ನವದೆಹಲಿ:ಉನ್ಮಾದ ಮತ್ತು ಖಿನ್ನತೆಯಂತಹ ಗಂಭೀರ ಮಾನಸಿಕ ಗೊಂದಲದ ಲಕ್ಷಣ ಹೊಂದಿರುವ ಬೈಪೋಲಾರ್ ಸಮಸ್ಯೆ ಹೊಂದಿರುವವರು ಧೂಮಪಾನಿಗಳಿಗಿಂತಲೂ ಹೆಚ್ಚಿನ ಅಕಾಲಿಕ ಸಾವಿನ ಅಪಾಯ ಹೊಂದಿದ್ದಾರೆ ಎಂದು ಸಂಶೋಧನೆ ತಿಳಿಸಿದೆ. ಅಮೆರಿಕದ ಮಿಚಿಗನ್ ಯೂನಿವರ್ಸಿಟಿ ಸಂಶೋಧಕರು, ಧೂಮಪಾನ ಮಾಡಿದವರು ಧೂಮಪಾನ ಮಾಡಿರದ ಬೈಪೋಲಾರ್ ಆರೋಗ್ಯ ಸಮಸ್ಯೆ ಹೊಂದಿರುವವರ ಸಾವಿನ ಕುರಿತು ದೊಡ್ಡ ಮಟ್ಟದಲ್ಲಿ ವಿಶ್ಲೇಷಣೆ ನಡೆಸಿದ್ದಾರೆ.
ಈ ಕುರಿತು ಜರ್ನಲ್ ಸೈಕಿಯಾಟ್ರಿಕ್‌ನಲ್ಲಿ ವರದಿ ಪ್ರಕಟಿಸಲಾಗಿದೆ. ಈ ಅಧ್ಯಯನದಲ್ಲಿ ಬೈಪೋಲಾರ್ ಸಮಸ್ಯೆ ಹೊಂದಿರುವವರು ಈ ಸಮಸ್ಯೆ ಹೊಂದಿರದವರಿಗಿಂತ ಅಕಾಲಿಕವಾಗಿ ಸಾವನ್ನಪ್ಪುವ ಪ್ರಮಾಣ ಆರು ಪಟ್ಟು ಹೆಚ್ಚಿದೆ ಎಂದಿದ್ದಾರೆ. ಇದಕ್ಕೆ ತದ್ವಿರುದ್ಧವಾಗಿ ಧೂಮಪಾನ ಮಾಡುವವರು ಧೂಮಪಾನ ಮಾಡದವರಿಗಿಂತ ಅಕಾಲಿಕವಾಗಿ ಸಾವನ್ನಪ್ಪುವ ಸಂಖ್ಯೆ ಎರಡು ಪಟ್ಟು ಹೆಚ್ಚು ಎಂದು ಮಾಹಿತಿ ನೀಡಿದ್ದಾರೆ.
ಈ ಸಾವಿನಲ್ಲಿ ಸಂಪೂರ್ಣವಾಗಿ ವ್ಯತ್ಯಾಸ ಹೊಂದಿದ್ದು, ಆರೋಗ್ಯ ಮತ್ತು ಜೀವನಶೈಲಿಯೂ ಇದಕ್ಕೆ ಕೊಡುಗೆ ನೀಡುತ್ತದೆ. ಅಕಾಲಿಕ ಸಾವು ತಡೆಯಲಿ ಹೆಚ್ಚಿನ ಪ್ರಯತ್ನ ನಡೆಸಬೇಕಿದೆ ಎಂದು ಸಂಶೋಧಕರು ತಿಳಿಸಿದ್ದಾರೆ. ಬೈಪೋಲಾರ್ ಅಸ್ವಸ್ಥತೆಯಲ್ಲಿ ಸಾವಿನ ಅಪಾಯದ ಅಂಶಗಳು ದೀರ್ಘವಾಗಿ ಕಾಣಬಹುದಾಗಿದೆ ಎಂದು ಅಧ್ಯಯನದ ಪ್ರಮುಖ ಲೇಖಕ ಅನಸ್ಟಸಿಯಾ ಯೊಕುಮ್ ತಿಳಿಸಿದ್ದಾರೆ. ಈ ಅಸ್ವಸ್ಥತೆಯನ್ನು ಹೋಲಿಕೆಯಲ್ಲಿ ಕಾಣಬೇಕಿದೆ ಮತ್ತು ಜೀವನಶೈಲಿ ನಡುವಳಿಕೆಗಳು ಹೆಚ್ಚಿನ ಅಕಾಲಿಕ ಸಾವಿನ ಅಪಾಯದ ದರಕ್ಕೆ ಸಂಬಂಧಿಸಿದೆ ಎಂದು ಎಚ್ಚರಿಸಿದ್ದಾರೆ.