ಬೆಂಗಳೂರು: ಹಣ್ಣುಗಳಲ್ಲಿ ವಿಶೇಷವಾಗಿ ಸೆಳೆಯುವ ಹಣ್ಣು ದ್ರಾಕ್ಷಿ. ಹಸಿರು, ಕೆಂಪು ಮತ್ತು ಕಪ್ಪು ಬಣ್ಣದ ದ್ರಾಕ್ಷಿಗಳಲ್ಲಿ ತಮ್ಮದೇ ಆದ ವಿಶೇಷ ಗುಣವನ್ನು ಹೊಂದಿದೆ. ಗಾಢ ನೇರಳೆ ಬಣ್ಣದ ಕಪ್ಪು ದ್ರಾಕ್ಷಿ ಹುಳಿ ಸಿಹಿಯ ಮಿಶ್ರಣವಾಗಿರುತ್ತದೆ. ದ್ರಾಕ್ಷಿಯಲ್ಲಿ ಅಧಿಕ ಮಟ್ಟದ ಅಂತೊಸೈನಿನ್ಸ್ ಆಮ್ಲವೂ ಅದರ ಕಪ್ಪು, ಗಾಢ ನೇರಳೆ ಬಣ್ಣಕ್ಕೆ ಕಾರಣವಾಗಿದೆ. ಇದರ ಬಣ್ಣದ ಹೊರತಾಗಿ ದ್ರಾಕ್ಷಿ ಅನೇಕ ಆರೋಗ್ಯ ಪ್ರಯೋಜನವನ್ನು ಹೊಂದಿದೆ, ಕಪ್ಪು ದ್ರಾಕ್ಷಿಯನ್ನು ಜಾಮ್, ಡೆಸಾರ್ಟ್ ಮತ್ತು ಇನ್ನು ಅನೇಕ ರೂಪದಲ್ಲಿ ಸೇವಿಸುತ್ತೇವೆ. ಈ ಕಪ್ಪು ದ್ರಾಕ್ಷಿಯು ಆರೋಗ್ಯಕ್ಕೆ ಹೇಗೆಲ್ಲ ಉತ್ತಮ ಎಂಬ ಮಾಹಿತಿ ಇಲ್ಲಿದೆ.
ಹೃದಯಕ್ಕೆ ಒಳ್ಳೆಯದು:ಕಪ್ಪು ದ್ರಾಕ್ಷಿಯಲ್ಲಿ ರೆಸವರ್ಟ್ರೊಲ್ ಮತ್ತು ಕ್ವರ್ದೆಟಿನ್ ಎಂಬ ಎಂಡು ಆ್ಯಂಟಿ ಆಕ್ಸಿಡೆಂಟ್ ಇರುತ್ತದೆ. ಇದು ಹೃದಯದ ಆರೋಗ್ಯ ಕಾಪಾಡುವಲ್ಲಿ ಅತ್ಯಂತ ಸಹಾಯಕವಾಗಿದೆ. ಇದು ಎಲ್ಡಿಎಲ್ ಕೊಲೆಸ್ಟಾರ್ ಮಟ್ಟವನ್ನು ಕಾಪಾಡುತ್ತದೆ. ಕಪ್ಪು ದ್ರಾಕ್ಷಿಯಲ್ಲಿ ಅಧಿಕ ಮಟ್ಟದ ಪೊಟಾಶಿಯಂ ಮತ್ತು ಫೈಬರ್ ಇದ್ದು, ರಕ್ತದೊತ್ತಡವನ್ನು ನಿಯಂತ್ರಣ ಮಾಡುವಲ್ಲಿ ಸಹಾಯ ಮಾಡುತ್ತದೆ.
ಮೈಗ್ರೇನ್, ತಲೆನೋವಿಗೆ ಪರಿಹಾರ: ಪಿಎಂಎಸ್ ಲಕ್ಷಣದಂತಹ ಮೂಡ್ ಸ್ವಿಂಗ್ ಮತ್ತು ತಲೆನೋವು ಅನುಭವಿಸುತ್ತಿದ್ದರೆ, ಕಪ್ಪು ದ್ರಾಕ್ಷಿ ಸಹಾಯ ಮಾಡುತ್ತದೆ. ಕಪ್ಪು ದ್ರಾಕ್ಷಿಯು ರಿಪೊಫ್ಲವಿನ್ ಮೈಗ್ರೇನ್ ಮತ್ತು ತಲೆನೋವು ಉಪಶಮನಕ್ಕೆ ಪ್ರಯೋಜನಕಾರಿಯಾಗಿದೆ.
ಚರ್ಮ ಮತ್ತು ಕೂದಲಿನ ರಕ್ಷಣೆ: ಕಪ್ಪು ದ್ರಾಕ್ಷಿಯಲ್ಲಿ ಅಧಿಕ ಮಟ್ಟದ ಆ್ಯಂಟಿಆಕ್ಸಿಡೆಂಟ್ ಮತ್ತು ವಿಟಮಿನ್ ಇ ಇರುತ್ತದೆ. ಇದು ಕೂದಲಿನ ಬುಡದಲ್ಲಿನ ರಕ್ತದ ಪರಿಚಲನೆ ಹೆಚ್ಚಿಸುತ್ತದೆ. ಇದು ಕೂದಲಿನ ನಷ್ಟ ತಪ್ಪಿಸುತ್ತದೆ. ಅಲ್ಲದೇ, ಅಕಾಲಿಕ ನೆರ ಕೂದಲಾಗುವುದನ್ನು ತಡೆಯುತ್ತದೆ. ಜೊತೆಗೆ ಇದು ಚರ್ಮದ ಸುಕ್ಕು ನಿವಾರಿಸಿ, ಚರ್ಮದ ಕೋಶವನ್ನು ಪುನರ್ಸ್ಥಾಪಿಸುತ್ತದೆ.