ಹೈದರಾಬಾದ್: ಆಕ್ಟಾಫಾರ್ಮಾ ಸಹಯೋಗದೊಂದಿಗೆ ಕರೋಲಿನ್‌ಸ್ಕಾ ಇನ್‌ಸ್ಟಿಟ್ಯೂಟ್‌ನ ಸಂಶೋಧಕರು ದಿ ಜರ್ನಲ್ ಆಫ್ ಇನ್‌ಫೆಕ್ಷಿಯಸ್ ಡಿಸೀಸ್‌ನಲ್ಲಿ ಪ್ರಕಟಿಸಿದ ಅಧ್ಯಯನದ ಪ್ರಕಾರ ಆರ್ಹೆಚ್(ಡಿ) ರಕ್ತದ ಗುಂಪಿನ ಜನರಲ್ಲಿ ಪಾರ್ವೊವೈರಸ್‌ನಿಂದ ಸೋಂಕಿಗೆ ಒಳಗಾಗುವ ಅಪಾಯ ಹೆಚ್ಚಾಗುತ್ತದೆ ಎಂದು ತಿಳಿಸಿದೆ.
ಐದನೇ ರೋಗವು ಪಾರ್ವೊವೈರಸ್ ನಿಂದ ಉಂಟಾಗುವ ಒಂದು ವೈರಲ್ ಕಾಯಿಲೆಯಾಗಿದೆ. ಶಾಲಾ ವಯಸ್ಸಿನ ಮಕ್ಕಳಲ್ಲಿ ಹೆಚ್ಚಾಗಿ ಕೆನ್ನೆಗಳ ಮೇಲೆ ಕೆಂಪು ದದ್ದುಗಳಂತಹ ಸಾಮಾನ್ಯ ರೋಗಲಕ್ಷಣವಾಗಿ ಕಣ್ಣಿಸಿಕೊಳ್ಳುತ್ತದೆ. ನಂತರ ಅದು ತೋಳುಗಳು ಮತ್ತು ಕಾಲುಗಳಿಗೆ ಸಹ ಹರಡಬಹುದು. ಅದೇ ರೀತಿ ವಯಸ್ಕರು ಸಹ ಈ ಸೋಂಕಿಗೆ ಒಳಗಾಗಬಹುದು. ಆದರೆ, ಅನೇಕರಲ್ಲಿ ಈ ರೋಗಲಕ್ಷಣಗಳನ್ನು ಕಾಣಿಸಿಕೊಳ್ಳುವುದಿಲ್ಲ.
ಈಗ ಸಂಶೋಧಕರು ತಮ್ಮ ಹೊಸ ಅಧ್ಯಯನದಲ್ಲಿ ವ್ಯಕ್ತಿಯು ರೀಸಸ್ ಡಿ ಪ್ರತಿಜನಕ ಅಥವಾ ಆರ್ಹೆಚ್(ಡಿ) ಎಂದು ಕರೆಯಲ್ಪಡುವ ರಕ್ತದ ಗುಂಪಿಗೆ ಸೇರಿದವರಾಗಿದ್ದರೆ ರೋಗದಿಂದ ಬಳಲುವ ಅಪಾಯವು ಹೆಚ್ಚಾಗುತ್ತದೆ ಎಂದು ಸಂಶೋಧನೆಯಲ್ಲಿ ಕಂಡುಕೊಂಡಿದ್ದಾರೆ. ಎಬಿ0 ವ್ಯವಸ್ಥೆಯೊಂದಿಗೆ ರಕ್ತದ ಗುಂಪಿನ ನಿರ್ಣಯದ ಹೊರತಾಗಿ, ಆರ್ಹೆಚ್ ವ್ಯವಸ್ಥೆಯು ಅತ್ಯಂತ ಸಾಮಾನ್ಯವಾಗಿದೆ ಎಂದು ತಿಳಿಸಿದ್ದಾರೆ.
ಎಲ್ಲ ಸೋಂಕಿತರು ಆರ್ಹೆಚ್(ಡಿ) ಸೇರಿದವರು:2015 ಮತ್ತು 2018 ರ ನಡುವೆ ಜರ್ಮನಿಯಲ್ಲಿ 160,000 ರಕ್ತದಾನಿಗಳನ್ನು ಪಾರ್ವೊವೈರಸ್‌ಗಾಗಿ ಪರೀಕ್ಷಿಸಲಾಯಿತು. ಈ ರಕ್ತ ದಾನಿಗಳಲ್ಲಿ 22 ಜನರು ವೈರಸ್‌ನಿಂದ ಸೋಂಕಿಗೆ ಒಳಗಾಗಿದ್ದಾರೆ. ಎಲ್ಲ ಸೋಂಕಿತ ವ್ಯಕ್ತಿಗಳು ಆರ್ಹೆಚ್(ಡಿ) ರಕ್ತದ ಗುಂಪಿಗೆ ಸೇರಿದವರಾಗಿದ್ದಾರೆ ಎಂದು ಕಂಡುಬಂದಿದೆ.
