ಸ್ಯಾನ್ಫ್ರಾನ್ಸಿಸ್ಕೋ: ವರ್ಷದ ಮಗುವು ದಿನದ ನಾಲ್ಕು ಗಂಟೆಗಳಿಗಿಂತ ಹೆಚ್ಚು ಸಮಯ ಟೆಲಿವಿಷನ್, ಕಂಪ್ಯೂಟರ್, ಟ್ಯಾಬ್ಲೆಟ್ಸ್ ಅಥವಾ ಸ್ಮಾರ್ಟ್ ಫೋನ್ ವೀಕ್ಷಣೆ ಮಾಡುವುದರಿಂದ ಅವರಲ್ಲಿ ಎರಡರಿಂದ ನಾಲ್ಕು ವರ್ಷದಲ್ಲಿ ಅಭಿವೃದ್ಧಿಯಾಗುವ ಸಂವಹನ ಮತ್ತು ಸಮಸ್ಯೆಗಳ ಪರಿಹಾರ ಮಾಡುವ ಕೌಶಲ್ಯ ಅಭಿವೃದ್ಧಿ ನಿಧಾನವಾಗಬಹುದು ಎಂದು ಹೊಸ ಅಧ್ಯಯನ ತಿಳಿಸಿದೆ.
ಜಾಮಾ ಪಿಡಿಯಾಟ್ರಿಕ್ಸ್ ಜರ್ನಲ್ನಲ್ಲಿ ಈ ಅಧ್ಯಯನ ಪ್ರಕಟಿಸಲಾಗಿದೆ. ವರ್ಷದ ಮಗುವನ್ನು ತನ್ನ ಗೆಳೆಯರಿಗಿಂತ ಹೆಚ್ಚಾಗಿ ಸ್ಕ್ರೀನ್ ಟೈಮ್ಗೆ ಒಳಪಡಿಸಲಾಗಿತ್ತು. ಈ ವೇಳೆ ಅವರಲ್ಲಿ ಮೋಟಾರು ಮತ್ತು ಸಾಮಾಜಿಕ ಕೌಶಲ್ಯಗಳ ಅಭಿವೃದ್ಧಿ ನಿಧಾನವಾಗುತ್ತದೆ. ಈ ಅಧ್ಯಯನಕ್ಕೆ 7 ಸಾವಿರ ಜಪಾನಿ ಮಕ್ಕಳನ್ನು ತೊಡಗಿಸಲಾಗಿತ್ತು. ಮಗು ದಿನವೊಂದಕ್ಕೆ ಎಷ್ಟು ಗಂಟೆಗಳ ಕಾಲ ಸ್ಕ್ರೀನ್ ಟೈಮ್ ವೀಕ್ಷಣೆ ಮಾಡುತ್ತದೆ ಎಂಬ ವರದಿಯನ್ನು ತಾಯಿಯಿಂದ ಪಡೆದು ಅದರ ಆಧಾರದ ಮೇಲೆ ವಿಶ್ಲೇಷಣೆ ನಡೆಸಲಾಗಿದೆ.
ಸಂಶೋಧಕರು ಎರಡರಿಂದರಿಂದ ನಾಲ್ಕು ವರ್ಷದ ಮಕ್ಕಳಲ್ಲಿ ಕೂಡ ಅನೇಕ ಅಭಿವೃದ್ಧಿಯ ಪರೀಕ್ಷೆಯನ್ನು ನಡೆಸಿದ್ದಾರೆ. ಎರಡು ವರ್ಷದ ಮಗು ದಿನದ ನಾಲ್ಕು ಗಂಟೆಗಳ ಕಾಲ ಸ್ಕ್ರೀನ್ ಟೈಮ್ ವೀಕ್ಷಣೆ ಮಾಡುವುದರಿಂದ ಅವರಲ್ಲಿ ಸಂವಹನ ಮತ್ತು ಸಮಸ್ಯೆ ಪರಿಹಾರ ಕೌಶಲ್ಯವೂ ವಿಳಂಬ ಆಗುತ್ತದೆ ಎಂಬುದು ಅಧ್ಯಯನದಲ್ಲಿ ಪತ್ತೆಯಾಗಿದೆ.