ಹೈದರಾಬಾದ್: ನ್ಯಮೋನಿಯಾ ಸಾಮಾನ್ಯ ವೈರಸ್ನಿಂದ ಉಂಟಾಗುವ ಸೋಂಕು ಆಗಿದ್ದು, ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗುವ ಸಂಭವ 100ಕ್ಕೆ 100ರಷ್ಟು ಇದೆ. ನ್ಯುಮೋನಿಯಾ ಎಂಬುದು ಕೆಲವರಲ್ಲಿ ಮಾರಣಾಂತಿಕವಾಗಬಹುದು. ಇನ್ನು ಈ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾದಾಗ ದಿನಕ್ಕೆ ಎರಡು ಬಾರಿ ಹಲ್ಲುಜ್ಜುವುದರಿಂದ ನ್ಯುಮೋನಿಯಾ ಸಮಸ್ಯೆಯನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು ಎನ್ನುತ್ತದೆ ಹೊಸ ಅಧ್ಯಯನ.
ಅದರಲ್ಲೂ ಈ ರೀತಿ ಹಲ್ಲುಜ್ಜುವ ಕ್ರಮ ಅನುಸರಿಸುವುದರಿಂದ ನ್ಯುಮೋನಿಯಾದಿಂದ ತುರ್ತು ನಿಗಾ ಘಟಕದಲ್ಲಿ ದಾಖಲಾಗುವ ಮತ್ತು ಐಸಿಯಯುನಲ್ಲಿ ಸಾಯುವ ಅಪಾಯ ಕಡಿಮೆಯಾಗುತ್ತದೆ ಎಂದು ತಿಳಿಸಿದೆ. ಇನ್ನು ಈ ಪರಿಹಾರ ಮಾರ್ಗವೂ ವೆಂಟಿಲೇಟರ್ಗೆ ಒಳಗಾದವರಿಗಿಂತ ಹೊರಗಿನಿಂದ ಆಮ್ಲಜನಕ ತೆಗೆದುಕೊಳ್ಳುತ್ತಿರುವವರಿಗೆ ಪ್ರಯೋಜನವಾಗಲಿದೆ. ನ್ಯುಮೋನಿಯಾಗೂ ಹಲ್ಲುಜ್ಜುವುದಕ್ಕೆ ನಂಟೇನು. ಇದು ಹೇಗೆ ನ್ಯುಮೋನಿಯ ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತದೆ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.
ನ್ಯುಮೋನಿಯಾ ತಡೆಗಟ್ಟುವ ಸುಲಭ ಉಪಾಯ:ನ್ಯುಮೋನಿಯಾವೂ ಸಾಮಾನ್ಯ ಆದರೂ ಅದು ಶ್ವಾಸಕೋಶ ಸೋಂಕು ಆಗಿದೆ. ಈಗಾಗಲೇ ಅನಾರೋಗ್ಯದಿಂದ ಬಳಲುತ್ತಿರುವವರಲ್ಲಿ ಇದು ಮತ್ತಷ್ಟು ಸಮಸ್ಯೆಗೆ ಕಾರಣವಾಗುತ್ತದೆ. ಬಾಯಿಯಲ್ಲಿನ ಬ್ಯಾಕ್ಟಿರೀಯಾಗಳಿಂದಾಗಿ ಅನೇಕ ಬಾರಿ ಆಸ್ಪತ್ರೆಗೆ ದಾಖಲಾಗುವ ಪ್ರಕರಣಗಳು ಹೆಚ್ಚುತ್ತದೆ. ಬಾಯಲ್ಲಿ ಇರುವ ನ್ಯುಮೋನಿಯಾ ಬ್ಯಾಕ್ಟೀರಿಯಾಗಳು ಸಲೈವಾ ಜೊತೆಗೆ ಅಚಾನಕ್ ಆಗಿ ಉಸಿರಾಡುವ ಮೂಲಕ ಶ್ವಾಸಕೋಶ ಪ್ರವೇಶ ಮಾಡುತ್ತದೆ. ಅಲ್ಲಿ ಈ ವೈರಸ್ಗಳು ಹರಡಿ ಉಸಿರಾಟದ ಮೇಲೆ ಪರಿಣಾಮ ಬೀರುತ್ತದೆ. ಇದೇ ಕಾರಣ ಹಲ್ಲುಜ್ಜುವುದರಿಂದ ಅನೇಕ ರೋಗಿಗಳಲ್ಲಿ ಈ ಸಮಸ್ಯೆಯನ್ನು ಗಮನಾರ್ಹವಾಗಿ ಕಡಿಮೆ ಮಾಡಿದೆ. 12 ವೆಂಟಿಲೇಟೆಡ್ ರೋಗಿಗಳಲ್ಲಿ ಒಂದು ಪ್ರಕರಣವನ್ನು ಹಲ್ಲುಜ್ಜುವ ಕ್ರಮದಿಂದ ಸೋಂಕಿನ ದರ ಕಡಿಮೆ ಮಾಡಬಹುದಾಗಿದೆ. ಈ ಸಂಶೋಧನೆಯ ಫಲಿತಾಂಶ ತಿಳಿಸುವಂತೆ ಹಲ್ಲುಜ್ಜುವ ಮೂಲಕ ನ್ಯೂಮೋನಿಯಾವನ್ನು ಕಡಿಮೆ ಮಾಡಬಹುದಾಗಿದೆ. ಸಂಶೋಧಕರು ಹೇಳುವಂತೆ ಇದು ಸಾವಿನ ದರವನ್ನು ಕೂಡ ಕಡಿಮೆ ಮಾಡುತ್ತದೆ. ನ್ಯುಮೋನಿಯಾವನ್ನು ತಡೆಗಟ್ಟುವ ಸುಲಭವ ಮತ್ತು ಕಡಿಮೆ ವೆಚ್ಚದ ಚಿಕಿತ್ಸೆ ಇದಾಗಿದೆ.
ಬೋಸ್ಟನ್ ಮಹಿಳಾ ಆಸ್ಪತ್ರೆ ಮತ್ತು ಬ್ರಿಗಮ್ ಸಂಶೋಧಕರು ನಡೆಸಿದ 15 ಕ್ಲಿನಿಯಲ್ ಟ್ರಯಲ್ನಲ್ಲಿ ದಿನಕ್ಕೆ ಎರಡು ಬಾರಿ ಹಲ್ಲುಜ್ಜುವ ಪ್ರಕ್ರಿಯೆ ಸಾಕಷ್ಟು ಪ್ರಯೋಜನ ನೀಡಿದೆ. 15 ಕ್ಲಿನಿಕಲ್ ಟ್ರಯಲ್ನಲ್ಲಿ 2,786 ರೋಗಿಗಳ ದತ್ತಾಂಶವನ್ನು ವಿಶ್ಲೇಷಿಸಲಾಗಿದೆ. ಈ ವೇಳೆ ದಿನಕ್ಕೆ ಎರಡು ಬಾರಿ ಹಲ್ಲುವುದರಿಂದ ಆಸ್ಪತ್ರೆಗೆ ದಾಖಲಾಗಿರುವ ರೋಗಿಗಳಲ್ಲಿ ನ್ಯುಮೋನಿಯಾ ದರವನ್ನು ಕಡಿಮೆ ಮಾಡಿದೆ ಎಂದು ಅಧ್ಯಯನ ಕಂಡುಕೊಂಡಿದೆ.
ಇದನ್ನೂ ಓದಿ: ಶ್ವಾಸಕೋಶ ಸಂಬಂಧಿ ಅನಾರೋಗ್ಯ ಹೆಚ್ಚಳ; ದೆಹಲಿ ಸರ್ಕಾರದಿಂದ ಮುನ್ನೆಚ್ಚರಿಕೆ ಕ್ರಮ