ಕರ್ನಾಟಕ

karnataka

ಬೇಸಿಗೆಯಲ್ಲಿ ತ್ವಚೆಯ ರಕ್ಷಣೆ ಹೇಗೆ ಎಂಬ ಚಿಂತೆಯೇ? ಇಲ್ಲಿದೆ ಸುಲಭ ಉಪಾಯ

By

Published : Apr 25, 2022, 9:32 AM IST

ಸ್ಕಿನ್‌ಕೇರ್ ಬ್ರ್ಯಾಂಡ್‌ನ ಸಿಇಒ ವೈಶಾಲಿ ಶಾರದಾ ಹಾಗೂ ಚರ್ಮ ತಜ್ಞ ಡಾ.ಸೈಲಜಾ ಸೂರಪನೇನಿ ಅವರು ಬೇಸಿಗೆಯಲ್ಲಿ ಚರ್ಮದ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬಹುದು, ನಮ್ಮ ಮನೆಯಲ್ಲೇ ಇರುವ ವಸ್ತುಗಳಿಂದ ಚರ್ಮವನ್ನು ಹೇಗೆ ರಕ್ಷಿಸಿಕೊಳ್ಳಬಹುದು ಎಂಬುದನ್ನು ಇಲ್ಲಿ ತಿಳಿಸಿದ್ದಾರೆ..

Beat the heat with these simple skincare hacks
ಬೇಸಿಗೆಯಲ್ಲಿ ತ್ವಚೆಯ ರಕ್ಷಣೆ ಹೇಗೆ ಎಂಬ ಚಿಂತಯೇ? ಇಲ್ಲಿದೆ ಸುಲಭ ಉಪಾಯ

ಹವಾಮಾನದಲ್ಲಿ ಬದಲಾವಣೆ ನಮ್ಮ ಚರ್ಮದಲ್ಲಿಯ ಬದಲಾವಣೆಗೆ ಕಾರಣವಾಗುತ್ತದೆ. ಬೇಸಿಗೆಯ ಉರಿಬಿಸಿಲಿಗೆ ಕಾಲಿಟ್ಟಿದ್ದೇವೆ. ದೇಹದಲ್ಲಿ ನೀರಿನಂಶ ಕಡಿಮೆಯಾಗುತ್ತಲೇ ಇರುತ್ತದೆ. ಎಷ್ಟು ನೀರು ಕುಡಿದರೂ ದಾಹ ತೀರದಂತಹ ಬೇಗೆ ಚರ್ಮದ ಕಾಂತಿಯಲ್ಲೂ ಏರುಪೇರಾಗಿಸುತ್ತದೆ. ಹಾಗಾಗಿ, ಬೇಸಿಗೆ ಬಂತೆಂದರೆ ನಾವು ಈಗಾಗಲೇ ದಿನನಿತ್ಯ ಕುಡಿಯುತ್ತಿದ್ದ ನೀರಿನ ಪ್ರಮಾಣವನ್ನು ಹೆಚ್ಚಿಸಲೇಬೇಕು.

ದೇಹ ಡೀಹೈಡ್ರೇಟ್​ ಆಗದಂತೆ ಇರಿಸಿಕೊಳ್ಳಲು ಅದರ ಜೊತೆಗೆ ಎಳನೀರು, ಕಬ್ಬಿನ ರಸ, ಇತರ ಮುಳ್ಳುಸೌತೆ ಹಾಕಿಟ್ಟ ದ್ರವಗಳನ್ನು ಹೆಚ್ಚು ಹೆಚ್ಚು ಸೇವಿಸಬೇಕಾಗುತ್ತದೆ. ಸ್ಕಿನ್‌ಕೇರ್ ಬ್ರ್ಯಾಂಡ್‌ನ ಸಿಇಒ ವೈಶಾಲಿ ಶಾರದಾ ಅವರು ಈ ಅವಧಿಯಲ್ಲಿ ತ್ವಚೆಗೆ ಆದಷ್ಟು ಪ್ಯಾರಾಬೆನ್-ಮುಕ್ತ, ಸುಗಂಧ-ಮುಕ್ತ ಮತ್ತು ಸಲ್ಫೇಟ್-ಮುಕ್ತ ಉತ್ಪನ್ನಗಳನ್ನು ಬಳಸಿ ಎಂದು ಸಲಹೆ ನೀಡುತ್ತಾರೆ. ಅದರೊಂದಿಗೆ ತ್ವಚೆಯ ರಕ್ಷಣೆಗೆ ನಾಲ್ಕು ಮುಖ್ಯ ಸಲಹೆಗಳನ್ನು ನೀಡಿದ್ದಾರೆ.

ತ್ವಚೆಯ ರಕ್ಷಣೆಗೆ ಸರಳ ಸಲಹೆ :ಬೇಸಿಗೆಯಲ್ಲಿ ತ್ವಚೆ ಹೆಚ್ಚು ಕಿರಿಕಿರಿಯುಂಟುಮಾಡುವುದಲ್ಲದೆ ಬಿಸಿಲಿಗೆ ಚರ್ಮ ಕಂದುಬಣ್ಣಕ್ಕೆ ತಿರುಗುತ್ತದೆ. ಈ ರೀತಿಯಾಗುವುದನ್ನು ತಡೆಗಟ್ಟಲು ಕ್ರೀಮ್​ಗಳ ಮೊರೆ ಹೋಗುವ ಬದಲು ಆದಷ್ಟು ನೈಸರ್ಗಿಕ ವಸ್ತುಗಳನ್ನು ಉಪಯೋಗಿಸಬೇಕು. ಉದಾಹರಣೆಗೆ ಅಲೋವೆರಾ, ಪುದೀನ, ಚೆಂಡುಹೂ, ರೋಸ್ ವಾಟರ್, ಮೊಸರು ಮತ್ತು ಶ್ರೀಗಂಧಗಳನ್ನು ಬಳಸುವುದು ಹೆಚ್ಚು ಪರಿಣಾಮಕಾರಿಯಾಗಿರುತ್ತೆ.

ಇಂತಹ ನೈಸರ್ಗಿಕ ವಸ್ತುಗಳಿಂದ ತಯಾರಿಸಿದ ಪದಾರ್ಥಗಳನ್ನು ಹಚ್ಚುವುದರಿಂದ ಚರ್ಮದ ಕಾಂತಿ ವೃದ್ಧಿಯಾಗುತ್ತದೆ. ಮತ್ತು ಒಳಗಿನಿಂದಲೇ ಚರ್ಮ ಜೀವಂತಿಕೆಯಾಗಿರುವಂತೆ ನೊಡಿಕೊಳ್ಳುತ್ತದೆ. ಮೊಸರನ್ನು ಎಕ್ಸ್‌ಫೋಲಿಯೇಟರ್ ಆಗಿ ಕಾರ್ಯನಿರ್ವಹಿಸುವ ಕಾರಣ, ಮುಖಕ್ಕೆ ಹಚ್ಚುವುದರಿಂದ ಸತ್ತ ಜೀವಕೋಶಗಳನ್ನು ನಾಶ ಮಾಡುತ್ತದೆ.

ಈಗ ಬೇಸಿಗೆಯಾಗಿರುವುದರಿಂದ ಜನರು ಮನೆಯಲ್ಲೇ ದೊರೆಯುವ ಉತ್ಪನ್ನಗಳನ್ನು ಬಳಸಬಹುದು. ಉದಾಹರಣೆಗೆ, ಆಲೂಗೆಡ್ಡೆ ಪೇಸ್ಟ್​ನಿಂದ ಟ್ಯಾನ್ ಹೋಗಲಾಡಿಸಬಹುದು. ಒಳ್ಳೆಯ ಫಲಿತಾಂಶಕ್ಕಾಗಿ ಆಲೂಗಡ್ಡೆಯನ್ನು ತುರಿ ಮಾಡಿ, ಅದರ ರಸವನ್ನು ದೇಹದ ಎಲ್ಲಾ ಭಾಗಗಳಿಗೆ ಹಚ್ಚಿಕೊಳ್ಳಬಹುದು. ಚರ್ಮವನ್ನು ಮೃದುಗೊಳಿಸಲು ಟೊಮ್ಯಾಟೋ ರಸವನ್ನು ಹಚ್ಚಿಕೊಳ್ಳಬಹುದು.

