ಕರ್ನಾಟಕ

karnataka

ETV Bharat / sukhibhava

ಮಾನವರು ನಿಜವಾಗಿಯೂ 150 ವರ್ಷಗಳ ಕಾಲ ಬದುಕಬಹುದೇ...? ಅಧ್ಯಯನ ಏನು ಹೇಳುತ್ತದೆ..? - ಮಾನವರ ಜೀವತಾವಧಿಯ ಅಧ್ಯಯನ

ನಮ್ಮಲ್ಲಿ ಹೆಚ್ಚಿನವರು ಸುಮಾರು 80 ವರ್ಷ ವಯಸ್ಸಿನವರೆಗೆ ಬದುಕಬೇಕೆಂದು ನಿರೀಕ್ಷಿಸುತ್ತಾರೆ, ಆದರೆ, ಕೆಲವರು ಅದನ್ನು ಮೀರಿ ನೂರು ವರ್ಷಗಳ ಕಾಲ ಬದುಕುತ್ತಾರೆ. ಓಕಿನಾವಾ, ಜಪಾನ್ ಮತ್ತು ಇಟಲಿ ಮತ್ತು ಸಾರ್ಡಿನಿಯಾದಂತಹ ಸ್ಥಳಗಳಲ್ಲಿ, ತಮ್ಮ 100 ನೇ ಹುಟ್ಟುಹಬ್ಬವನ್ನು ಆಚರಿಸಿದ ಅನೇಕ ಜನರಿದ್ದಾರೆ.

can-humans-really-live-for-150-years-here-is-what-the-study-says
can-humans-really-live-for-150-years-here-is-what-the-study-says

By

Published : Jun 10, 2021, 7:59 PM IST

ಹೈದರಾಬಾದ್: ಅತೀ ಹೆಚ್ಚು ವರ್ಷ ಬದುಕಿದವರ ಇತಿಹಾಸ ತೆಗೆದು ನೋಡಿದಾಗ, 122 ವರ್ಷಗಳ ಕಾಲ ಬದುಕಿದ್ದ ಜೀನ್ ಕ್ಲಮೆಂಟ್ ಎಂಬ ಫ್ರೆಂಚ್ ಮಹಿಳೆಯ ಹೆಸರು ಬರುತ್ತದೆ. ಆಕೆ 1875ರಲ್ಲಿ ಜನಿಸಿದ್ದಳು. ಆ ಸಂದರ್ಭದದಲ್ಲಿ ಒಬ್ಬ ವ್ಯಕ್ತಿಯ ಸಾಮಾನ್ಯ ಜೀವಿತಾವಧಿ (life expectancy) ಕೇವಲ 43 ವರ್ಷಗಳಾಗಿದ್ದವು.

ಜನರು ಶತಮಾನಗಳಿಂದ ಕೇಳುತ್ತಿರುವ ಪ್ರಶ್ನೆಯೆಂದರೆ, ಮಾನವರು ನಿಜವಾಗಿಯೂ ಎಷ್ಟು ಕಾಲ ಬದುಕಬಹುದು? ಸರಾಸರಿ ಜೀವಿತಾವಧಿಯನ್ನು (ಒಬ್ಬ ವ್ಯಕ್ತಿಯು ಎಷ್ಟು ವರ್ಷ ಬದುಕಬೇಕೆಂದು ನಿರೀಕ್ಷಿಸಲಾದ ಅವಧಿ) ಲೆಕ್ಕಾಚಾರ ಮಾಡುವುದು ಸುಲಭವಾದರೂ, ಗರಿಷ್ಠ ಜೀವಿತಾವಧಿ (ಮನುಷ್ಯನು ಎಷ್ಟು ಕಾಲ ಬದುಕಬಹುದು) ಅಂದಾಜು ಮಾಡುವುದು ತುಂಬಾ ಕಷ್ಟ. ಹಿಂದಿನ ಕೆಲವು ಅಧ್ಯಯನಗಳು ಈ ವಯಸ್ಸನ್ನು 140 ವರ್ಷಗಳಿಗೆ ಹತ್ತಿರ ಎಂದು ಹೇಳಿಕೊಂಡಿವೆ. ಆದರೆ ಇತ್ತೀಚಿನ ಅಧ್ಯಯನವು ಮಾನವ ಜೀವನದ ಗರಿಷ್ಠ ಜೀವಿತಾವಧಿ 150 ವರ್ಷಗಳಿಗೆ ಹತ್ತಿರವಾಗಿದೆ ಎಂದು ಹೇಳಿದೆ.

