ಕರ್ನಾಟಕ

karnataka

ETV Bharat / sukhibhava

ಹೆಲ್ತ್​ ಟ್ರ್ಯಾಕಿಂಗ್‌ಗೆ ಬಂತು ಸ್ಮಾರ್ಟ್​ ಉಂಗುರ! ಇದು ಬೆಂಗಳೂರಿನ ಸಂಸ್ಥೆಯ ಆವಿಷ್ಕಾರ - ಧರಿಸಬಹುದಾದ ಸ್ಮಾರ್ಟ್​ ರಿಂಗ್

ಇನ್ಮುಂದೆ ಸ್ಮಾರ್ಟ್​ ವಾಚ್​ ಬದಲು ಸ್ಮಾರ್ಟ್​ ರಿಂಗ್‌ನಿಂದ ಹೆಲ್ತ್​​ ಟ್ರ್ಯಾಕ್​ ಮಾಡಬಹುದು. ಅಷ್ಟೇ ಅಲ್ಲ, ಇದರಿಂದಲೇ ಡಿಜಿಟಲ್​ ಪೇಮೆಂಟ್​ ಕೂಡ ಸಾಧ್ಯವಿದೆ.

Bengaluru Based muse warbles developed a smart ring
Bengaluru Based muse warbles developed a smart ring

By ETV Bharat Karnataka Team

Published : Aug 31, 2023, 4:09 PM IST

Updated : Aug 31, 2023, 5:36 PM IST

ಬೆಂಗಳೂರು: ಭಾರತೀಯ ಟೆಕ್​​ ಸ್ಟಾರ್ಟಪ್​ ಮ್ಯೂಸ್ ಎಂಬ ಸಂಸ್ಥೆಯು​ ಧರಿಸಬಹುದಾದ ಸ್ಮಾರ್ಟ್​ಉಂಗುರ ಅಭಿವೃದ್ಧಿಪಡಿಸಿರುವುದಾಗಿ ಘೋಷಿಸಿದೆ. ಈ ಉಂಗುರವು ಸುಧಾರಿತ ಆರೋಗ್ಯ ಟ್ರ್ಯಾಕಿಂಗ್​ ಮಾಡುವ ಜೊತೆಗೆ ಹಣ ಪಾವತಿಯ ತಂತ್ರಜ್ಞಾನ ಸೌಲಭ್ಯ ಹೊಂದಿದೆ.

ಬೆಂಗಳೂರು ಮೂಲದ ಮ್ಯೂಸ್​ ವೇರಬಲ್ ಸಂಸ್ಥೆಯನ್ನು ಐಐಟಿ ಮದ್ರಾಸ್​ನ ಪದವೀಧರರಾದ ಕೆ.ಎಲ್.​ಎನ್. ಸಾಯಿ ಪ್ರಶಾಂತ್​ ಮತ್ತು ಯತೀಂದ್ರ ಅಜಯ್​ ಕೆ.ಎ. ಮತ್ತು ಎನ್​ಐಟಿ ವಾರಂಗಲ್​ ಪದವೀಧರ ಪ್ರತ್ಯುಷ್​​ ಕೆ. ಸ್ಥಾಪಿಸಿದ್ದಾರೆ.

ರಿಂಗ್​ ಒನ್​ ಎಂಬ ಹೆಸರಿನಿಂದ ಕರೆಯಲ್ಪಡುತವ ಈ ಸಾಧನ ಹೃದಯಬಡಿತ, ರಕ್ತದ ಆಕ್ಸಿಜನ್​, ತಾಪಮಾನ, ಉಸಿರಾಟ ದರ, ಹೃದಯ ಬಡಿತ ಮತ್ತು ರಕ್ತದೊತ್ತಡ ಅಳೆಯುತ್ತದೆ. ಇದು ಸ್ಮಾರ್ಟ್​​ ವಾಚ್​ಗಳಿಗಿಂತ 10 ಪಟ್ಟು ಹಗುರವಿದ್ದು, ದಿನದ 24 ಗಂಟೆಯೂ ಧರಿಸಬಹುದು. ಇದರ ಬ್ಯಾಟರಿ ಬಾಳ್ವಿಕೆ 7 ದಿನಗಳ ಕಾಲ ಬರಲಿದೆ.

