ದಿನ ಮುಗಿಯುವ ಹೊತ್ತಿಗೆ ಅನೇಕ ವೇಳೆ ಜನರು ಕುತ್ತಿಗೆ, ಭುಜ ಅಥವಾ ಬೆನ್ನಿನಲ್ಲಿ ಭಾರಿ ಒತ್ತಡ, ನೋವು, ಬಿಗಿತನ ಅನುಭವಿಸುತ್ತಾರೆ. ಇಲ್ಲವೇ, ಮೇಲೇಳುವಾಗ ಬೆನ್ನು ನೋವು ಅಥವಾ ಅಹಿತರಕರ ಅನುಭವ ಎದುರಿಸುತ್ತಾರೆ. ಈ ರೀತಿಯ ನೋವಿಗೆ ಕೆಟ್ಟ ಭಂಗಿಯೇ ಕಾರಣವಾಗುತ್ತದೆ.
ಮೂಳೆ ರೋಗ ತಜ್ಞರು ಮತ್ತು ಪಿಜಿಯೊಥೆರಪಿಸ್ಟ್ ಪ್ರಕಾರ, ಕಳೆದ ಕೆಲವು ವರ್ಷಗಳಿಂದ ಜನರು ತಮ್ಮ ಜಡ ಜೀವನಶೈಲಿ ಮತ್ತು ಕೆಟ್ಟ ಭಂಗಿಯಿಂದ ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಬೆನ್ನುಹುರಿ ಮೇಲಿನ ಒತ್ತಡ ಹೆಚ್ಚುತ್ತಿದೆ. ಇದರಿಂದ ಮೂಳೆ ಗಾಯ, ಸ್ನಾಯು ನೋವು, ಕುತ್ತಿಗೆ, ಭುಜ ಮತ್ತು ಸೊಂಟ ಬಿಗಿತನ ಸೇರಿದಂತೆ ಹಲವು ಸಮಸ್ಯೆಗಳನ್ನು ಅನುಭವಿಸುತ್ತಾರೆ.
ಈ ಕುರಿತು ಮಾತನಾಡಿರುವ ದೆಹಲಿಯ ವೈದ್ಯ ಡಾ.ರತನ್ ತೊಮರ್, ಕಳೆದ ಹಲವು ವರ್ಷಗಳಿಂದ ಎಲ್ಲ ವಯೋಮಿತಿಯ ಜನರಲ್ಲಿ ಸ್ನಾಯು ನೀವು, ಬಿಗಿತನ, ಬೆನ್ನು, ಕುತ್ತಿಗೆ, ಭುಜದ ನೋವು ಹೆಚ್ಚುತ್ತಿದೆ. ಈ ಸಮಸ್ಯೆ ಹೇಳಿ ಬರುತ್ತಿರುವ ರೋಗಿಗಳಲ್ಲಿ ಶೇ 40ರಷ್ಟು ಮಂದಿ ಯುವ ಜನತೆ. ಕೆಟ್ಟ ಭಂಗಿ ಕಾರಣದಿಂದ ಅವರು ಬೆನ್ನು, ಭುಜದ ನೋವಿಗೆ ತುತ್ತಾಗುತ್ತಿದ್ದು, ಇದಕ್ಕಾಗಿ ಫಿಜಿಯೋಥೆರಪಿ ಮೊರೆ ಹೋಗುತ್ತಿದ್ದಾರೆ.
ಡೆಹ್ರಾಡೂನ್ನ ಕೀಳು ಮೂಳೆ ತಜ್ಞ ಡಾ.ಹೇಮ್ ಜೋಶಿ ಕೂಡ ಕೆಟ್ಟ ಭಂಗಿಯಿಂದಾಗಿ ಸ್ನಾಯು ಬಿಗಿತನ, ಭಜ, ಕುತ್ತಿಗೆ, ಬೆನ್ನು ನೋವಿನ ಸಮಸ್ಯೆಗೆ ಜನರು ಹೆಚ್ಚು ತುತ್ತಾಗುತ್ತಿದ್ದಾರೆ. ಇದನ್ನು ನಾವು ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡದಿದ್ದರೆ, ಮೂಳೆ ಮತ್ತು ಕೀಳುಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಎಚ್ಚರಿಸಿದ್ದಾರೆ.
ಕಂಪ್ಯೂಟರ್ ಮುಂದೆ ಚೇರ್ನಲ್ಲಿ ದೀರ್ಘಕಾಲ ಕುಳಿತುಕೊಳ್ಳುವ ಮಂದಿ ಈ ರೀತಿ ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಕುರ್ಚಿ ಮೇಲೆ ಭಂಗಿ ಕುಳಿತುಗೊಳ್ಳುವುದರಿಂದ ಕುತ್ತಿಗೆ, ಭುಜ ಮತ್ತು ಬೆನ್ನು ಹುರಿ ಮೇಲೆ ಒತ್ತಡ ಬೀಳುತ್ತದೆ. ಇದರಿಂದಾಗಿ ಅವರು ಹೆಚ್ಚಿನ ನೋವು ಅನುಭವಿಸುತ್ತಾರೆ.
ಕನರು ಕುತ್ತಿಗೆ ಮತ್ತು ತಲೆ ಬಳಿ ಹೆಚ್ಚಿನ ಭಾರ ಅಥವಾ ನೋವು ಅನುಭವಿಸುತ್ತಾರೆ. ಕುಳಿತುಕೊಳ್ಳುವ ಕೆಟ್ಟ ಭಂಗಿಯ ಜೊತೆಗೆ ಮಲಗುವಾಗ ಬೀಳುವ ಒತ್ತಡ, ಹೆಚ್ಚಿನ ಭಾರ ಎತ್ತುವಿಕೆ, ಜಂಪಿಂಗ್ ಅಥವಾ ಓಟದಿಂದಲೂ ಈ ಸಮಸ್ಯೆ ಕಾಡುತ್ತದೆ.
ಹಲವು ಸಮಸ್ಯೆಗಳು ಕಾರಣ: ಕೆಟ್ಟ ಭಂಗಿ ಹೊರತಾಗಿ ಮೂಳೆ ಮತ್ತು ಸ್ನಾಯುವಿನಲ್ಲಿನ ದುರ್ಬಲತೆ ಕೂಡ ಪರಿಣಾಮ ಬೀರುತ್ತದೆ. ವಿವಿಧ ರೀತಿ ಸಂಧಿವಾತ, ಸ್ಲಿಪ್ ಡಿಸ್ಕ್ನಂಥ ಸಮಸ್ಯೆಗಳು ಈ ಸಮಸ್ಯೆ ಹೆಚ್ಚಿಸುತ್ತವೆ. ಇದರ ನಿವಾರಣೆ ಉತ್ತಮ ಡಯಟ್, ಜೀವನಶೈಲಿ, ದೈಹಿಕ ಚಟುವಟಕೆ, ಸರಿಯಾದ ಸಮಯದಲ್ಲಿ ಸರಿಯಾದ ಚಿಕಿತ್ಸೆ ಅಗತ್ಯ.