ಜೀವಿತಾವಧಿಯ ಲೆಕ್ಕಾಚಾರ:

ಸರಾಸರಿ ಜೀವಿತಾವಧಿ ಮತ್ತು ಗರಿಷ್ಠ ಜೀವಿತಾವಧಿಯನ್ನು ಲೆಕ್ಕಾಚಾರ ಮಾಡಲು ಅತ್ಯಂತ ಹಳೆಯ ಮತ್ತು ಇನ್ನೂ ವ್ಯಾಪಕವಾಗಿ ಬಳಸಲಾಗುವ ವಿಧಾನವೆಂದರೆ ಗೊಂಪೆರ್ಟ್ಜ್ ಸಮೀಕರಣ. ಈ ವಿಷಯದಲ್ಲಿ ಮೊದಲ ಮೌಲ್ಯಮಾಪನವು 19ನೇ ಶತಮಾನದಲ್ಲಿ ನಡೆದಿದ್ದು, ಒಂದು ಕಾಯಿಲೆಯಿಂದ ಮಾನವನ ಮರಣವು ಕಾಲಾನಂತರದಲ್ಲಿ ವೇಗವಾಗಿ ಹೆಚ್ಚಾಗುತ್ತದೆ ಎಂದು ತಿಳಿದು ಬಂದಿದೆ. ಅಂದರೆ ಕ್ಯಾನ್ಸರ್, ಹೃದ್ರೋಗಗಳು ಮತ್ತು ಇತರ ಸೋಂಕುಗಳಿಗೆ ವ್ಯಕ್ತಿ ಬಲಿಯಾಗುವ ಸಾಧ್ಯತೆಗಳು ಪ್ರತಿ ಎಂಟರಿಂದ ಒಂಬತ್ತು ವರ್ಷಗಳಿಗೊಮ್ಮೆ ದ್ವಿಗುಣಗೊಳ್ಳುತ್ತವೆ.

ವ್ಯಕ್ತಿಯ ಜೀವಿತಾವಧಿಯಲ್ಲಿ ವಿವಿಧ ಅಂಶಗಳು ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳಲು ಸೂತ್ರ ಬದಲಾಯಿಸಲು ಹಲವಾರು ಮಾರ್ಗಗಳಿವೆ. ಆರೋಗ್ಯ ವಿಮಾ ಕಂತುಗಳನ್ನು ಲೆಕ್ಕಹಾಕಲು ಗೊಂಪೆರ್ಟ್ಜ್ ಲೆಕ್ಕಾಚಾರ ಸಹ ಬಳಸಲಾಗುತ್ತದೆ. ಅದಕ್ಕಾಗಿಯೇ ನೀವು ಎಷ್ಟು ಸಮಯದವರೆಗೆ ಬದುಕಬಹುದು ಎಂದು ಅಂದಾಜು ಮಾಡಲು ವಿಮಾ ಕಂಪನಿಗಳು ನೀವು ಧೂಮಪಾನ ಮಾಡುತ್ತೀರಾ, ನಿಮ್ಮ ವೈವಾಹಿಕ ಸ್ಥಿತಿ ಮತ್ತು ಇತರ ವೈಯಕ್ತಿಕ ವಿವರಗಳನ್ನು ತಿಳಿದುಕೊಳ್ಳುವ ಕುತೂಹಲವನ್ನು ಹೊಂದಿವೆ.

