೆ ಮೌಖಿಕ ಸೆಕ್ಸ್, ಗುದ ಮತ್ತು ಯೋನಿ ಸಂಭೋಗ ಅಥವಾ ಜನನಾಂಗಗಳನ್ನು (ಶಿಶ್ನ, ವೃಷಣಗಳು ಮತ್ತು ಯೋನಿ) ಅಥವಾ ಆ ವ್ಯಕ್ತಿಯ ಗುದದ್ವಾರಗಳನ್ನು ಮುಟ್ಟುವುದರಿಂದ ಸೋಂಕು ಇನ್ನೊಬ್ಬರಿಗೆ ಹರಡಬಹುದು. ತಬ್ಬಿಕೊಳ್ಳುವುದು, ಮಸಾಜ್ ಮಾಡುವುದು, ಚುಂಬಿಸುವುದು ಮತ್ತು ದೀರ್ಘಾವಧಿಯವರೆಗೆ ಮುಖಾಮುಖಿ ಸಂಪರ್ಕವು ವೈರಸ್‌ನ ಹರಡುವಿಕೆಗೆ ಕಾರಣವಾಗಬಹುದು ಎಂದು ಡಾ ಗುಪ್ತಾ ಹೇಳಿದರು.
ಸೆಕ್ಸ್ ಮಾಡುವ ಸಮಯದಲ್ಲಿ ಮಂಕಿಪಾಕ್ಸ್ ಹೊಂದಿರುವ ವ್ಯಕ್ತಿಯು ಬಳಸಿದ ಸೋಂಕು ರಹಿತವಾಗಿಸದ ಹಾಸಿಗೆ, ಟವೆಲ್ ಮತ್ತು ಲೈಂಗಿಕ ಆಟಿಕೆಗಳು, ಬಟ್ಟೆಗಳು ಮತ್ತು ಇತರ ವಸ್ತುಗಳನ್ನು ಸಂಪರ್ಕ ಮಾಡುವುದರಿಂದಲೂ ಒಬ್ಬ ವ್ಯಕ್ತಿಯು ರೋಗಕ್ಕೆ ತುತ್ತಾಗಬಹುದು. ಒಬ್ಬರಿಗಿಂತ ಹೆಚ್ಚು ಸೆಕ್ಸ್ ಪಾರ್ಟನರ್ಗಳನ್ನು ಹೊಂದಿರುವರಿಗೆ ಕೂಡ ಮಂಕಿಪಾಕ್ಸ್ ಹರಡುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ.