ಲಂಡನ್:ದೀರ್ಘಕಾಲದ ಬ್ರಾಂಕಾಯೈಟಿಸ್ ಮತ್ತು ಎಂಫೆಸೆಮ, ದೀರ್ಘಕಾಲದ ಪ್ರತಿರೋಧಕ ಶ್ವಾಸಕೋಶದ ಕಾಯಿಲೆ (ಸಿಒಪಿಡಿ) ಸಮಸ್ಯೆಗಳಿಂದ ಜಾಗತಿಕವಾಗಿ 400 ಮಿಲಿಯನ್ ಜನ ಬಳಲುತ್ತಿದ್ದಾರೆ. ಇದು ಜನರಲ್ಲಿ ಉಸಿರಾಟ ಸಮಸ್ಯೆ ಮತ್ತು ದೈಹಿಕ ಕ್ರಿಯೆಗೆ ಅಡ್ಡಿ ಉಂಟುಮಾಡುತ್ತದೆ. ಅಲ್ಲದೇ, ಇದು ಹೃದಯಾಘಾತ ಮತ್ತು ಪಾರ್ಶ್ವವಾಯು ಅಪಾಯ ಹೆಚ್ಚಳಕ್ಕೆ ಕಾರಣವಾಗುತ್ತಿದೆ. ಇಂತಹ ಸಮಸ್ಯೆಗೆ ಒಳಗಾದವರು 12 ವಾರಗಳ ಕಾಲ ಪ್ರತಿನಿತ್ಯದ ಬೀಟ್ರೂಟ್ ಜ್ಯೂಸ್ ಸೇವಿಸುವುದರಿಂದ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ ಎಂದು ಸಂಶೋಧನೆ ತಿಳಿಸಿದೆ.
ಯುರೋಪಿಯನ್ ರೆಸ್ಪಿರೆಟರಿ ಜರ್ನಲ್ನಲ್ಲಿ ಈ ಕುರಿತು ವರದಿ ಪ್ರಕಟಿಸಲಾಗಿದೆ. ಬೀಟ್ರೂಟ್ ಜ್ಯೂಸ್‌ನಲ್ಲಿ ಅಧಿಕ ಮಟ್ಟದ ನೈಟ್ರೆಟ್ ಪೂರಕ ಇದ್ದು, ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಇದು ಅಥ್ಲಿಟ್ಗಳಿಗೆ ತಮ್ಮ ಕ್ರೀಡಾ ಚಟುವಟಿಕೆಯಲ್ಲಿ ಉತ್ತಮ ನೈಟ್ರೆಟ್ ಪೂರಕದ ಮೂಲದಂತೆ ಬಳಕೆ ಮಾಡಬಹುದು. ಅಲ್ಲದೇ ಇದು ರಕ್ತದೊತ್ತಡ ನಿಯಂತ್ರಿಸುವಲ್ಲಿ ಸಹಾಯ ಮಾಡುತ್ತದೆ ಎಂದು ಅಧ್ಯಯನ ತಿಳಿಸಿದೆ ಎಂದು ಯುಕೆಯ ಲಂಡನ್ ಇಂಪಿರಿಯಲ್ ಕಾಲೇಜ್ನ ಪ್ರೊ.ನಿಕೊಲಾಸ್ ಹಾಪ್ಕಿನ್ಸ್ ತಿಳಿಸಿದ್ದಾರೆ.
ರಕ್ತದಲ್ಲಿನ ಹೆಚ್ಚಿನ ಮಟ್ಟದ ನೈಟ್ರೆಟ್ಗಳು ನೈಟ್ರಿಕ್ ಆಮ್ಲದ ಲಭ್ಯತೆಯನ್ನು ಹೆಚ್ಚಿಸುತ್ತದೆ. ಈ ರಾಸಾಯನಿಕವು ರಕ್ತನಾಳಗಳು ವಿಶ್ರಾಂತಿಗೆ ಸಹಾಯ ಮಾಡುತ್ತದೆ. ಇದು ಸ್ನಾಯುಗಳ ಸಾಮರ್ಥ್ಯ ಹೆಚ್ಚಿಸುತ್ತದೆ. ಸಿಒಪಿಡಿ ಹೊಂದಿರುವ 81 ಜನರ ಮೇಲೆ ಅಧ್ಯಯನ ನಡೆಸಲಾಯಿತು. ಇವರಲ್ಲಿ ಸಿಸ್ಟೊಲಿಕ್ ರಕ್ತದೊತ್ತಡ ಮಾಪನ ಮಾಡಿದಾಗ 130ಎಂಎಂಎಚ್ಜಿಗಿಂತ ಹೆಚ್ಚಿತು. ಈ ಸಿಸ್ಟೊಲಿಕ್ ರಕ್ತದೊತ್ತಡವು ರಕ್ತದೊತ್ತಡ ಮಟ್ಟ ಹೆಚ್ಚಲು ಕಾರಣ ಇದು 90 ಮತ್ತು 120 ಎಂಎಂಎಚ್ಜಿ ನಡುವಿರಬೇಕು.