ಉತ್ತಮ ಫಲಿತಾಂಶಗಳನ್ನು ಪಡೆಯಲು ಸಾಧ್ಯವಾದಷ್ಟು ದಿನಕ್ಕೆ ಎರಡು ಬಾರಿಯಾದರೂ ತ್ವಚೆಯನ್ನು ಸ್ವಚ್ಛ ಮತ್ತು ತೇವಗೊಳಿಸುತ್ತಿರಬೇಕು. ಹಗಲಿನ ವೇಳೆಗೆ ಸ್ವಲ್ಪ ಕಡಿಮೆ ಮತ್ತು ರಾತ್ರಿಯ ಹೊತ್ತು ಹೆಚ್ಚು ಮಾಯಿಶ್ಚರೈಸರ್​ನಿಂದ ಸ್ವಚ್ಛಗೊಳಿಸಬೇಕು. ನಿಮ್ಮ ಚರ್ಮವನ್ನು ಎಲ್ಲಾ ರೀತಿಯ ಹಾನಿಕಾರಕ ಕಿರಣಗಳಿಂದ ರಕ್ಷಿಸಲು ನೀವು ಮನೆಯೊಳಗೆ ಇದ್ದರೂ, ಫೋನ್ ಅಥವಾ ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡುತ್ತಿದ್ದರೂ ಸಹ ಪ್ರತಿದಿನ ಸನ್‌ಸ್ಕ್ರೀನ್ ಅನ್ನು ಧರಿಸುವುದು ಉತ್ತಮ.

ಸಾಮಾನ್ಯವಾಗಿ ಎಲ್ಲಾ ಉತ್ಪನ್ನಗಳು ಎಲ್ಲಾ ರೀತಿಯ ಚರ್ಮಗಳಿಗೆ ಹೊಂದಿಕೆಯಾಗುವುದಿಲ್ಲ. ಹಾಗಾಗಿ, ನಿಮ್ಮ ಚರ್ಮಕ್ಕೆ ಒಪ್ಪುವಂತೆ ತಯಾರಿಸಿದ ಉತ್ಪನ್ನಗಳನ್ನು ಬಳಸಿ. ಉದಾಹರಣೆಗೆ, ನೀವು ಎಣ್ಣೆಯುಕ್ತ ಚರ್ಮವನ್ನು ಹೊಂದಿದ್ದರೆ ಎಣ್ಣೆಯುಕ್ತ ಚರ್ಮದ ಕ್ಲೆನ್ಸರ್ ಅನ್ನು ಬಳಸಿ. ತ್ವಚೆಗೆ ಬಳಸುವ ಉತ್ಪನ್ನಗಳ ಬಗ್ಗೆ ಮಾಹಿತಿ ಹೊಂದಿರುವುದು ಮತ್ತು ಸರಿಯಾದ ಕ್ರಮದಲ್ಲಿ ಬಳಸುವುದು ಕೂಡ ಚರ್ಮದ ಆರೋಗ್ಯವನ್ನು ಕಾಪಾಡಲು ಅಗತ್ಯವಾಗಿದೆ.

ಅಲ್ಲದೆ, ಬಿಸಿ ವಾತಾವರಣದಲ್ಲಿ ಕ್ರೀಮ್ ಆಧಾರಿತ ಉತ್ಪನ್ನಗಳನ್ನು ಬಳಸುವ ಬದಲು ಜೆಲ್ ಆಧಾರಿತ ಉತ್ಪನ್ನಗಳನ್ನು ಬಳಸಲು ಪ್ರಾರಂಭಿಸಿ. ಚರ್ಮದ ಹೊರಮೈಯೊಂದಿಗೆ ಒಳಭಾಗವೂ ಆರೋಗ್ಯಕರವಾಗಿದ್ದರೆ ಆಗ ನಮ್ಮಲ್ಲಿನ ಆತ್ಮವಿಶ್ವಾಸವೂ ವಿಭಿನ್ನವಾಗಿರುತ್ತದೆ. ಚರ್ಮ ತಜ್ಞ ಡಾ.ಸೈಲಜಾ ಸೂರಪನೇನಿ ಅವರು ಮನೆಯಲ್ಲಿದ್ದಾಗ ಅಭ್ಯಾಸ ಮಾಡಬಹುದಾದ ಕೆಲವು ಮನೆಮದ್ದುಗಳು ಮತ್ತು ಮೂಲ ಕ್ರಮಗಳನ್ನು ತಿಳಿಸಿದ್ದಾರೆ.

