ಕರ್ನಾಟಕ

karnataka

ETV Bharat / sukhibhava

ಭವಿಷ್ಯದ ಸೋಂಕು ಎದುರಿಸಲು ಸನ್ನದ್ಧರಾಗಿ: WHO ಮುಖ್ಯಸ್ಥರ ಕರೆ - ಜಾಗತಿಕ ಆರೋಗ್ಯ ಬೆದರಿಕೆಗಳು ಮುಗಿದಿಲ್ಲ

ಕೋವಿಡ್​ ಸೋಂಕು ಇಂದು ಜಾಗತಿಕ ತುರ್ತು ಪರಿಸ್ಥಿತಿಯಾಗಿಲ್ಲದೇ ಇರಬಹುದು. ಆದರೆ, ಭವಿಷ್ಯದಲ್ಲಿ ಈ ರೀತಿ ಸೋಂಕು ಬರುವುದಿಲ್ಲ ಎಂಬ ನಿರ್ಲಕ್ಷ್ಯ ಬೇಡ ಎಂದು ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥರು ಎಚ್ಚರಿಕೆ ನೀಡಿದ್ದಾರೆ.

Be prepared to deal with future infections
Be prepared to deal with future infections

By

Published : May 24, 2023, 12:57 PM IST

ಕೋವಿಡ್​ 19 ಜಾಗತಿಕ ಆರೋಗ್ಯ ಪರಿಸ್ಥಿತಿ ಅಂತ್ಯಗೊಂಡಿದೆ. ಆದರೆ, ಕೋವಿಡ್​ ಜಾಗತಿಕ ಆರೋಗ್ಯ ಬೆದರಿಕೆಗಳು ಮುಗಿದಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೊಸ್​ ಅಧಾನೊಮ್​ ಘೆಬ್ರಿಯಸ್​​ ಎಚ್ಚರಿಸಿದ್ದಾರೆ. ಜಿನಿವಾದಲ್ಲಿ ನಡೆಯುತ್ತಿರುವ 76 ನೇ ವಿಶ್ವ ಆರೋಗ್ಯ ಅಸೆಂಬ್ಲಿಯಲ್ಲಿ ಮಾತನಾಡಿದ ಅವರು, ಹೊಸ ರೋಗ ಮತ್ತು ಸಾವಿನ ಉಲ್ಬಣ ಮಾಡುವ ಮತ್ತೊಂದು ರೂಪಾಂತರದ ಬೆದರಿಕೆ ಇದೆ. ಮತ್ತೊಂದು ರೂಪಾಂತರವು ಮಾರಣಾಂತಿಕ ಬೆದರಿಕೆಯೂ ಆಗಬಹುದು ಎಂದು ಅವರು ತಿಳಿಸಿದ್ದಾರೆ.

ಸಾಂಕ್ರಾಮಿಕವು ಮನುಷ್ಯನನ್ನು ಎದುರಿಸುವ ಏಕೈಕ ಬೆದರಿಕೆಯಾಗಿದ್ದು, ದೂರವಿದೆ. ಭವಿಷ್ಯದ ಸಾಂಕ್ರಾಮಿಕವನ್ನು ಎದುರಿಸಲು ಜಗತ್ತು ಸಿದ್ದವಾಗಬೇಕಿದೆ. ಮುಂದಿನ ಸೋಂಕು ಯಾವಾಗ ಬಂದು ಬಾಗಿಲು ಬಡಿಯುತ್ತದೆ. ಆಗ ಅದಕ್ಕೆ ನಿರ್ಣಾಯಕವಾಗಿ, ಸಾಮೂಹಿಕವಾಗಿ ಮತ್ತು ಸಮಾನವಾಗಿ ಉತ್ತರಿಸಲು ನಾವು ಸಿದ್ದರಾಗಬೇಕಿದೆ ಎಂದು ಘೆಬ್ರಿಯಸ್​ ಹೇಳಿದ್ದಾರೆ.

2030 ರ ಗುಡುವು ಹೊಂದಿರುವ ಸುಸ್ಥಿರ ಅಭಿವೃದ್ಧಿ ಗುರಿಗಳ ಅಡಿಗಳಲ್ಲಿ ಕೋವಿಡ್​ ಆರೋಗ್ಯ ಸಂಬಂಧಿತ ಗುರಿಗಳು ಗಮನಾರ್ಹ ಪರಿಣಾಮ ಹೊಂದಿವೆ. ಕೋವಿಡ್​ ಸೋಂಕು ತ್ರಿಪಲ್​ ಬಿಲಿಯನ್​ ಟಾರ್ಗೆಟ್​ (ಮೂರು ಶತಕೋಟಿ ಗುರಿ) ಅಭಿವೃದ್ಧಿ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರಿದೆ. ಐದು ವರ್ಷಗಳ ಉಪಕ್ರಮಗಳ ಮೂಲಕ ಒಂದು ಬಿಲಿಯನ್​ಗೂ ಹೆಚ್ಚು ಜನರ ಆರೋಗ್ಯ ರಕ್ಷಣೆ ಖಚಿತಪಡಿಸಿಕೊಳ್ಳಲು ಕರೆ ನೀಡುತ್ತದೆ. ಒಂದು ಬಿಲಿಯನ್​ಗೂ ಹೆಚ್ಚು ಜನರ ಆರೋಗ್ಯ ತುರ್ತು ಪರಿಸ್ಥಿತಿಗಳು ರಕ್ಷಿಸಿದೆ ಎಂದು ಅವರು ತಿಳಿಸಿದರು.

