ವಾಷಿಂಗ್ಟನ್:ನಿತ್ಯವೂ ನಾವು ಸೇವಿಸುವ ಒಂದು ಕಪ್ ಚಹಾವು ನಮ್ಮ ಜೀವನದ ಕೊನೆಯಲ್ಲಿ ಉತ್ತಮ ಆರೋಗ್ಯವನ್ನು ಆನಂದಿಸಲು ಸಹಾಯ ಮಾಡುತ್ತದೆ. ಒಂದು ವೇಳೆ ನೀವು ಚಹಾ ಕುಡಿಯುವವರಲ್ಲದಿದ್ದರೆ, ನಿಮ್ಮ ಆಹಾರದಲ್ಲಿ ಕೆಲವು ಪದಾರ್ಥಗಳನ್ನು ಸೇರಿಸಬೇಕಾಗುತ್ತದೆ. ಅವುಗಳಲ್ಲಿ ಪ್ರಮುಖವಾದದ್ದು, ಫ್ಲೇವನಾಯ್ಡ್. ಇದು ಬ್ಲಾಕ್ ಮತ್ತು ಗ್ರೀನ್ ಟೀ, ಸೇಬುಗಳು, ನಟ್ಸ್, ಸಿಟ್ರಸ್ ಹಣ್ಣುಗಳು, ಬೆರೀಸ್ನಲ್ಲಿ ಇರುತ್ತದೆ.
ವಯಸ್ಸಾದ ವೃದ್ಧೆಯರ ಬಳಕೆ: ಇವುಗಳು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿವೆ ಎಂಬುದು ಬಹಳ ಹಿಂದಿನಿಂದಲೂ ತಿಳಿದು ಬಂದಿದೆ. ಆದಾಗ್ಯೂ ಹೊಸ ಎಡಿತ್ ಕೋವನ್ ವಿಶ್ವವಿದ್ಯಾನಿಲಯದ (ECU) ಸಂಶೋಧನೆಯು, ಇದು ಹಿಂದೆ ಯೋಚಿಸಿದ್ದಕ್ಕಿಂತ ಇನ್ನೂ ಉತ್ತಮವಾಗಿದೆ ಎಂದು ಹೇಳಿದೆ.
ಹಾರ್ಟ್ ಫೌಂಡೇಶನ್ 881 ವಯಸ್ಸಾದ ಮಹಿಳೆಯರನ್ನು (80 ವರ್ಷ ವಯಸ್ಸು) ಈ ಅಧ್ಯಯನಕ್ಕೆ ಬಳಸಿಕೊಂಡಿದೆ. ಅವರು ತಮ್ಮ ಆಹಾರದಲ್ಲಿ ಹೆಚ್ಚಿನ ಮಟ್ಟದಲ್ಲಿ ಫ್ಲೇವೊನೈಡ್‌ಗಳನ್ನು ಸೇವಿಸಿದ ಪರಿಣಾಮ, ಅವರು ಅಬ್ಡೊಮಿನಲ್ ಆರೋಟಿಕ್ ಕ್ಯಾಲ್ಸಿಫಿಕೇಶನ್ (AAC)ನಲ್ಲಿ ರಕ್ತದೊತ್ತಣ ಕಡಿಮೆ ಹೊಂದಿದ್ದರು ಎಂದು ತಿಳಿದು ಬಂದಿದೆ.
AACಯೂ ಹೃದಯದಿಂದ ಹೊಟ್ಟೆಯ ಅಂಗಗಳಿಗೆ ಮತ್ತು ಕೆಳಗಿನ ಅಂಗಗಳಿಗೆ ಆಮ್ಲಜನಕಯುಕ್ತ ರಕ್ತವನ್ನು ಪೂರೈಸುವ ದೇಹದಲ್ಲಿನ ಅತಿದೊಡ್ಡ ಅಪಧಮನಿಯಾಗಿದೆ. ಅಲ್ಲದೇ ಹೃದಯಾಘಾತ ಮತ್ತು ಪಾರ್ಶ್ವವಾಯು ತಡೆಗಟ್ಟುತ್ತದೆ. ಜೊತೆಗೆ ಬುದ್ಧಿಮಾಂದ್ಯತೆ ಕಡಿಮೆ ಮಾಡುವಲ್ಲಿ ಇದು ಸಹಕಾರಿಯಾಗಿದೆ ಎಂಬುದು ಅಧ್ಯಯನದಿಂದ ತಿಳಿದುಬಂದಿದೆ.
ಫ್ಲೇವನಾಯ್ಡ್ಯುಕ್ತ ಆಹಾರ ಸೇವನೆ ಒಳ್ಳೆಯದು:ಇಸಿಯು ನ್ಯೂಟ್ರಿಷನ್ ಮತ್ತು ಹೆಲ್ತ್ ಇನ್ನೋವೇಶನ್ ರಿಸರ್ಚ್ ಇನ್‌ಸ್ಟಿಟ್ಯೂಟ್ ಸಂಶೋಧಕ ಮತ್ತು ಅಧ್ಯಯನದ ಪ್ರಮುಖ ಬೆನ್ ಪಾರ್ಮೆಂಟರ್ ಅವರ ಪ್ರಕಾರ, ಫ್ಲೇವನಾಯ್ಡ್‌ಗಳ ಅನೇಕ ಆಹಾರ ಮೂಲಗಳಿವೆ. ಕೆಲವುಗಳಲ್ಲಿ ಇದು ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಇದು ಪಾನೀಯಗಳಲ್ಲಿ ಸಹ ಇರುತ್ತದೆ. ಫ್ಲೇವನಾಯ್ಡ್ಯುಕ್ತ ಆಹಾರ ಸೇವನೆ ನಮ್ಮ ಆರೋಗ್ಯಕ್ಕೆ ಬಹಳ ಕೊಡುಗೆ ನೀಡುತ್ತದೆ ಎಂದು ಅವರು ಹೇಳಿದ್ದಾರೆ.