ನಾವು ಎಷ್ಟು ದಿನ ಬದುಕುತ್ತೇವೆ ಎಂಬುದನ್ನು ಕಂಡು ಹಿಡಿಯುವ ಒಂದು ಮಾರ್ಗವೆಂದರೆ, ವಯಸ್ಸಾದಂತೆ, ನಮ್ಮ ಅಂಗಗಳು ಕಾರ್ಯನಿರ್ವಹಣೆಯ ವಿಷಯದಲ್ಲಿ ಹೇಗೆ ಕುಸಿಯುತ್ತವೆ ಎಂದು ತಿಳಿಯುವುದು. ನಮ್ಮ ಅಂಗಗಳ ಕ್ರಿಯಾತ್ಮಕತೆಯ ಕುಸಿತವನ್ನು ನಮ್ಮ ವಯಸ್ಸಿಗೆ ಅನುಗುಣವಾಗಿ ವಿವರಿಸಲಾಗುತ್ತದೆ. ಉದಾಹರಣೆಗೆ, ನಾವು ವ್ಯಾಯಾಮ ಮಾಡುವಾಗ ಮತ್ತು ಇತರ ಚಟುವಟಿಕೆಗಳನ್ನು ನಿರ್ವಹಿಸುವಾಗ ನಾವು ಬಳಸುವ ಆಮ್ಲಜನಕದ ಪ್ರಮಾಣವು ವಯಸ್ಸಾದಂತೆ ಕುಸಿಯುತ್ತದೆ. ಹೆಚ್ಚಿನ ಲೆಕ್ಕಾಚಾರಗಳು ವ್ಯಕ್ತಿಯ ಅಂಗಗಳು ಸರಾಸರಿ 120 ವರ್ಷ ವಯಸ್ಸಿನವರೆಗೆ ಕಾರ್ಯನಿರ್ವಹಿಸುತ್ತವೆ ಎಂದು ಸೂಚಿಸುತ್ತದೆ.

ಆದರೆ, ಸಿಂಗಾಪುರ, ರಷ್ಯಾ ಮತ್ತು ಯುಎಸ್ಎ ಸಂಶೋಧಕರು ವಿಭಿನ್ನ ವಿಧಾನವನ್ನು ಬಳಸಿಕೊಂಡು ಮನುಷ್ಯನ ಗರಿಷ್ಠ ಜೀವಿತಾವಧಿಯನ್ನು ಅಂದಾಜು ಮಾಡಿದ್ದಾರೆ. ಕಂಪ್ಯೂಟರ್ ಮಾದರಿಯನ್ನು ಬಳಸಿಕೊಂಡು, ಅವರು ಗರಿಷ್ಠ ಮಾನವ ಜೀವಿತಾವಧಿಯು ಸುಮಾರು 150 ವರ್ಷಗಳು ಎಂದು ಅಂದಾಜಿಸಿದ್ದಾರೆ.

150 ವರ್ಷಗಳ ಕಾಲ ಜೀವನ!

