ನವದೆಹಲಿ: ಅಪರೂಪದ ನ್ಯುಮೋನಿಯಾ ವಿರುದ್ಧ ಹೋರಾಡುತ್ತಿದ್ದ ಪುಟ್ಟ ಬಾಲಕನನ್ನು ಪುಣೆ ವೈದ್ಯರು ಬದುಕಿಸಿರುವ ಘಟನೆ ನಡೆದಿದೆ. 150 ದಿನಗಳ ಕಾಲ ವೆಂಟಿಲೇಟರ್ನಲ್ಲಿದ್ದ ಪುಟ್ಟ ಪೋರ ಸೋಂಕಿನ ವಿರುದ್ಧ ಹೋರಾಡಿ ಜಯಿಸಿದ್ದಾನೆ.
ಎರಡೂವರೆ ವರ್ಷದ ಬಾಲಕ ಬಿಲೆಟ್ರಲ್ (ದ್ವಿಪಕ್ಷೀಯ) ನ್ಯುಮೋನಿಯಾದಿಂದ ಬಳಲುತ್ತಿದ್ದ. ಶ್ವಾಸಕೋಶದಲ್ಲಿ ಗಂಭೀರವಾದ ಸೋಂಕು ಉಂಟು ಮಾಡುವ ಜೊತೆಗೆ ಇದು ಊರಿಯೂತ ಮತ್ತು ಗಾಯವನ್ನು ಉಂಟು ಮಾಡುತ್ತದೆ. ಈ ಸೋಂಕಿನ ಹಿನ್ನೆಲೆ ಬಾಲಕನಲ್ಲಿ ಜ್ವರ, ನೆಗಡಿ, ಕೆಮ್ಮು ಮತ್ತು ಉಸಿರಾಟದ ಸಮಸ್ಯೆ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಬರೋಬ್ಬರಿ 150 ದಿನ ಅಂದರೆ ನಾಲ್ಜು ತಿಂಗಳಿಗೂ ಹೆಚ್ಚು ಕಾಲ ಈತನನ್ನು ವೆಂಟಿಲೇಟರ್ ಚಿಕಿತ್ಸೆಗೆ ಒಳಪಡಿಸಲಾಗಿದೆ.
ಸ್ಟ್ರೆಪ್ಟೋಕೊಕಸ್ ನ್ಯುಮೋನಿಯಾ ಬ್ಯಾಕ್ಟೀರಿಯಾದಿಂದ ಈತ ಶ್ವಾಸಕೋಶ ಶೇ 80ರಷ್ಟು ಸೋಂಕಿಗೆ ತುತ್ತಾಗಿದ್ದು, ಎಕ್ಸ್ರೇ ಅಲ್ಲಿ ಕಂಡು ಬಂದಿದೆ. ಶ್ವಾಸಕೋಶದ ಅಂಗಾಂಶದ ಒಳಗೆ ಮತ್ತ ಹೊರಗೆ ರೂಪುಗೊಂಡ ಗಾಳಿಯ ಪಾಕೆಟ್ ಅನ್ನು ಬರಿದಾಗಿಸಲು ಕ್ಯಾತಿಟರ್ಗಳನ್ನು ಸೇರಿಸಲಾಗಿದೆ. ಜೊತೆಗೆ ಈ ಶ್ವಾಸಕೋಶದ ಸುಧಾರಣೆ ಹೆಚ್ಚಿನ ಚಿಕಿತ್ಸೆ ಅವಶ್ಯಕತೆ ಇದೆ.
ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಪುಣೆಯ ಸೂರ್ಯ ಮದರ್ ಮತ್ತು ಚೈಲ್ಡ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ವೈದ್ಯರು ಮೂರು ತಿಂಗಳ ಕಾಲ ಬಾಲಕನನ್ನು ಮೆಕಾನಿಕಲ್ ವೆಂಟಿಲೇಟರ್ಗೆ ಒಳಪಡಿಸಿದ್ದಾರೆ. ಯಾವುದೇ ನ್ಯುಮೋನಿಯಾ ಪ್ರಕರಣಗಳು ಕೆಟ್ಟದಾಗಿರುತ್ತದೆ. ಅದರಲ್ಲೂ ಈ ಬಾಲಕನ ಪ್ರಕರಣದಲ್ಲಿ ದೀರ್ಘಕಾಲದ ವೆಂಟಿಲೇಷನ್ಗೆ ಒಳಪಡಿಸುವ ಮೂಲಕ ಹೆಚ್ಚಿನ ಸವಾಲುಗಳು ಕೂಡ ಇದ್ದವು ಎಂದು ಬಾಲಕನ ಸ್ಥಿತಿ ಕುರಿತು ವಿವರಿಸಿದ್ದಾರೆ ವೈದ್ಯರಾದ ಅಮಿತ ಕೌಲ್ ತಿಳಿಸಿದ್ದಾರೆ.