ಇದು ಒಂದು ದೊಡ್ಡ ಮತ್ತು ಇನ್ನೂ ವಿವರಿಸಲಾಗದ ಸಂಶೋಧನೆಯಾಗಿದ್ದು, ವೈರಸ್ ಅತಿಥೇಯ ಕೋಶವನ್ನು ಪ್ರವೇಶಿಸಲು ಆರ್ಹೆಚ್(ಡಿ) ಮುಖ್ಯವಾಗಿದೆ ಮತ್ತು ಬಹುಶಃ ವೈರಸ್‌ಗೆ ಹೊಸ ಮತ್ತು ಇನ್ನೂ ಗುರುತಿಸದ ಸೆಲ್ಯುಲಾರ್ ಗ್ರಾಹಕವೂ ಆಗಿರಬಹುದು ಎಂದು ಕರೋಲಿನ್ಸ್ಕಾ ಇನ್ಸಿಟಿಟ್ಯೂಟ್ನ ಕ್ಲಿನಿಕಲ್ನ ನರವಿಜ್ಞಾನ ವಿಭಾಗದ ಸಹ ಸಂಶೋಧಕ ಮತ್ತು ಆಕ್ಟಾಫರ್ಮಾದಲ್ಲಿ ಪ್ರಾಜೆಕ್ಟ್ ಮ್ಯಾನೇಜರ್ ಆಗಿರುವ ರಾಸ್ಮಸ್ ಗುಸ್ಟಾಫ್ಸನ್ ಹೇಳಿದ್ದಾರೆ.
ಮಹಿಳೆಯರನ್ನು ಹೆಚ್ಚಾಗಿ ಪ್ರವೇಶಿಸುತ್ತದೆ:ಬೇಸಿಗೆಯ ತಿಂಗಳುಗಳಲ್ಲಿ ಸೋಂಕಿನ ಅಪಾಯವು ಹೆಚ್ಚಾಗಿದೆ ಎಂದು ಸಂಶೋಧಕರು ಕಂಡುಹಿಡಿದಿದ್ದಾರೆ. ಇದಲ್ಲದೇ, ಮಹಿಳೆಯರು ಮತ್ತು 31 ರಿಂದ 40 ವರ್ಷ ವಯಸ್ಸಿನ ಜನರು ಹೆಚ್ಚಾಗಿ ಸೋಂಕಿನ ಅಪಾಯವನ್ನು ಹೊಂದಿರುವುದು ತಿಳಿದು ಬಂದಿದೆ.
ಸಾಮಾನ್ಯವಾಗಿ ಆ ವಯಸ್ಸಿನಲ್ಲಿ ಸಣ್ಣ ಮಕ್ಕಳನ್ನು ಹೊಂದಿರುತ್ತಾರೆ. ಚಿಕ್ಕ ಮಕ್ಕಳು ಪ್ರಿಸ್ಕೂಲ್ ನಲ್ಲಿ ಸೋಂಕಿಗೆ ಒಳಗಾಗುತ್ತಾರೆ. ನಂತರ ಅವರ ಹೆತ್ತವರಿಗೆ ಸೋಂಕು ತಗುಲುತ್ತದೆ ಎಂದು ನಮಗೆ ಈಗಾಗಲೇ ತಿಳಿದಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.
ಆದ್ದರಿಂದ ವಯಸ್ಸು ಮತ್ತು ಲಿಂಗಕ್ಕೆ ಹೊಲಿಸಿದರೆ ಪುರುಷರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಮಹಿಳೆಯರು ಮಕ್ಕಳ ಬಗ್ಗೆ ಕಾಳಜಿ ವಹಿಸುತ್ತಾರೆ ಮತ್ತು ಮಕ್ಕಳನ್ನು ನೋಡಿಕೊಳ್ಳುತ್ತಾರೆ ಎಂಬ ಅಂಶದಿಂದ ತಿಳಿದಿದೆ ಎಂದು ರಾಸ್ಮಸ್ ಗುಸ್ಟಾಫ್ಸನ್ ಹೇಳುತ್ತಾರೆ. ಹಲವಾರು ಸಹ ಲೇಖಕರು ಸಕ್ರಿಯರಾಗಿರುವ ಆಕ್ಟಾಫರ್ಮಾ ಕಂಪನಿಯ ಸಹಯೋಗದೊಂದಿಗೆ ಈ ಅಧ್ಯಯನ ನಡೆಸಲಾಗಿದೆ.
ಇದನ್ನೂ ಓದಿ:ರಾಷ್ಟ್ರೀಯ ಸ್ಥೂಲಕಾಯ ವಿರೋಧಿ ದಿನ 2022: ಬೊಜ್ಜು ಹೊಂದಿರುವ ಜನರಲ್ಲಿ ಈ ರೋಗಗಳ ಅಪಾಯ ಹೆಚ್ಚು