ನ್ಯೂಯಾರ್ಕ್: ಬ್ರೊಕೊಲಿ ಮೊಳಕೆ ಅಥವಾ ಕ್ರೂಸಿಫೆರಸ್ ತರಕಾರಿಗಳು ಸೇರಿದಂತೆ ಹೆಚ್ಚಿನ ಫೈಬರ್ ಆಹಾರಗಳು ಕರುಳಿನ ಉರಿಯೂತದ ರೋಗದ ಲಕ್ಷಣವನ್ನು ಕಡಿಮೆ ಮಾಡುವ ಮತ್ತು ರೋಗಿಗಳ ಜೀವನ ಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದು ಅಧ್ಯಯನವೊಂದು ತಿಳಿಸಿದೆ.
ಇಲಿಗಳ ಮೇಲೆ ನಡೆಸಿದ ಈ ಅಧ್ಯಯನವನ್ನು ಎಂಸಿಸ್ಟಂ ಜರ್ನಲ್ನಲ್ಲಿ ಪ್ರಕಟಿಸಲಾಗಿದೆ. ಈ ಅಧ್ಯಯನಕ್ಕೆ ಸಂಶೋಧಕರು ಇಂಟರ್ಲೆಕಿನ್-10-ನಾಕ್ಔಟ್ (ಐಎಲ್-10-ಕೆಒ) ಇಲಿಗಳ ಮಾದರಿಯನ್ನು ಅನುಸರಿಸಿದ್ದಾರೆ. ಇಲಿಗಳ ರೋಗ ನಿರೋಧಕ ಶಕ್ತಿಯನ್ನು ತನಿಖೆ ಮಾಡಲಾಗಿದ್ದು, ಬ್ರೊಕೊಲಿ ಮೊಳಕೆ ಆಹಾರಗಳು, ಕ್ರೋನ್ಸ್ ಪೀಡಿತ ಕರುಳಿನೊಳಗಿನ ಸೂಕ್ಷ್ಮಜೀವಿಗಳು ಹೇಗೆ ಸಂಯೋಜನೆ ನಡೆಸಿ, ಕರುಳಿನ ಉರಿಯೂತದ ಮೆಲೆ ಪರಿಣಾಮ ಬೀರುತ್ತದೆ ಎಂದು ವಿಶ್ಲೇಷಿಸಲಾಗಿದೆ.
ಮೈನೆ ಯುನಿವರ್ಸಿಟಿ ಸಂಶೋಧಕರು ಈ ಅಧ್ಯಯನ ನಡೆಸಿದ್ದು, ಇದಕ್ಕಾಗಿ ಐಎಲ್-10-ಕೆಒ ನಾಲ್ಕು ಇಲಿಗಳ ಗುಂಪಿನ ಮೇಲೆ ಸಂಶೋಧನೆ ನಡೆಸಲಾಗಿದೆ. ಮೊದಲ ಸುತ್ತಿನಲ್ಲಿ ಹದಿವಯಸ್ಸಿನ ಇಲಿಗಳು ಅಂದರೆ ನಾಲ್ಕು ವಾರದ ಇಲಿಗಳನ್ನು ಅಧ್ಯಯನ ನಡೆಸಲಾಗಿದೆ. ಈ ವೆಳೆ ಕಚ್ಚಾ ಬ್ರೊಕೊಲಿಯ ಮೊಳಕೆಗಳನ್ನು ನೀಡಲಾಗಿದೆ.
ಎರಡನೇ ಸುತ್ತಿನ ಅಧ್ಯಯನದಲ್ಲಿ ಇದೇ ರೀತಿ ಎರಡು ಡಯಟ್ ಗ್ರೂಪ್ ಹೊಂದಲಾಗಿದೆ. ಇಲ್ಲಿ ಏಳು ವಾರದ ಇಲಿಗಳನ್ನು ಪರೀಕ್ಷೆ ಮಾಡಲಾಗಿದೆ. ಈ ಇಲಿಗಳಿಗೆ ಏಳು ದಿನಗಳ ಕಾಲ ತಿನ್ನಿಸಲಾಗಿದ್ದು, ಅದರ ಲಕ್ಷಣಗಳನ್ನು ಗಮನಿಸಲಾಗಿದೆ.