ಪಾಟ್ ಮಾರಿಗೋಲ್ಡ್ ಎಂದರೆ ಕೇವಲ ಅದೊಂದು ಹೂವು ಅಂತಾ ಅಂದುಕೊಡಿರೋರೆ ಹೆಚ್ಚು. ಹೌದು ಅದು ಹೂವೇ ಆದರೆ, ಅದರ ಗುಣಲಕ್ಷಣಗಳ ವಿಷಯಕ್ಕೆ ಬಂದರೆ ಅದೊಂದು ಔಷದ. ಈ ಕಾರಣಕ್ಕೆ ಇದು ಮೌಲ್ಯಯುಳ್ಳ ಬೇಡಿಕೆಯುಕ್ತ ಹೂವು. ಬನ್ನಿ ಇದರ ಬಗ್ಗೆ ತಿಳಿಯೋಣ.
ಪಾಟ್ ಮಾರಿಗೋಲ್ಡ್ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಕ್ಯಾಲೆಡುಲ ಅಫಿಷಿನಾಲಿಸ್ (Calendula officinalis) ಹೂಬಿಡುವ ಸಸ್ಯವಾಗಿದೆ. ಕ್ಯಾಲೆಡುಲವು ಮನೆಯ ತೋಟಗಳಲ್ಲಿ ಜನಪ್ರಿಯ ಅಲಂಕಾರಿಕ ಸಸ್ಯವಾಗಿದೆ. ಅದ್ಭುತವಾದ ಆಕರ್ಷಣೆಯ ಎಳೆಗಳು ಈ ಹೂವಿನಲ್ಲಿದೆ. ಉತ್ತಮವಾದ ಗಿಡಮೂಲಿಕೆಗಳ ಸುಗಂಧ ದ್ರವ್ಯಗಳನ್ನು ಇದರಿಂದ ಹೆಚ್ಚಾಗಿ ತಯಾರಿಸಲಾಗುತ್ತದೆ. ಅಷ್ಟೆ ಅಲ್ಲ ಹೂವಿನ ಎಲೆಗಳು, ದಳಗಳು ಮತ್ತು ಬೀಜಗಳಿಂದ ತಯಾರಿಸಿದ ಸಾರವನ್ನು ಆಯುರ್ವೇದ ಮತ್ತು ಚೈನೀಸ್ ಔಷಧಗಳಲ್ಲಿ ದೀರ್ಘಕಾಲದಿಂದ ಬಳಸಿಕೊಂಡು ಬರಲಾಗುತ್ತಿದೆ.
ಇನ್ನು ಪಾಶ್ಚಿಮಾತ್ಯ ವೈದ್ಯಕೀಯದಲ್ಲಿ ಈ ಹೂವನ್ನು ಹುಣ್ಣುಗಳನ್ನು ಗುಣಪಡಿಸಲು, ಸ್ನಾಯು ಸೆಳೆತ ತಡೆಗಟ್ಟಲು ಮತ್ತು ಜ್ವರ ನಿಯಂತ್ರಣ ಮಾಡಲು ಬಳಸಲಾಗುತ್ತದೆ. ಇದು ಸೂಕ್ಷ್ಮ ಚರ್ಮಕ್ಕೆ ವಿಶೇಷವಾಗಿ ತುಂಬಾ ಅನುಕೂಲಕರ. ಭಾರತದಲ್ಲಿನ ಪ್ರಮುಖ ತ್ವಚೆಯ ಬ್ರ್ಯಾಂಡ್‌ನ ಶೈಕ್ಷಣಿಕ ಘಟಕದ ವ್ಯವಸ್ಥಾಪಕ ರಜತ್ ಮಾಥುರ್ ಅವರು ಈ ಹೂವಿನಲ್ಲಿರುವ ಕೆಲವು ಪ್ರಮುಖ ಪ್ರಯೋಜನಗಳನ್ನು ತಿಳಿಸಿದ್ದಾರೆ.