ಪೇಮೆಂಟ್​ ಹೇಗೆ?: ಸಣ್ಣ ಪ್ರಮಾಣದ ಮೂಲಕ ಎನ್​ಎಫ್​ಸಿ ಪೇಮೆಂಟ್​ ಮತ್ತು ಆರೋಗ್ಯ ಪತ್ತೆ ಮಾಡುವ ಪ್ರಪಂಚದ ಮೊದಲ ಸ್ಮಾರ್ಟ್​​ ರಿಂಗ್​ ಇದಾಗಿದೆ. ಮ್ಯೂಸ್​ಗೆ ದೊಡ್ಡ ಪೇಮೆಂಟ್​​ ನೆಟ್​ವರ್ಕ್​ ಸಹಭಾಗಿತ್ವವಿದ್ದು, ಇದರಲ್ಲಿ ಮಾಸ್ಟರ್​ ಕಾರ್ಡ್​​, ವಿಸಾ ಮತ್ತು ರುಪೆ ಇದೆ. ಭಾರತ, ಅಮೆರಿಕ, ಕೆನಡಾ, ಆಸ್ಟ್ರೇಲಿಯಾ, ಸಿಂಗಾಪುರ್ ಮತ್ತು ಯುಎಇಯಲ್ಲಿ ಲೈವ್​ ಪೇಮೆಂಟ್​ ಮಾಡಬಹುದು.

ಈ ರಿಂಗ್​ನ ಬೆಲೆಯ ಕುರಿತು ಸಂಸ್ಥೆ ತಿಳಿಸಿಲ್ಲ. ಜಾಗತಿಕವಾಗಿ ಸೆಪ್ಟೆಂಬರ್​ 27ರಂದು ಈ ಉತ್ಪನ್ನ ಬಿಡುಗಡೆಯಾಗುತ್ತಿದ್ದು, ಭಾರತದಲ್ಲಿ ಅಕ್ಟೋಬರ್​ 25ರಂದು ಬಿಡುಗಡೆಯಾಲಿದೆ. ಮುಂಗಡ ಬುಕ್ಕಿಂಗ್​ ವೆಬ್​ಸೈಟ್​ನಲ್ಲಿ ಸಾಧ್ಯವಿದೆ.

"ನಿರ್ದಿಷ್ಟ ದತ್ತಾಂಶವನ್ನು ಪಡೆಯಲು ಮಣಿಕಟ್ಟು ಸೂಕ್ತ ಸ್ಥಾನವಲ್ಲ. ಹಾಗೆಯೇ ಅನೇಕ ಮಂದಿ ಮಲಗುವಾಗ ತಮ್ಮ ಮಣಿಕಟ್ಟಿನ ಟ್ರ್ಯಾಕರ್​ ತೆಗೆದಿಡುತ್ತಾರೆ. ಇದಕ್ಕೆ ಬೆರಳು ಸರಿಯಾದ ಸ್ಥಳವಾಗಿದ್ದು, ಇಲ್ಲಿಂತ ಉತ್ತಮ ದತ್ತಾಂಶ ಪಡೆಯಬಹುದು ಎಂಬುದನ್ನು ನಾವು ಪತ್ತೆ ಮಾಡಿದೆವು" ಎನ್ನುತ್ತಾರೆ ಮ್ಯೂಸ್​ ವೇರಬಲ್​ನ ಸಹ ಸಂಸ್ಥಾಪಕ, ಮುಖ್ಯ ನಿರ್ವಾಹಕ ಅಧಿಕಾರಿ ಪ್ರತ್ಯುಷ್​ ಕೆ.

