ಬೆಂಗಳೂರು: ದೇಹದ ಸಂಪೂರ್ಣ ಆರೋಗ್ಯ ವ್ಯವಸ್ಥೆಯಲ್ಲಿ ವಿಟಮಿನ್ ಡಿ ಪೋಷಕಾಂಶವೂ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ವಿಟಮಿನ್ ಡಿಯ ಪ್ರಮುಖ ಮೂಲ ಎಂದರೆ ಅದು ಸೂರ್ಯನ ಕಿರಣವಾಗಿದೆ. ಇದರ ಜೊತೆಗೆ ಕೆಲವು ಆಹಾರಗಳನ್ನು ಸೇವನೆ ಮಾಡುವ ಮೂಲಕ ಇದರ ಮಟ್ಟ ಹೆಚ್ಚಿಸಬಹುದಾಗಿದೆ. ವಿಟಮಿನ್ ಡಿ ಅವಶ್ಯಕತೆ ವಯಸ್ಸು ಮತ್ತು ವೈಯಕ್ತಿಕ ಆರೋಗ್ಯ ಸ್ಥಿತಿಗಳಂತಹ ಅಂಶಗಳ ಆಧಾರದ ಮೇಲೆ ಬದಲಾಗುತ್ತದೆ. ಈ ಹಿನ್ನೆಲೆ ನಿರ್ಧಿಷ್ಟ ಅವಶ್ಯಕತೆಗೆ ಸರಿಯಾದ ಸಮಯದಲ್ಲಿ ಈ ಆಹಾರ ಸೇವನೆಗೆ ಆರೋಗ್ಯ ಕಾರ್ಯಕರ್ತರು ಅಥವಾ ನ್ಯೂಟ್ರಿಷಿಯನ್ ಬಳಿ ಸಲಹೆ ಪಡೆಯಬೇಕಾಗುತ್ತದೆ.
ಮೂಳೆ ಆರೋಗ್ಯಗಳಲ್ಲಿ ಬಲವಾಗಿಸಲು ಈ ವಿಟಮಿನ್ ಡಿ ಅಗತ್ಯವಾಗಿದ್ದು, ಎಲ್ಲ ವಯೋಮಾನದ ಜನರಿಗೂ ಈ ವಿಟಮಿನ್ ಡಿ ಅವಶ್ಯಕತೆ ಹೆಚ್ಚಿರುತ್ತದೆ. ಸೂರ್ಯನಿಂದ ನೈಸರ್ಗಿಕವಾಗಿ ಲಭ್ಯವಾಗುವ ವಿಟಮಿನ್ ಡಿ ಕಡಿಮೆಯಾದರೆ, ಇದು ಅನೇಕ ರೋಗಗಳಿಗೆ ಕಾರಣವಾಗುತ್ತದೆ. ಈ ಹಿನ್ನೆಲೆ ದೇಹಕ್ಕೆ ವಿಟಮಿನ್ ಡಿ ಅತ್ಯಗತ್ಯವಾಗಿದೆ. ಸೂರ್ಯನಿಂದ ಸಾಕಷ್ಟ ಪ್ರಮಾಣದ ವಿಟಮಿನ್ ಡಿ ನಿಮಗೆ ಲಭ್ಯವಾಗುತ್ತಿಲ್ಲ ಎಂದರೆ, ಅದಕ್ಕೆ ಪೂರಕವಾಗುವಂತೆ ವಿಟಮಿನ್ ಡಿ ಸಮೃದ್ಧ ಆಹಾರಗಳನ್ನು ಸೇವಿಸಬಹುದಾಗಿದೆ. ಅಂತಹ ಆಹಾರಗಳ ಪಟ್ಟಿ ಇಲ್ಲಿದೆ.
ಮೊಟ್ಟೆಯ ಹಳದಿ ಭಾಗ: ಮೊಟ್ಟೆಯು ಪ್ರೋಟಿನ್ ಸಮೃದ್ಧವಾಗಿದ್ದು, ಇದರಲ್ಲಿನ ಹಳದಿ ಭಾಗದಲ್ಲಿ ಹೆಚ್ಚಿನ ವಿಟಮಿನ್ ಡಿ ಅಂಶ ಕಾಣಬಹುದಾಗಿದೆ. ನಿಮ್ಮ ಆಹಾರದಲ್ಲಿ ಸಂಪೂರ್ಣ ಮೊಟ್ಟೆಯನ್ನು ಸೇವಿಸುವುದರಿಂದಲೂ ಈ ವಿಟಮಿನ್ ಡಿ ಅಂಶ ಪಡೆಯಬಹುದಾಗಿದೆ.
ಮಶ್ರೂಮ್: ಕೆಲವು ಮಶ್ರೂಮ್ ತಳಿಗಳು ಅದರಲ್ಲೂ ಸೂರ್ಯನಿಂದ ಅಲ್ಟ್ರಾವೈಲೆಟ್ ಕಿರಣಗಳನ್ನು ಪಡೆದ ಮಶ್ರೂಮ್ಗಳಲ್ಲಿ ವಿಟಮಿನ್ ಡಿ ಹೆಚ್ಚಿರುತ್ತದೆ. ವಿಟಮಿನ್ ಡಿ ಸಮೃದ್ಧ ಆಹಾರಗಳನ್ನು ಸ್ಥಳೀಯ ಮಾರುಕಟ್ಟೆಗಳಿಂದ ಪಡೆಯಬಹುದಾಗಿದ್ದು, ಇವು ಆರೋಗ್ಯಕ್ಕೆ ಹೆಚ್ಚಿನ ಪ್ರಯೋಜನ ನೀಡುತ್ತದೆ.