ಸ್ವಾಭಾವಿಕವಾಗಿ, ನೀವು ರೋಗದಿಂದ ಎಷ್ಟು ಬೇಗನೆ ಮತ್ತು ಸಂಪೂರ್ಣವಾಗಿ ಚೇತರಿಸಿಕೊಳ್ಳುತ್ತೀರಿ ಮತ್ತು ನಿಮ್ಮ ಸಾವಿನ ಸಾಧ್ಯತೆಯ ನಡುವೆ ಪರಸ್ಪರ ಸಂಬಂಧವಿದೆ. ಇದು ನಿಮ್ಮ ಸಾಮಾನ್ಯ ದೇಹದ ಸಮತೋಲನವನ್ನು ಕಾಪಾಡುವ ಅಳತೆಯಾಗಿದೆ. ವಾಸ್ತವವಾಗಿ, ವಯಸ್ಸಿನೊಂದಿಗೆ, ಈ ಸಮತೋಲನವನ್ನು ಕಾಯ್ದುಕೊಳ್ಳುವ ಸಾಮರ್ಥ್ಯವು ಕಡಿಮೆಯಾಗುತ್ತದೆ. ಸಾಮಾನ್ಯವಾಗಿ, ವಯಸ್ಸಾದ ವಯಸ್ಕರಿಗೆ ಹೋಲಿಸಿದರೆ ಕಿರಿಯ ವ್ಯಕ್ತಿಯು ರೋಗದಿಂದ ವೇಗವಾಗಿ ಚೇತರಿಸಿಕೊಳ್ಳುವ ಸಾಧ್ಯತೆಯಿದೆ.

ಇತ್ತೀಚಿನ ಅಧ್ಯಯನದ ಪ್ರಕಾರ, ಗರಿಷ್ಠ ಜೀವಿತಾವಧಿಗೆ ನಿಮಗೆ ಕೇವಲ ಮೂರು ಪ್ರಮುಖ ವಿಷಯಗಳು ಬೇಕಾಗುತ್ತವೆ. ಮೊದಲನೆಯದು ಉತ್ತಮ ಜೀನ್, ಇದು 100 ವರ್ಷಗಳನ್ನು ಮೀರಿ ಬದುಕುವ ಉತ್ತಮ ಭರವಸೆ ನೀಡುತ್ತದೆ. ಎರಡನೆಯದು ಅತ್ಯುತ್ತಮ ಆಹಾರ ಮತ್ತು ವ್ಯಾಯಾಮದ ಯೋಜನೆಯಾಗಿದ್ದು, ಇದು ನಿಮ್ಮ ಜೀವನಕ್ಕೆ 15 ವರ್ಷಗಳನ್ನು ಸೇರಿಸಬಹುದು. ಅಂತಿಮವಾಗಿ, ಮೂರನೆಯದು ಔಷಧಗಳು ಮತ್ತು ಇತರ ವೈದ್ಯಕೀಯ ಚಿಕಿತ್ಸೆಗಳ ಕ್ಷೇತ್ರದಲ್ಲಿ ಪ್ರಗತಿಯಾಗಿದ್ದು, ಇದು ಜೀವಿತಾವಧಿಯನ್ನು ಹೆಚ್ಚಿಸುತ್ತದೆ ಮತ್ತು ಆರೋಗ್ಯವಾಗಿರಿಸುತ್ತದೆ.

ಪ್ರಸ್ತುತ, ಸಾಮಾನ್ಯ ಮಾನವರ ಆರೋಗ್ಯಕರ ಜೀವಿತಾವಧಿಯನ್ನು 15-20ರಷ್ಟು ಹೆಚ್ಚಿಸುವುದು ಬಹಳ ಕಷ್ಟ. ಏಕೆಂದರೆ ವಯಸ್ಸಾದ ಜೀವಶಾಸ್ತ್ರದ ಬಗ್ಗೆ ಅಧ್ಯಯನ ಮಾಡಲು ಇನ್ನೂ ಹೆಚ್ಚಿನವುಗಳಿವೆ. ಆದರೆ ಪ್ರಗತಿಯ ಪ್ರಸ್ತುತ ವೇಗವನ್ನು ಗಮನಿಸಿದರೆ, ಮುಂದಿನ ದಿನಗಳಲ್ಲಿ ಜೀವಿತಾವಧಿಯಲ್ಲಿ ಹೆಚ್ಚಳವನ್ನು ನಾವು ವಿಶ್ವಾಸದಿಂದ ನಿರೀಕ್ಷಿಸಬಹುದು.

ABOUT THE AUTHOR

...view details