ರಿಂಗ್​ ಒನ್​ ಫ್ಯಾಷನ್​ ಟಚ್​ ಕೂಡ ಹೊಂದಿದೆ. ಉಂಗುರದೊಳಗಿನ ಪ್ರದೇಶದಲ್ಲಿ ಚಕ್ರವಿದೆ. ಹೊರಗಿನ ಪ್ರದೇಶವನ್ನು ಸುಲಭವಾಗಿ ತಿರುಗಿಸುವ ಮೂಲಕ ಅಪ್ಡೇಟ್​ ಪಡೆಯಬಹುದು. ರಿಂಗ್​ ಅನ್ನು ಎಡಭಾಗಕ್ಕೆ ತಿರುಗಿಸಿದರೆ ವರ್ಕೌಟ್​ ಶುರು ಮಾಡಬಹುದು. ರಿಂಗ್​ ಅನ್ನು ಬಲಭಾಗಕ್ಕೆ ತಿರುಗಿಸಿದರೆ ಸುರಕ್ಷಿತ ಪೇಮೆಂಟ್​ ಮೂಡ್​ ನಡೆಸಬಹುದು.

ಇದನ್ನು ಟೈಟಾನಿಯಂ ಗ್ರೇಡ್​ 2 ಮತ್ತು ಸೆರಾಮಿಕ್​ನಿಂದ ತಯಾರಿಸಲಾಗಿದೆ. ರಿಂಗ್​ ಒನ್​ ಹಗುರ, ಗಟ್ಟಿಯಾಗಿದೆ. ಇದು ಬಹುಹಂತದ ಕೋಟಿಂಗ್​ ಹೊಂದಿದೆ. ಡೈಮಂಡ್​ ಪಾಲಿಶಿಂಗ್​ ಮಾಡಲಾಗಿದೆ. ಅದ್ಭುತ ಫಿನಿಶಿಂಗ್​ ಕಾಣಬಹುದು. ಸ್ಕ್ರಾಚ್​ ತಡೆಯಬಲ್ಲುದು. ಉಂಗುರದ ಒಳಭಾಗದಲ್ಲಿ ವೈದ್ಯಕೀಯ ಮಟ್ಟದ ಎಪೊಕ್ಸಿಯನ್ನು ಬಳಕೆ ಮಾಡಲಾಗಿದ್ದು, ಬಳಕೆದಾರರು ಆರಾಮದಾಯಕವಾಗಿ ಧರಿಸಬಹುದು.

ರಿಂಗ್​ ಒನ್​ 100 ಮೀಟರ್​​ ವಾಟರ್​ ರೆಸಿಸ್ಟೆಂಟ್​ ಆಗಿದ್ದು, ಬಳಕೆದಾರರು ಈಜುವಾಗ, ಸ್ನಾನ ಮಾಡುವಾಗ ತೆಗೆದಿಡುವ ಅವಶ್ಯಕತೆ ಇಲ್ಲ. ಸಿಲ್ವರ್​ ಮತ್ತು ಕಪ್ಪು ಬಣ್ಣ, ಗೋಲ್ಡ್​ ಮತ್ತು ರೋಸ್​​ ಗೋಲ್ಡ್​ ಬಣ್ಣದಲ್ಲಿ ಸದ್ಯ ಲಭ್ಯವಿದೆ.

ಮ್ಯೂಸ್​, 18 ಕ್ಯಾರೆಟ್​ ಬಂಗಾರದ ಸ್ಮಾರ್ಟ್​ ಉಂಗುರವನ್ನು ಸೀಮಿತ ಸಂಖ್ಯೆಯಲ್ಲಿ ಹೊರತರುವ ಆಲೋಚನೆ ನಡೆಸಿದೆ. ರಿಂಗ್​ ಒನ್​ 9 ಸೈಜ್​ನಲ್ಲಿ ಸಿಗುತ್ತದೆ. ಗ್ರಾಹಕರು ತಮ್ಮ ಪರ್ಫೆಕ್ಟ್​ ಗಾತ್ರವನ್ನು ಆಯ್ಕೆ ಮಾಡಬಹುದು. (ಐಎಎನ್‌ಎಸ್)

ಇದನ್ನೂ ಓದಿ: ಸೋಷಿಯಲ್​ ಮೀಡಿಯಾದಲ್ಲಿನ ಮಾನಸಿಕ ಆರೋಗ್ಯದ ಚರ್ಚೆಗಳು ಉದ್ಯೋಗದ ಮೇಲೆ ಪರಿಣಾಮ ಬೀರಲಿದೆ: ಅಧ್ಯಯನ

Last Updated : Aug 31, 2023, 5:36 PM IST

ABOUT THE AUTHOR

...view details