ಪ್ರಸ್ತುತ ದಿನಮಾನದಲ್ಲಿ ಒತ್ತಡ, ಆತಂಕದಲ್ಲಿ ಜೀವಿಸುವುದು ಸಾಮಾನ್ಯ. ಈ ಒತ್ತಡದಲ್ಲೇ ದಿನ ದೂಡುವ ಜಾಯಮಾನ ವ್ಯಕ್ತಿಯ ಆರೋಗ್ಯದ ಮೇಲೆ ಮಾತ್ರವಲ್ಲದೇ ಆತನ ದಿನಚರಿಯ ಮೇಲೂ ಪರಿಣಾಮ ಬೀರುತ್ತದೆ. ಈ ರೀತಿಯ ಸಮಸ್ಯೆ ಮುಂದುವರಿಯುತ್ತಲೇ ಇದೆ ಎಂದಾದರೆ ಅಂತಹವರಿಗೆ ಆ್ಯಂಟಿ ಆ್ಯಂಕ್ಷೈಟಿ ಔಷಧ ಸೇವಿಸಲು ಸಹಲೆ ನೀಡಲಾಗುತ್ತದೆ. ಆದರೆ, ಈ ರೀತಿಯ ಔಷಧಗಳು ಅಡ್ಡ ಪರಿಣಾಮಗಳನ್ನು ಉಂಟುಮಾಡಿ ಇನ್ನೋಮದು ಸಮಸ್ಯೆಗೆ ದಾರಿ ಮಾಡಿಕೊಡುತ್ತವೆ. ಅಂತಹ ಔಷಧಗಳನ್ನು ಸೇವಿಸುವ ಬದಲು ಆಯುರ್ವೇದದ ಕಡೆ ಗಮನ ಹರಿಸುವುದು ಉತ್ತಮ.
ನಿಮಗೆ ಗೊತ್ತೇ.. ಆಯುರ್ವೇದ ಮತ್ತು ಗಿಡಮೂಲಿಕೆ ಔಷಧ ಪದ್ಧತಿಯಲ್ಲಿ ಇಂತಹ ಹಲವಾರು ಔಷಧಗಳು ಮತ್ತು ಗಿಡಮೂಲಿಕೆಗಳನ್ನು ಉಲ್ಲೇಖಿಸಲಾಗಿದೆ. ಮಾನಸಿಕ ಒತ್ತಡಗಳಿಗೆ ಪರಿಹಾರ ನೀಡುವುದು ಮಾತ್ರವಲ್ಲದೇ ಯಾವುದೇ ಅಡ್ಡ ಪರಿಣಾಮ ಇಲ್ಲದೆ ಸಮಸ್ಯೆಗೆ ಪರಿಹಾರ ನೀಡುತ್ತವೆ.
ಗಿಡಮೂಲಿಕೆ, ಆಯುರ್ವೇದ ಚಹಾ ಮತ್ತು ಕಷಾಯಗಳಿಂದ ಆತಂಕಕ್ಕೆ ಪರಿಹಾರ: ಇತ್ತೀಚಿನ ಕೆಲವು ವರ್ಷಗಳಲ್ಲಿ, ಸಾಮಾನ್ಯ ಜನರಲ್ಲಿ ಆತಂಕ, ಒತ್ತಡ ಮತ್ತು ಇತರ ಮಾನಸಿಕ ಮತ್ತು ನಡವಳಿಕೆಯ ಸಮಸ್ಯೆಗಳ ಪ್ರಕರಣಗಳಲ್ಲಿ ಹೆಚ್ಚಳ ಕಂಡುಬಂದಿದೆ. ಇಂದಿನ ವೇಗದ ಜೀವನದಲ್ಲಿ, ಕೆಲಸದ ಒತ್ತಡ, ಅಧ್ಯಯನದ ಒತ್ತಡ, ಸಂಬಂಧಗಳಲ್ಲಿ ಉದ್ಭವಿಸುವ ಸಮಸ್ಯೆಗಳು ಅಥವಾ ಒತ್ತಡ ಮತ್ತು ಭವಿಷ್ಯದ ಆತಂಕಗಳು ಹಾನಿಕಾರಕ ಪರಿಣಾಮವನ್ನು ಬೀರುತ್ತವೆ. ಈ ಸಮಸ್ಯೆ ಅಲ್ಲಿಗೆ ನಿಲ್ಲದಿದ್ದರೆ, ಮನೋವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯುವುದು ಅನಿವಾರ್ಯವಾಗುತ್ತದೆ.
