ಕರ್ನಾಟಕ

karnataka

AI ಬಳಸಿ ಡಯಟ್​ ಪ್ಲಾನ್​​ ಮಾಡುವ ಮುನ್ನ ಸುರಕ್ಷತೆ ಮತ್ತು ನಿಖರತೆ ಪರಿಶೀಲಿಸಿ..

By

Published : Jun 24, 2023, 2:52 PM IST

ಡಯಟ್​ ಪ್ಲಾನ್​ನಲ್ಲಿ ಎಐ ಹೇಗೆ ಸಹಾಯಕವಾಗಬಲ್ಲದು ಎಂಬ ಕುರಿತು ಕ್ವೀನ್ಸ್​ ಯುನಿವರ್ಸಿಟಿ ಪ್ರೊ. ಡೇನಿಯಲ್​ ಮೆಕ್​ಕ್ಯಾರ್ಥೆ ವಿವರಣೆ ನೀಡಿದ್ದಾರೆ. ಇದರಲ್ಲಿ ಆಹಾರದ ಆಯ್ಕೆಗಳು ಉತ್ತಮವಾಗಿದ್ದರೂ, ಇವುಗಳ ಬಳಕೆ ಮುನ್ನ ಸುರಕ್ಷತೆ, ನಿಖರತೆಗೆ ಗಮನ ನೀಡಿ ಎಂದು ಸಲಹೆ ನೀಡಿದ್ದಾರೆ.

Before making a diet plan using AI, check safety and accuracy
Before making a diet plan using AI, check safety and accuracy

ಬೆಂಗಳೂರು: ಚಾಟ್​ಜಿಪಿಟಿಯಂತಹ ಕೃತಕ ಬುದ್ಧಿಮತ್ತೆಗಳು ಮಾನವನಿಗೆ ಹೇಗೆ ಕೆಲಸ ಮಾಡುತ್ತದೆ ಎಂಬುದರ ಕುರಿತು ಪ್ರಯೋಗ ನಡೆಯುತ್ತಲೇ ಇದೆ. ಅದರಲ್ಲಿ ಒಂದು ಡಯಟ್​ ಪ್ಲಾನ್​. ಈ ವಿಚಾರ ಹುಡುಕಾಟ ನಡೆಸಿದಾಗ ಅನೇಕ ರೀತಿಯ ಪ್ರಖ್ಯಾತ ಆಹಾರ ರಿಕ್ವೆಸ್ಟ್​​ಗಳು ಬರಬಹುದು. ಅನೇಕ ಬಳಕೆದಾರರು, ತಮ್ಮ ವೈಯಕ್ತಿಕ ಆಹಾರದ ಗುರಿಗಳನ್ನು ತಲುಪಲು ಮೆನು ಪ್ಲಾನ್​ (ಊಟದ ಯೋಜನೆ)ಗಳ ಕುರಿತು ಸಹಾಯವನ್ನು ಕೇಳುತ್ತಾರೆ. ಆದರೆ, ತಂತ್ರಜ್ಞಾನ ಎಷ್ಟು ಪರಿಣಾಮಕಾರಿಯಾಗಿ ನಿಮಗೆ ಆಹಾರ ಪದ್ಧತಿ ಸಲಹೆ ನೀಡುತ್ತದೆ ಎಂಬುದು ಮುಖ್ಯ. ಗ್ರಾಹಕರ ಮತಗಟ್ಟೆ ಪ್ರಕಾರ, ಐದರಲ್ಲಿ ಮೂವರು ಗ್ರಾಹಕರು ತಾವು ಆರೋಗ್ಯಯುತ ಡಯಟ್​ ಅನ್ನು ಒಪ್ಪಿದ್ದಾರೆ. ಶೇ 73ರಷ್ಟು ಮಂದಿ ಪರಿಸರದ ಮೇಲೆ ಕಡಿಮೆ ಪರಿಣಾಮ ಬೀರುವ ಆಹಾರವನ್ನು ಕೊಳ್ಳುವುದು ಅವಶ್ಯಕ ಎಂದು ಭಾವಿಸಿದ್ದಾರೆ.