ಚರ್ಮದ ಮಡಿಕೆಗಳಿಂದಾಗಿ ಉಂಟಾದ ಚರ್ಮದ ದದ್ದುಗಳಿಗೆ :

  • ದದ್ದುಗಳು ಉಂಟಾಗಿರುವ ಜಾಗದ ಮೇಲೆ ಕ್ಯಾಲಮೈನ್ ಲೋಷನ್ ಅನ್ನು ದಿನಕ್ಕೆ 2-3 ಬಾರಿ ಹಚ್ಚಬೇಕು
  • ಟವೆಲ್ ಅನ್ನು ತಂಪು ನೀರಿನಲ್ಲಿ ಮುಳುಗಿಸಿ ಪೀಡಿತ ಪ್ರದೇಶದ ಮೇಲೆ ಇರಿಸಬೇಕು
  • ಅಲೋವೆರಾ ಜೆಲ್ ಹಚ್ಚುವುದು ಕೂಡ ತುಂಬಾ ಪರಿಣಾಮಕಾರಿ
  • ಪ್ರಿಕ್ಲಿ ಹೀಟ್​ ಪೌಡರ್​ ಚರ್ಮದ ಕಿರಿಕಿರಿಯನ್ನು ನಿವಾರಿಸಲು ಸಹಾಯ ಮಾಡುತ್ತದೆ
  • ಪರಿಸ್ಥಿತಿ ಹದಗೆಟ್ಟರೆ, ವೈದ್ಯರನ್ನು ಸಂಪರ್ಕಿಸಿ. ಅವರು ಮಾತ್ರೆಗಳು ಅಥವಾ ಉರಿಯೂತದ ಮುಲಾಮುಗಳಂತಹ ಸರಿಯಾದ ಔಷಧಗಳನ್ನು ಶಿಫಾರಸು ಮಾಡಬಹುದು.

ಫಂಗಲ್ ಇನ್​ಫೆಕ್ಷನ್​ ಮತ್ತು ಮೊಡವೆ ಸಮಸ್ಯೆಗಳಿಗೆ :

  • ಬೇಸಿಗೆಯಲ್ಲಿ ಮತ್ತು ವರ್ಕೌಟ್​ ನಂತರ ಹೆಚ್ಚಿನ ಬೆವರುವಿಕೆಯಿಂದಾಗಿ, ಕಂಕುಳ ಅಡಿ ಅಥವಾ ತೊಡೆಯ ಸಂಧಿಗಳಲ್ಲಿ ಶಿಲೀಂಧ್ರಗಳಿಂದ ಸೋಂಕುಗಳಾಗುವ ಸಾಧ್ಯತೆಯಿರುತ್ತದೆ. ಅದಕ್ಕಾಗಿ ವ್ಯಾಯಾಮದ ನಂತರ ತಕ್ಷಣ ಸ್ನಾನ ಮಾಡಿ
  • ಸಾಧ್ಯವಾದರೆ ಬೇಸಿಗೆಯಲ್ಲಿ ದಿನಕ್ಕೆರಡು ಬಾರಿ ಸ್ನಾನ ಮಾಡಿ
  • ಸ್ನಾನದ ನಂತರ ದೇಹವನ್ನು ಚೆನ್ನಾಗಿ ಒಣಗಲು ಬಿಡಿ
  • ದೇಹ ಒಣಗಿದ ನಂತರ ಟಾಲ್ಕಮ್ ಪೌಡರ್ ಬಳಸಿ
  • ಹಗುರವಾದ, ಹತ್ತಿ ಬಟ್ಟೆಗಳನ್ನು ಧರಿಸಿ

ಇದನ್ನೂ ಓದಿ:ಗರ್ಭಾವಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೀರಾ? ಈ ಸಲಹೆಗಳನ್ನು ನೆನಪಿನಲ್ಲಿಡಿ..

ABOUT THE AUTHOR

...view details