ಲಖನೌ: ಹೃದಯ ವೈಫಲ್ಯ ಎಂಬುದು ಜಾಗತಿಕ ಸಾವಿನ ಸಂಖ್ಯೆಯಲ್ಲಿ ಪ್ರಮುಖ ಕಾರಣವಾಗಿದೆ. ಹೃದಯ ವೈಫಲ್ಯಕ್ಕೆ ವಿವಿಧ ಕಾರಣಗಳನ್ನು ತಜ್ಞರು ಈಗಾಗಲೇ ಪಟ್ಟಿ ಮಾಡಿದ್ದಾರೆ. ಈ ಹೃದಯ ವೈಫಲ್ಯವಾಗುವ ಮುನ್ನ ಇದು ಅನೇಕ ಚಿಹ್ನೆಗಳನ್ನು ಮತ್ತು ಅಪಾಯದ ಎಚ್ಚರಿಕೆಗಳನ್ನ ನೀಡುತ್ತದೆ ಎಂದು ತಜ್ಞರು ತಿಳಿಸಿದ್ದಾರೆ. ವೈದ್ಯಕೀಯ ತಜ್ಞರು ತಿಳಿಸುವಂತೆ, ಜನರು ಜೀವನದಲ್ಲಿ ಸಾಮಾನ್ಯ ಆಯಾಸವನ್ನು ಮತ್ತು ಪಾದದಲ್ಲಿ ಊತ ಆಗುವುದನ್ನು ನಿರ್ಲಕ್ಷ್ಯಿಸುತ್ತಾರೆ ಎಂದಿದ್ದಾರೆ.
ಹಿರಿಯ ಹೃದ್ರೋಗ ತಜ್ಞ ಡಾ ನಕುಲ್ ಸಿನ್ಹಾ ಹೇಳುವಂತೆ, ತೊಂದರೆಗೆ ಒಳಗಾಗುವ ಮುನ್ನ ಹೃದಯವೂ ನಿಮ್ಮ ಗಮನಕ್ಕೆ ಬರಲಿ ಎಂದು ಅನೇಕ ಚಿಹ್ನೆಗಳನ್ನು ನೀಡುತ್ತದೆ. ಇದಕ್ಕೆ ಪ್ರತಿಕ್ರಿಯಿಸದೇ ಇರುವುದು ದೊಡ್ಡ ತಪ್ಪು. ಈ ರೀತಿಯ ಚಿಹ್ನೆಗಳನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ ಎಂದಿದ್ದಾರೆ.
ಇವು ಆರಂಭಿಕ ಹಂತದ ಚಿಹ್ನೆಗಳು: ಆಯಾಸ, ಉಸಿರಾಡಲು ಕಷ್ಟ, ಸಾಮಾನ್ಯ ಕೆಲಸ ಮಾಡಲು ಆಗದಿರುವ ನಿಶಕ್ತಿ, ಯಾವುದೇ ಕಾರಣವಿಲ್ಲದೇ ತೂಕದ ಹೆಚ್ಚಳ, ಪಾದದಲ್ಲಿ ಊಟ ಇದು ಹೃದಯ ವೈಫಲ್ಯಕ್ಕೆ ಕಾರಣವಾಗುವ ಆರಂಭಿಕ ಲಕ್ಷಣಗಳಾಗಿದೆ. ಹೃದಯಘಾತ ತಕ್ಷಣಕ್ಕೆ ಸಂಭವಿಸಿದರೂ, ಹೃದಯದ ತೊಂದರೆ ಕ್ರಮೇಣವಾಗಿ ಉಲ್ಬಣಗೊಳ್ಳುತ್ತದೆ. ಇದನ್ನು ಆರಂಭಿಕ ಹಂತದಲ್ಲೇ ಪತ್ತೆ ಮಾಡಬಹುದಾಗಿದೆ.
ಮತ್ತೊಬ್ಬ ಪ್ರಮುಖ ಹೃದಯ ತಜ್ಞ ಡಾ ಮನ್ಸೂರ್ ಹಸನ್ ಹೇಳುವಂತೆ, ಹೃದಯ ವೈಫಲ್ಯಕ್ಕೆ ಪ್ರಮುಖ ಕಾರಣ ಯಾವಾಗ ಹೃದಯ ಸರಿಯಾಗಿ ರಕ್ತ ಪರಿಚಲನೆ ಮಾಡಲು ಸಾಧ್ಯವಾಗದೇ ಹೋದಾಗ. ಕಂಜೆಸ್ಟಿವ್ ಹೃದಯ ವೈಫಲ್ಯಕ್ಕೆ ಇಲ್ಲಿಯವರೆಗೆ ಯಾವುದೇ ಗುಣ ಲಕ್ಷಣ ಇಲ್ಲ. ಈ ಹಿನ್ನೆಲೆ ಕೆಲವು ದಿನ ಅಥವಾ ವಾರಗಳಿಂದ ಈ ರೀತಿಯ ಗುಣ ಲಕ್ಷಣ ಕಂಡು ಬಂದರೆ, ತಕ್ಷಣಕ್ಕೆ ವೈದ್ಯರ ಸಂಪರ್ಕಕ್ಕೆ ಒಳಗಾಗಬೇಕು.