ಗುಣಮಟ್ಟದ ಆಹಾರಗಳು ಕೂಡ ದೀರ್ಘಾವಧಿ ರೋಗದ ಸಮಸ್ಯೆ ಮತ್ತು ಸಾವಿಗೆ ಜಾಗತಿಕವಾಗಿ ಕಾರಣವಾಗುತ್ತಿದೆ. ಜೊತೆಗೆ ಹಸಿರು ಮನೆ ಪರಿಣಾಮದಿಂದ ಹೊರಸೂಸುವ ಅನಿಲವೂ ಎಲ್ಲಾ ಆಹಾರಗಳೊಂದಿಗೆ ಸಂಬಂಧ ಹೊಂದಿದೆ. ಈ ಹಿನ್ನೆಲೆಯಲ್ಲಿ, ಗುರಿಗಳಿಂದ ನಡವಳಿಕೆಗೆ ಪರಿವರ್ತನೆಯ ಬದಲಾವಣೆಯನ್ನು ಸಾಧಿಸಲು ಸಹಾಯದ ಅಗತ್ಯವಿದೆ ಎಂಬುದು ಸ್ಪಷ್ಟವಾಗಿದೆ.

ಆದಾಗ್ಯೂ, ಈ ಡಯಟ್​ನಲ್ಲಿ ತೋರಿಸಿದ ಶೇ 19.9ರಷ್ಟು ಯುರೋಪಿಯನ್ನರು ಸ್ವಯಂ ವರದಿ ಆಹಾರ ಅಲರ್ಜಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ವಾರದಲ್ಲಿ ನಾವು ಕೊಳ್ಳುವ ಆಹಾರದಲ್ಲಿ ಶೇ 12ರಿಂದ 27ರಷ್ಟಕ್ಕೂ ಹೆಚ್ಚಿನವುಗಳು ಯಾವುದೇ ಅಲರ್ಜಿಯನ್ನು ಹೊಂದಿಲ್ಲ. ಈ ಎಐ ಅನೇರಕ ಆರೋಗ್ಯಕರ ಆಹಾರ ಪದ್ಧತಿ ಹೊಂದಲು ಸಹಾಯ ಮಾಡುತ್ತದೆ. ಆದರೆ, ಕೆಲವು ಅರ್ಲಜಿ ಹೊಂದಿರುವ ಜನರಿಗೆ ಇದು ಅಪಾಯಕಾರಿಯಾಗಿರುತ್ತದೆ.

ಹೇಗೆ ಎಐ ಸಹಾಯ ಮಾಡುತ್ತದೆ: ಎನ್​ಎಲ್​ಪಿ ಎಂಬ ನಿರ್ದಿಷ್ಟ ಎಐ ಬಳಕೆ ಮಾಡಿದ ಕೆನಡಾದಲ್ಲಿನ ಅಕಾಡೆಮಿಕ್ಸ್​ಗಳು, ಆಹಾರದ ಪಟ್ಟಿಯನ್ನು ಆಯ್ಕೆ ಮಾಡಿದ್ದಾರೆ. ಪೋಷಕಾಂಶಯುಕ್ತ ವರ್ಗದಲ್ಲಿ ಈ ಆಹಾರ ಉತ್ಪನ್ನಗಳ ವರ್ಗೀಕರಿಸಲಾಗಿದೆ. ಈ ಕೆಲಸದಲ್ಲಿ ದೊಡ್ಡ ಮಟ್ಟದ ಆಹಾರ ಉತ್ಪನ್ನಗಳನ್ನು ಹುಡುಕುವ ಕೆಲಸವನ್ನು ತಂತ್ರಜ್ಞಾನ ಕಡಿಮೆ ಮಾಡಿದೆ. ಈ ರೀತಿ ಆಹಾರ ಪತ್ತೆಗೆ ತಂತ್ರಜ್ಞಾನ ಉಪಯೋಗಿಸುವ ಅನೇಕ ವಾಣಿಜ್ಯ ಕೊಡುಗೆಗಳು ಅಸ್ತಿತ್ವದಲ್ಲಿದೆ. ಫುಡ್​ ಮೆಸ್ಟ್ರೊ, ಸ್ಪೂನ್​ ಗುರುಗಳು ಕಳೆದ ಎಂಟು ವರ್ಷಗಳಿಂದ ಜಾಗತಿಕವಾಗಿ ಕೆಲಸ ಮಾಡುತ್ತಿದೆ. ಇದು ಆಹಾರ ಹುಡುಕಾಟವನ್ನು ಸರಳಗೊಳಿಸಿ, ಆನ್‌ಲೈನ್ ಕಿರಾಣಿ ಶಾಪಿಂಗ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಹುಡುಕಲು ಅವರಿಗೆ ಸಹಾಯ ಮಾಡುತ್ತಿದೆ. ನೋಂದಾಯಿತ ಪೌಷ್ಟಿಕತಜ್ಞರೊಂದಿಗೆ ಸಹ-ಅಭಿವೃದ್ಧಿಪಡಿಸಲಾಗಿದೆ.

ಎಐ ಎಲ್​ಎಲ್​ಎಂ ಮತ್ತು ಮಷಿನ್​ ಲರ್ನಿಂಗ್​ ಅನ್ನು ಬಳಕೆ ಮಾಡಿ, ಪದ ಮತ್ತು ಟೆಕ್ಸ್ಟ್​​ ಅನ್ನು ಪತ್ತೆ ಮಾಡುವುದರ ಜೊತೆಗೆ ಅದರ ಪಠ್ಯಆಧಾರಿತ ಪ್ರಾಂಪ್ಟ್‌ಗಳಿಗೆ ಮಾನವ ರೀತಿಯ ಪ್ರತಿಕ್ರಿಯೆಗಳನ್ನು ಕ್ರಮ ಮತ್ತು ಸಂದರ್ಭವನ್ನು ಅರ್ಥ ಮಾಡಿಕೊಳ್ಳುತ್ತದೆ. ಚಾಟ್​​ಜಿಪಿಟಿಯಂತಹ ಎಐ ಚಾಟ್​​ಬೂಟ್​ಗಳು, ಪ್ರಶ್ನೆಗಳನ್ನು ಸಂಶ್ಲೇಷಿಸಿ, ಪಠ್ಯದ ಸಾರಾಂಶವನ್ನು ನೀಡುತ್ತದೆ. ಇದು ಆಹಾರದ ಯೋಜನೆ, ರೆಸಿಪಿ ಐಡಿಯಾ ಮತ್ತು ಶಾಪಿಂಗ್​ ಲಿಸ್ಟ್​​ಗೆ ತಕ್ಕಂತೆ ಆಯ್ಕೆ ನೀಡುತ್ತದೆ.

ಚಾಟ್​ಬಾಟ್ ಪರೀಕ್ಷೆ: ಚಾಟ್​ಬಾಟ್​ ಮೆನು ಪ್ಲಾನಿಂಗ್​ ಮತ್ತು ಡಯಟರಿ ಸಲಹೆಗಳ ಕುರಿತು ತಜ್ಞರು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. ಚಾಟ್​ಬಾಟ್​​ ಅಲರ್ಜಿಯನ್ನು ಹೊಂದಿರುವಂತಹ 56 ಆಹಾರಗಳನ್ನು ಡಯಟ್​ ಪ್ಲಾನ್​ನಲ್ಲಿ ಸೇರಿಸಿದೆ. ಇದು ಅಸುರಕ್ಷಿತ ಯೋಜನೆಯನ್ನು ಕೂಡ ಬಿಂಬಿಸುತ್ತದೆ. ಇದರಲ್ಲಿ ಅನೇಕ ತಪ್ಪುಗಳಿವೆ ಎಂದಿದ್ದಾರೆ.