ಉರಿಯೂತಕ್ಕೆ ವಿದಾಯ ಹೇಳಿ:ಉರಿಯೂತವು ಚರ್ಮಕ್ಕೆ ಸಾಕಷ್ಟು ಹಾನಿಯನ್ನುಂಟು ಮಾಡುತ್ತದೆ. ಈ ಹೂವು ಉರಿಯೂತದ ಮತ್ತು ಬ್ಯಾಕ್ಟೀರಿಯಾ ವಿರೋಧಿ ಪರಿಣಾಮಗಳನ್ನು ಹೊಂದಿರುವ ನೈಸರ್ಗಿಕ ಔಷಧವಾಗಿದೆ. ಇದು ಮೊಡವೆ, ಬಿಸಿಲು, ರೊಸಾಸಿಯಾ, ಸೋರಿಯಾಸಿಸ್, ಎಸ್ಜಿಮಾ, ಅಥವಾ ಕಾಲಜನ್ ಸ್ಥಗಿತದಿಂದ ಉಂಟಾಗುವ ಚರ್ಮದ ಕಿರಿಕಿರಿಯನ್ನು ನಿವಾರಿಸುತ್ತದೆ. ಕ್ಯಾಲೆಡುಲದಲ್ಲಿ ಕಂಡುಬರುವ ಫ್ಲೇವನಾಯ್ಡ್‌ಗಳು, ಸಪೋನಿನ್‌ಗಳು ಮತ್ತು ಟ್ರೈಟರ್‌ಪೆನಾಯ್ಡ್‌ಗಳು ಉರಿಯೂತದ ನಿಯಂತ್ರಣ ಗುಣಲಕ್ಷಣಗಳನ್ನು ಹೊಂದಿವೆ.
ಚರ್ಮದ ಕೆರೆತಕ್ಕೆ ರಾಮಬಾಣ :ಸೂಕ್ಷ್ಮ, ಎಣ್ಣೆಯುಕ್ತ ಅಥವಾ ಮೊಡವೆ ಪೀಡಿತ ಚರ್ಮಕ್ಕೆ ಕ್ಯಾಲೆಡುಲ ಉತ್ತಮ ಔಷಧವಾಗಿದೆ. ಇದು ಕಪ್ಪು ಕಲೆಗಳು, ಕಲೆಗಳು, ಮೊಡವೆಗಳು ಮತ್ತು ಮೊಡವೆ ಕಲೆಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ತುಂಬಾ ನಯವಾದ ಚರ್ಮ ರೂಪುಗೊಳ್ಳಲು ಸಹಕಾಯಕಾರಿ.
ಚರ್ಮದಲ್ಲಿ ತೇವಾಂಶತೆ: ತ್ವಚೆಯನ್ನು ಹೈಡ್ರೀಕರಿಸುವಲ್ಲಿ ವಿಫಲವಾದರೆ ತುರಿಕೆಯಿಂದ ಸುಕ್ಕುಗಳು ಪ್ರಾರಂಭವಾಗುತ್ತವೆ ಹಾಗೆ ವಿವಿಧ ಚರ್ಮದ ಸಮಸ್ಯೆಗಳು ಸಹ ಉಂಟಾಗಬಹುದು. ಆದರೆ, ಈ ಹೂವು ಚರ್ಮವನ್ನು ತೇವಗೊಳಿಸಲು ಉತ್ತಮ ಮಾರ್ಗವಾಗಿದೆ. ಕ್ಯಾಲೆಡುಲ ಎಣ್ಣೆಯು ಇದಕ್ಕೆ ಹೆಚ್ಚು ಪರಿಣಾಮಕಾರಿ. ಇದು ತ್ವರಿತವಾಗಿ ಚರ್ಮ ಪ್ರವೇಶಿಸಲು ಮತ್ತು ಆಳವಾದ ಪದರಗಳನ್ನು ಹೈಡ್ರೇಟ್ ಮಾಡಲು ಅನುಕೂಲಕರವಾಗಲಿದೆ.