ಸಮಸ್ಯೆ ಆರಂಭಗೊಂಡಾಗಲೇ ಕೆಲವು ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಂಡರೆ ವಿಶೇಷವಾಗಿ ಗಿಡಮೂಲಿಕೆ ಚಹಾಗಳು ಮತ್ತು ಡಿಕಾಕ್ಷನ್ಗಳ ಸಹಾಯದಿಂದ ಅವುಗಳು ಬೀರುವ ಪರಿಣಾಮವನ್ನು ಕಡಿಮೆ ಮಾಡುವ ಶಕ್ತಿ ನಮ್ಮ ಕೈಯ್ಯಲ್ಲಿಯೇ ಇದೆ. ನಿಮ್ಮ ನಿಯಮಿತ ಆಹಾರದಲ್ಲಿ ಕೆಲವು ಗಿಡಮೂಲಿಕೆಗಳು ಮತ್ತು ಆಯುರ್ವೇದ ಗಿಡಮೂಲಿಕೆಗಳು ಒತ್ತಡದ ಸಂದರ್ಭಗಳಲ್ಲಿ ಉತ್ತಮ ಪರಿಹಾರವನ್ನು ನೀಡುತ್ತದೆ.
ತಜ್ಞರು ಏನು ಹೇಳುತ್ತಾರೆ?:ಮುಂಬೈನ ಆಯುರ್ವೇದ ವೈದ್ಯೆ ಡಾ.ಮನಿಶಾ ಕಾಳೆ ಅವರ ಪ್ರಕಾರ, ವಿವಿಧ ರೀತಿಯ ಮಾನಸಿಕ ಸಮಸ್ಯೆಗಳಿಗೆ ಆಯುರ್ವೇದದಲ್ಲಿ ಗಿಡಮೂಲಿಕೆಗಳ ಸಹಾಯದಿಂದ ಚಿಕಿತ್ಸೆ ನೀಡಬಹುದು. ಈ ಚಿಕಿತ್ಸೆಗಳಲ್ಲಿ ಬಳಸಲಾಗುವ ಗಿಡಮೂಲಿಕೆಗಳು ಸಮಸ್ಯೆಯ ಪರಿಣಾಮವನ್ನು ಕಡಿಮೆ ಮಾಡಲು ಮತ್ತು ಮಾನಸಿಕ ಕಾಯಿಲೆಗಳು, ಅಸ್ವಸ್ಥತೆಗಳು ಮತ್ತು ಖಿನ್ನತೆ, ಒತ್ತಡ ಮತ್ತು ಆತಂಕದಂತಹ ಪರಿಸ್ಥಿತಿಗಳಂತಹ ಸಮಸ್ಯೆಗಳನ್ನು ಪ್ರಚೋದಿಸುವ ಹಾರ್ಮೋನುಗಳನ್ನು ಸಕ್ರಿಯಗೊಳಿಸುವಿಕೆಯಲ್ಲಿ ಬಹಳ ಪರಿಣಾಮಕಾರಿ.
ಚಹಾ ಅಥವಾ ಡಿಕಾಕ್ಷನ್‌ಗೆ ಕೆಲವು ಗಿಡಮೂಲಿಕೆಗಳನ್ನು ಸೇರಿಸುವುದರಿಂದ ಮಾನಸಿಕ ಒತ್ತಡ ಮತ್ತು ಆತಂಕದಂತಹ ಸಮಸ್ಯೆಗಳಿಗೆ ಉತ್ತಮ ಪರಿಹಾರ ಕಂಡುಕೊಳ್ಳಬಹುದು. ಅಶ್ವಗಂಧ, ತುಳಸಿ, ದಾಲ್ಚಿನ್ನಿ, ಗೋಟು ಕೋಲ, ಬ್ರಾಹ್ಮಿ ಮತ್ತು ಜಟಮಾನ್ಸಿ ಕೆಲವು ನೈಸರ್ಗಿಕ ಗಿಡಮೂಲಿಕೆಗಳು ಒತ್ತಡವನ್ನು ನಿವಾರಿಸಲು ಸಹಾಯ ಮಾಡುತ್ತದೆ ಎನ್ನುತ್ತಾರೆ ಅವರು.
ಅಶ್ವಗಂಧ:ಆಯುರ್ವೇದ ಔಷಧ ಅಶ್ವಗಂಧವನ್ನು ಅನೇಕ ರೀತಿಯ ದೈಹಿಕ ಮತ್ತು ಆತಂಕ, ಖಿನ್ನತೆ ಮತ್ತು ನಿದ್ರೆಯ ಸಮಸ್ಯೆಗಳು ಮತ್ತು ಇತರ ಮಾನಸಿಕ ಸಮಸ್ಯೆಗಳಿಗೆ ಬಹಳ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. 2019 ರಲ್ಲಿ, ಅದರ ಪ್ರಯೋಜನಗಳ ಬಗ್ಗೆ ಸಂಶೋಧನೆ ನಡೆಸಲಾಗಿದ್ದು, ಒತ್ತಡ ಮತ್ತು ಆತಂಕ ಸಮಸ್ಯೆ ಉಳ್ಳವರು ಈ ಕ್ಲಿನಿಕಲ್ ಪ್ರಯೋಗದಲ್ಲಿ ಭಾಗವಹಿಸಿದ್ದರು.