ಇನ್ನು ಚಾಟ್​ಜಿಪಿಟಿಯ ವೈಯಕ್ತಿಕ ಸ್ಥೂಲಕಾಯದ ಚಿಕಿತ್ಸೆಯನ್ನು ಪರಾಮರ್ಶಿಸಿದಾಗ, ಇದರಲ್ಲಿ ರೋಗಿಗಳ ಖಾಸಗಿತನ ಮತ್ತು ಸರಕ್ಷತೆ ಕಾಳಜಿ ಮೂಡುತ್ತದೆ. ಜೊತೆಗೆ ಇದು ನಂಬಿಕೆಗೆ ಅನರ್ಹವಾಗಿದ್ದು, ಇದು ಹಾನಿಕಾರಕವೂ ಆಗಬಹುದು. ಈ ಮಾದರಿಗಳು ವೃತ್ತಿಪರ ಗುಣಮಟ್ಟಕ್ಕೆ ಹೊಂದಿಕೆಯಾಗುವುದಿಲ್ಲ.

ಚಾಟ್​ಜಿಪಿಟಿಯ ಮೂಲಕ ಟೈಪ್​ 2 ಡಯಾಬಿಟಿಸ್​​ಗೆ ಅತ್ಯುತ್ತಮ ಡಯಟ್​​ ಪರಾಮರ್ಶಿಸಿದ ಡಯಟಿಷಿಯನ್​ಗಳು, ಇದರಲ್ಲೂ ಅನೇಕ ತಪ್ಪನ್ನು ಪತ್ತೆ ಮಾಡಿದ್ದಾರೆ. ಚಾಟ್​ಬಾಟ್​​ ಇಂತಹ ಪರಿಸ್ಥಿತಿಯಲ್ಲಿ ಸರಿ ಹೊಂದುವ ಆಹಾರದ ಆಯ್ಕೆ ನೀಡುತ್ತದೆ. ಅದು ಕೂಡ ಮುನ್ನೆಚ್ಚರಿಕೆ ಇಲ್ಲದೆ. ಆಹಾರದ ಯೋಜನೆಗಳ ಕುರಿತು ಇದು ನೀಡುವ ಉತ್ತರಗಳು ಕಾಳಜಿದಾಯಕವಾಗಿದೆ. ಇದಕ್ಕೆ ಪರಿಹಾರವನ್ನು ಹುಡುಕಬೇಕಿದ್ದು, ಗ್ರಾಹಕರು ಬಳಕೆ ಮಾಡದಂತೆ ಸಲಹೆ ಮಾಡುತ್ತಾರೆ.

ಮಾಹಿತಿಯ ಕೊರತೆಯಿಂದಾಗಿ ಈ ಉತ್ತರಗಳು ಕೂಡಿದೆ. ಇವುಗಳನ್ನು ವೈಜ್ಞಾನಿಕ ಗುಣಮಟ್ಟದಲ್ಲಿ ಪರಿಶೀಲನೆ ನಡೆಸಿಲ್ಲ. ಹ್ರದ್ರೋಗ ಮತ್ತು ಡಯಟ್​ ಸಂಬಂಧ ಹೃದ್ರೋಗ ತಜ್ಞರು ಇದನ್ನು ಬಳಕೆ ಮಾಡಿದಾಗ, ಇದರ ಉತ್ತರದಲ್ಲಿ ಸಂಶೋಧನ ಅಧ್ಯಯನಗಳು ತಪ್ಪಾಗಿ ಅರ್ಥೈಸಲಾಗಿದೆ ಎಂದಿದ್ದಾರೆ.

ಇದನ್ನೂ ಓದಿ: AI ಮಾಡೆಲ್​​ಗಳಿಗೂ ಬರಲಿದೆ ಆ್ಯಪ್ ಸ್ಟೋರ್​: ಇದು OpenAI ಯೋಜನೆ

ABOUT THE AUTHOR

...view details