ಒಸ್ಕಾ: ಹಸಿರು ತರಕಾರಿಗಳು ಆರೋಗ್ಯಕ್ಕೆ ಒಳ್ಳೆಯದು. ಅವುಗಳನ್ನು ಹೆಚ್ಚು ಸೇವಿಸಬೇಕು ಎಂಬುದನ್ನು ನಮ್ಮ ಪೋಷಕರು ಹೇಳುವುದನ್ನು ಕೇಳಿರುತ್ತೇವೆ. ಅದು ಅನೇಕ ಬಾರಿ ಸತ್ಯ ಎಂಬುದು ವೈಜ್ಞಾನಿಕವಾಗಿಯೂ ಸಾಬೀತಾಗಿದೆ. ಅಂತಹದ್ದೇ ಸಂಶೋಧನೆ ಬ್ರೊಕೊಲಿ ತರಕಾರಿ ಮೇಲೂ ನಡೆದಿದೆ.
ಅಮೆರಿಕದ ಜನರಲ್ಲಿ ಹೆಚ್ಚಾಗಿ ಜನಪ್ರಿಯವಾಗಿರುವ ಈ ಬ್ರೊಕೊಲಿ ಇದೀಗ ಭಾರತದಲ್ಲೂ ನಿಧಾನವಾಗಿ ಪರಿಚಯವಾಗುತ್ತಿದೆ. ಬ್ರೊಕೊಲಿ ಮತ್ತು ಕ್ರಿಸಿಫೆರೊಸ್ ತರಕಾರಿ ಮಧುಮೇಹ ಮತ್ತು ಕ್ಯಾನ್ಸರ್ ಅಪಾಯ ಕಡಿಮೆ ಮಾಡುತ್ತದೆ. ಇದರಲ್ಲಿರು ಗ್ಲುಸಿನೊಲೇಟ್ಸ್ ಐಸೊಥಿಯೋಸೈನೇಟ್ನಂತಹ ಅರ್ಗೊನೊಸಲ್ಫರ್ ಸಂಯುಕ್ತಗಳು ಇದಕ್ಕೆ ಕಾರಣ. ಇದರಲ್ಲಿ ಆ್ಯಂಟಿಆಕ್ಸಿಡೆಂಟ್ ಸಕ್ರಿಯದಂತಹ ಜೀವಸಕ್ರಿಯದ ವಿವಿಧ ದರಗಳಿವೆ.
ಬ್ರೊಕೊಲಿಯ ಮೊಳಕೆಯಲ್ಲಿ ಪಾಲಿಸಲ್ಫೈಡ್ಸ್ ಅಂಶವಿದೆ. ಒಸ್ಕಾ ಮೊಟ್ರೋಪಾಲಿಟನ್ ಯುನಿವರ್ಸಿಟಿ ಗ್ರಾಜುಯೇಟ್ ಸ್ಕೂಲ್ ಆಫ್ ಸೈನ್ಸ್ನ ಪ್ರೊ.ಹಿದೆಶಿ ಇಹರಾ ಮತ್ತು ಅಸಿಸ್ಟೆಂಟ್ ಪ್ರೊ.ಶಿಂಗೊ ಕಾಸಮಟ್ಸು ತಂಡ ನಡೆಸಿದ ಅಧ್ಯಯನದಲ್ಲಿ ಬ್ರೊಕೊಲಿ ಮೊಳಕೆಯಾಗುವಾಗ ಮತ್ತು ಬೆಳೆಯುವಾಗ ಅದರಲ್ಲಿ ಪಾಲಿಸಲ್ಫೈಡ್ಸ್ ಗುಣಮಟ್ಟ ಪರಿಶೀಲಿಸಲಾಗಿದೆ.
ಬ್ರೊಕೊಲಿ ಮತ್ತು ಕ್ರಿಸಿಫೆರಸ್ ತರಕಾರಿ ಪಾಲಿಸಲ್ಫೈಡ್ಸ್ ಸಂಯುಕ್ತ ಹೊಂದಿದೆ ಎಂದು ಈ ಹಿಂದಿನ ಅಧ್ಯಯನವೂ ತಿಳಿಸಿದೆ. ಬ್ರೊಕೊಲಿ ಮೊಳಕೆಯಲ್ಲಿ ಅದರಲ್ಲೂ ಬೆಳವಣಿಗೆಯಲ್ಲಿ ಇದರ ಪ್ರಮಾಣ ಗಮನಾರ್ಹವಾಗಿದೆ. ಪಾಲಿಸಲ್ಫೈಡ್ಸ್‌ನ ಅದ್ಬುತ ಆಗರವೇ ಬ್ರೊಕೊಲಿ. ಇದರಲ್ಲಿನ ಪಾಲಿಸಲ್ಫೈಡ್ಸ್ ಅಂಶ ಒಟ್ಟಾರೆ ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿಯಾಗಿದೆ.