ನವದೆಹಲಿ: ಬೇಸಿಗೆ ಬಂತೆಂದರೆ ಸಾಕು ದೇಹಕ್ಕೆ ತಂಪು ನೀಡುವ ಪಾನೀಯಗಳನ್ನು ಮನಸು ಬಯಸುತ್ತದೆ. ಈ ಸಮಯದಲ್ಲಿ ದೇಹ ನಿರ್ಬಲೀಕರಣಗೊಳ್ಳದಂತೆ, ರುಚಿಕರ ತಂಪಾಗಿರುವ ಈ ಪಾನೀಯಗಳು ನಿಮ್ಮನ್ನು ತಾಜಾತನದಿಂದ ಇರುವಂತೆ ಕಾಪಾಡುತ್ತದೆ. ಈ ಋತುಮಾನದಲ್ಲಿ ಹೆಚ್ಚಾಗಿ ಬಳಕೆಯಾಗುವ ಕೆಲವು ಪಾನೀಯಗಳನ್ನು ಒಮ್ಮೆ ಸವಿಯಲೇ ಬೇಕು.
ಆಮ್ ಪನ್ನಾ: ಬೇಸಿಗೆ ಎಂದರೆ ಅದು ಹಣ್ಣುಗಳ ರಾಜ ಮಾವಿನ ಸಮಯ. ಅದರಲ್ಲೂ ಮಾವು ಮಾಗುವ ಮೊದಲೇ ಅದರ ಹುಳಿ ಸಿಹಿ ತಿರಳಿನೊಂದಿಗೆ ಈ ಪಾನೀಯ ತಯಾರಿಸಬಹುದು. ಮಾವಿನ ತಿರುಳಿಗೆ, ಜೀರಿಗೆ, ಪುದಿನಾ ಎಲೆಗಳನ್ನು ಮಿಶ್ರಣ ಮಾಡಿ ಜ್ಯೂಸ್ ಮಾಡಿ ಕುಡಿಯಬಹುದು. ಪಕ್ಕಾ ಭಾರತೀಯ ಶೈಲಿಯ ಈ ಪಾನೀಯ ಮನತಣಿಸುವುದು ಮಾತ್ರವಲ್ಲದೇ ದೇಹಕ್ಕೂ ಶಕ್ತಿಯನ್ನು ನೀಡುತ್ತದೆ. ಇದು ದೇಹವನ್ನು ಹೈಡ್ರೇಟ್ ಆಗಿಡಲು ಸಹಾಯ ಮಾಡುತ್ತದೆ.
ಬೇಕಾಗುವ ಸಾಮಗ್ರಿ: ಹಸಿರು ಭರಿತ ಕಚ್ಛಾ ಮಾವು 500 ಗ್ರಾಂ, ಸಕ್ಕರೆ ಅರ್ಧ ಕಪ್, ಉಪ್ಪು 2 ಸ್ಪೂನ್, ಕಪ್ಪು ಉಪ್ಪು ರುಚಿಗೆ, ಉರಿದು ಪುಡಿ ಮಾಡಿದ ಜೀರಿಗೆ 2 ಟಿ. ಸ್ಪೂನ್, ಚೆನ್ನಾಗಿ ಹೆಚ್ಚಿದ ಪುದಿನಾ 2 ಟಿ. ಸ್ಪೂನ್, ನೀರು 2 ಕಪ್.
ಮಾಡುವ ವಿಧಾನ: ಮಾವಿನ ಹಣ್ಣನ್ನು ಮೃದುವಾಗುವಂತೆ ಬೇಯಿಸಿ, ಅದರ ಸಿಪ್ಪೆ ಬಣ್ಣ ಬದಲಾಯಿಸಿದ ಬಳಿಕ ಅದನ್ನು ತಣ್ಣಾಗಲು ಬಿಡಿ. ಸಿಪ್ಪೆ ತೆಗೆದು ಅದರ ತಿರುಳನ್ನು ಮೇಲೆ ಹೇಳಿದ ಪಾದಾರ್ಥಗಳೊಂದಿಗೆ ಹೆಚ್ಚಾಗಿ ರುಚ್ಚಿ. ಇದಕ್ಕೆ ಬೇಕಾದಲ್ಲಿ ಐಸನ್ನು ಸೇರಿಸಬಹುದು.
ಐಸ್ಡ್ ಜಲ್ಜೀರಾ: ಶಕ್ತಿಯುತವಾದ ಈ ಪಾನೀಯ ಚಯಪಚಯನಕ್ಕೂ ಸಹಾಯ ಮಾಡುತ್ತದೆ.
ಬೇಕಾಗುವ ಸಾಮಗ್ರಿಗಳು: ಹುಣಸೆಹಣ್ಣಿನ ತಿರುಳು 125 ಗ್ರಾಂ, ಪುದಿನಾ ಎಲೆ 3 ಟಿ. ಸ್ಪೂನ್, ಜೀರಿಗೆ ಪುಡಿ ಅರ್ಥ ಟಿ. ಸ್ಪೂನ್, ಬೆಲ್ಲ 50 ಗ್ರಾಂ, ಕಪ್ಪು ಉಪ್ಪು 4 ಸ್ಪೂನ್, ಶುಂಠಿ ಮಿಶ್ರಿತ ಉಪ್ಪು, ನಿಂಬೆ ರಸ 3-4 ಟಿ. ಸ್ಪೂನ್, ಚಿಟಿಕೆ ಖಾರದ ಪುಡಿ, ಗರಂ ಮಸಾಲ ಅರ್ಧ ಟಿ.ಸ್ಪೂನ್ ನೀರು ಅರ್ಧ ಲೀಟರ್.
ಮಾಡುವ ವಿಧಾನ:ಮೇಲೆ ತಿಳಿಸಿದ ಎlfl ಸಾಮಗ್ರಿಗಳನ್ನು ಚೆನ್ನಾಗಿ ಮಿಶ್ರಣ ಮಾಡಿ, ಮಿಕ್ಸಿ ಮಾಡಿ. ರಾತ್ರಿ ಇಡೀ ಹಾಗೇ ಬಿಡಿ. ಅದನ್ನು ನಂತರ ಸೋಸಿಕೊಳ್ಳಿ. ಅದನ್ನು ಸೇವಿಸಿ.
ಸತ್ತು ಶರಬತ್:ಬಿಹಾರದಲ್ಲಿ ಖ್ಯಾತಿ ಪಡೆದಿರುವ ಈ ಪಾನೀಯ ಬೇಸಿಗೆಯ ರುಚಿ ಹೆಚ್ಚಿಸುತ್ತದೆ. ಬಹುತೇಕರಿಗೆ ತಿಳಿದಿರುವ ಈ ಪಾನೀಯ ಮಾಡುವ ವಿಧಾನ ಕೂಡ ಸುಲಭ.