ಇಸ್ತಾನ್ಬುಲ್: ಸ್ಮಾರ್ಟ್ಫೋನ್/ ಟ್ಯಾಬ್ಲೆಟ್ಗಳಿಂದ ಹೊರಹೊಮ್ಮುವ ನೀಲಿ ಬೆಳಕಿಗೆ ಹೆಚ್ಚು ಮೈಯೊಡ್ಡಿಕೊಳ್ಳುವುದರಿಂದ ಗಂಡು ಮಕ್ಕಳು ಅವಧಿಗೆ ಮೊದಲೇ ಪ್ರೌಢಾವಸ್ಥೆ ತಲುಪುತ್ತಾರೆ ಎಂದು ಹೊಸ ಅಧ್ಯಯನ ತಿಳಿಸಿದೆ. ಇಲಿಗಳ ಮೇಲೆ ಈ ಅಧ್ಯಯನ ನಡೆಸಲಾಗಿದೆ. ನೆದರ್ಲ್ಯಾಂಡ್ನ ದಿ ಹೇಗ್‌ನಲ್ಲಿ ನಡೆದ 61ನೇ ವಾರ್ಷಿಕ ಯುರೋಪಿಯನ್ ಸೊಸೈಟಿ ಫಾರ್ ಪಿಡಿಯಾಟ್ರಿಕ್ ಎಂಡೊಕ್ರಿನೊಲೊಜಿ ಸಭೆಯಲ್ಲಿ ಸಂಶೋಧನಾ ವರದಿ ಮಂಡಿಸಲಾಗಿದೆ. ನೀಲಿ ಬೆಳಕುಗಳು ಆರಂಭಿಕ ಪ್ರೌಢಾವಸ್ಥೆ ಮತ್ತು ವೃಷಣ ಅಂಗಾಂಶದ ಮೇಲೆ ಗುರುತರ ಪ್ರಭಾವ ಬೀರುತ್ತದೆ ಎಂದು ಅಧ್ಯಯನ ಹೇಳುತ್ತದೆ.
ಅವಧಿಗೂ ಮೊದಲೇ ಮಕ್ಕಳು ಪ್ರೌಢಾವಸ್ಥೆ ತಲುಪುವುದಕ್ಕೆ ಸ್ಪಷ್ಟ ಕಾರಣಗಳಿಲ್ಲ. ಕೆಲವು ವೇಳೆ ಆನುವಂಶಿಕ/ ಟ್ಯೂಮರ್ನಂತಹ ಮಿದುಳಿನ ಸಮಸ್ಯೆ ಅಥವಾ ಥೈರಾಯ್ಡ್, ಮೂತ್ರಜನಕಾಂಗದ ಅಥವಾ ಲೈಂಗಿಕ ಗ್ರಂಥಿಗಳು ಕಾರಣದಿಂದ ಇದು ಸಂಭವಿಸಬಹುದು ಎಂದು ಸಂಶೋಧಕರು ಅಂದಾಜಿಸಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಅದರಲ್ಲೂ ಕೋವಿಡ್ 19 ಬಳಿಕ ಅನೇಕ ಅಧ್ಯಯನಗಳು ಬಾಲಕ ಮತ್ತು ಬಾಲಕಿಯರು ಅವಧಿಗೆ ಮೊದಲು ಪ್ರೌಢಾವಸ್ಥೆ ತಲುಪುತ್ತಿರುವ ಸಂಬಂಧ ನಡೆಯುತ್ತಿವೆ. ಈ ಪೈಕಿ ಒಂದು ಕಾರಣ, ಎಲೆಕ್ಟ್ರಾನಿಕ್ ಸಾಧನಗಳಿಂದ ಹೊರಹೊಮ್ಮುವ ನೀಲಿ ಬೆಳಕು. ಆದರೆ, ಇದನ್ನು ಭಾರತದಲ್ಲಿ ನಿರ್ಣಯಿಸುವುದು ಕಷ್ಟವಾಗಿದೆ.
ಟರ್ಕಿಯ ಗಾಜಿ ಯುನಿವರ್ಸಿಟಿ ಮತ್ತು ಅಂಕಾರಾ ಬಿಲ್ಕೆಟ್ ಸಿಟಿ ಆಸ್ಪತ್ರೆಯ ಸಂಶೋಧಕರು, 21ರ ವಯೋಮಾನದ 18 ಗಂಡು ಇಲಿಗಳ ಮೇಲೆ ಅಧ್ಯಯನ ನಡೆಸಿದ್ದಾರೆ. ಒಟ್ಟು ಆರರಂತೆ ಮೂರು ಗುಂಪಾಗಿ ಅಧ್ಯಯನ ನಡೆದಿದ್ದು, ಸಾಮಾನ್ಯ ಬೆಳಕಿನ ಚಕ್ರವನ್ನು ಆರರಿಂದ ಅಥವಾ 12ಗಂಟೆಗೆ ನೀಲಿ ಬೆಳಕಿನ ಚಕ್ರವಾಗಿ ರೂಪಿಸಲಾಗಿದೆ.