ದೇಶಗಳು ಸಾರ್ವತ್ರಿಕ ಆರೋಗ್ಯ ರಕ್ಷಣೆಯಲ್ಲಿ ಪ್ರಗತಿ ಹೊಂದಿವೆ. ಸುಮಾರು 477 ಮಿಲಿಯನ್​ ಜನರು ಇದರ ಪ್ರಯೋಜನ ಪಡೆದಿದ್ದಾರೆ. ಇದೇ ರೀತಿ ಪರಿಸ್ಥಿತಿ ಮುಂದುವರೆದರೆ, ಇದು ಈ ದಶಕದ ಅಂತ್ಯದಲ್ಲಿ ವಿಶ್ವದ ಅರ್ಧಕ್ಕಿಂತ ಹೆಚ್ಚು ಜನರು ಇದರ ಲಾಭ ಪಡೆಯುತ್ತಾರೆ. ಇದಕ್ಕೆ ವೇಗವನ್ನು ದ್ವಿಗುಣಗೊಳಿಸಬೇಕು ಎಂದಿದ್ದಾರೆ.

8 ಬಿಲಿಯನ್​ ಜನರ ಮೇಲೆ ಕೋವಿಡ್ ಸೂಚಕವಿದೆ. ಇದು ಜಗತ್ತಿನಾದ್ಯಂತ ಒಟ್ಟಾರೆ ಜನಸಂಖ್ಯೆಯಾಗಿದ್ದು, ಇವರನ್ನು ತುರ್ತು ಪರಿಸ್ಥಿತಿಯಿಂದಾಗಿ ಉತ್ತಮವಾಗಿ ರಕ್ಷಿಸಬೇಕಾಗಿದೆ. ಕಳೆದ ವರ್ಷ ನಾವು ಅನೇಕ ಸಾಧನೆಗಳನ್ನು ಮಾಡಿದ್ದೇವೆ ಎಂದು ಇದೇ ವೇಳೆ ಅವರು ತಿಳಿಸಿದರು. ನಾವು ಐದು 'P' ಗಳನ್ನು ಅಂದರೆ ಪ್ರಚಾರ, ಲಭ್ಯತೆ, ರಕ್ಷಣೆ ಮತ್ತು ಶಕ್ತಿ ಮತ್ತು ಆರೋಗ್ಯಕ್ಕೆ ಪ್ರದರ್ಶನಗಳನ್ನು ಮಾಡಿದ್ದೇವೆ. ಅನಾರೋಗ್ಯಕರ ಆರೋಗ್ಯ ಉತ್ಪನ್ನಗಳ ಮೇಲೆ ಹೊಸ ತೆರಿಗೆ ವಿಧಿಸುವ ಮೂಲಕ ದೇಶಗಳು ಕೂಡ ಆರೋಗ್ಯ ಅಭಿವೃದ್ಧಿ ಮತ್ತು ರೋಗ ನಿರ್ಣಯ ಕೈಗೊಂಡ ಪ್ರಯತ್ನಗಳನ್ನು ಮೆಚ್ಚಬೇಕು ಎಂದರು.

ಅನೇಕ ದೇಶಗಳು ಉಪ್ಪಿನ ಸೇವನೆಯನ್ನು ಕಡಿತ ಮಾಡಿವೆ. ಉಪ್ಪಿನ ಅಧಿಕ ಸೇವನೆ ಹೃದಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಕೋವಿಡ್​, ಮಂಕಿಪಾಕ್ಸ್ ​ಜಾಗತಿಕ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿ ಮುಗಿದಿದ್ದು, ಪೋಲಿಯೋವೊಂದು ಉಳಿದಿದೆ ಎಂದು ತಿಳಿಸಿದರು. ಇದೇ ವೇಳೆ, ಮೂರು ಬಿಲಿಯನ್​ ಮತ್ತು ಆರೋಗ್ಯ ಸಂಬಂಧಿತ ಎಸ್​ಡಿಜಿಗಳ ಗುರಿಗಳ ಮೇಲೆ ಪ್ರಗತಿಯ ವೇಗವನ್ನು ಪಡೆದುಕೊಳ್ಳುವಂತೆ ದೇಶಗಳನ್ನು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಜಿನಿವಾದಲ್ಲಿ 76ನೇ ವಿಶ್ವ ಆರೋಗ್ಯ ಅಸೆಂಬ್ಲಿ ಆರಂಭ

ABOUT THE AUTHOR

...view details