ಹೈದರಾಬಾದ್:ಮಾನವನ ದೇಹ ಮೂಳೆ, ಮಾಂಸದ ಹೊದಿಕೆಯಾಗಿದ್ದು, ಈ ಮೂಳೆಗಳು ದೇಹದ ಅಂಗಾಂಗಗಳ ರಕ್ಷಣೆ, ಸ್ನಾಯುಗಳ ನಿರ್ವಹಣೆ, ಕ್ಯಾಲ್ಸಿಯಂ ಹೆಚ್ಚಿಸುವುದು ಸೇರಿದಂತೆ ಹಲವು ಕಾರ್ಯಾಚರಣೆಗಳನ್ನು ನಡೆಸುತ್ತವೆ. ಬಲವಾದ ಮೂಳೆಗಳ ಅಭಿವೃದ್ಧಿ ಮತ್ತು ನಿರ್ವಹಣೆಯು ಆರೋಗ್ಯದ ವಿಚಾರದಲ್ಲಿ ಅತ್ಯವಶ್ಯಕವಾಗಿದೆ. ಇದೇ ಕಾರಣಕ್ಕೆ ಜನರಿಗೆ ದೇಹದಲ್ಲಿ ಮೂಳೆ ಮತ್ತು ಕೀಲುಗಳ ಸಮಸ್ಯೆ ಕುರಿತು ಅರಿವು ಮೂಡಿಸಿ, ಅದರ ಪ್ರಾಮುಖ್ಯತೆಯನ್ನು ಸಾರಲು ಭಾರತ ಸರ್ಕಾರ ಪ್ರತಿ ವರ್ಷ ಆಗಸ್ಟ್ 4ರಂದು ರಾಷ್ಟ್ರೀಯ ಮೂಳೆ ಮತ್ತು ಕೀಲು ದಿನವಾಗಿ ಆಚರಿಸಲಾಗುವುದು
ಪ್ರತಿಯೊಬ್ಬರು ಮೂಳೆಗಳ ಆರೋಗ್ಯ ಕಾಪಾಡಿಕೊಳ್ಳುವುದು ಅತ್ಯವಶ್ಯಕವಾಗಿದೆ. ಅದರಲ್ಲೂ ವಿಶೇಷವಾಗಿ 30 ವರ್ಷ ದಾಟಿದ ಬಳಿಕ ಮಹಿಳೆಯರಲ್ಲಿ ಈ ಮೂಳೆಯ ಸಾಂದ್ರತೆ ಹೆಚ್ಚು ಇಳಿಕೆಯಾಗುತ್ತದೆ. ಈ ಹಿನ್ನಲೆ ಇದಕ್ಕೆ ಒತ್ತು ನೀಡಬೇಕಿದೆ. ದುರದೃಷ್ಟವಶಾತ್, ಪುರುಷರಿಗೆ ಹೋಲಿಕೆ ಮಾಡಿದರೆ ಮಹಿಳೆಯರ ಮೂಳೆಗಳು ಅವರ ವಯಸ್ಸಿಗೆ ಅನುಗುಣವಾಗಿರುವುದಕ್ಕಿಂತ ಹೆಚ್ಚಿನ ತೂಕವನ್ನು ನಿರ್ವಹಣೆ ಮಾಡುತ್ತದೆ. ಭಾರತದಲ್ಲಿ ಶೇ 46 ಮಿಲಿಯನ್ ಮಂದಿ ಅಸ್ಟಿಯೊಪೊರಾಸಿಸಿಸ್ (ಅಸ್ಥಿರಂಧ್ರತೆ)ಯಿಂದ ಬಳಲುತ್ತಿದ್ದಾರೆ. ಇದು ಅವರ ಮೂಳೆಯನ್ನು ಮತ್ತಷ್ಟು ದುರ್ಬಲ ಮಾಡುತ್ತದೆ. 50 ವರ್ಷದ ಬಳಿಕ ಎರಡರಲ್ಲಿ ಒಬ್ಬ ಮಹಿಳೆ ಈ ಸಮಸ್ಯೆಯಿಂದ ಬಳಲುತ್ತಿರುವುದು ಕಾಣಬಹುದಾಗಿದೆ.
ಮಹಿಳೆಯರಲ್ಲಿ ಈ ಅಸ್ಟಿಯೊಪೊರಾಸಿಸ್ ಮತ್ತ ಅಸ್ಟಿಯೊಪೆನಿಯಾ ಹೆಚ್ಚಿನ ಅಪಾಯ ಹೊಂದಿದೆ, ಕಾರಣ ಮಹಿಳೆಯರ ಮೂಳೆ ಪುರುಷರ ಮೂಳೆಗಿಂತ ಕಡಿಮೆ ಸಾಂದ್ರೆತ ಮತ್ತು ದಪ್ಪ ಇರುವುದಿಲ್ಲ. ಮಹಿಳೆಯರಲ್ಲಿ ಮೆನೊಪಸ್ ಅವಧಿ ಬಳಿಕ ಈ ಅಸ್ಟಿಯೊಪೊರಾಸಿಸ್ ಸಾಮಾನ್ಯವಾಗಿ ಕಾಣಬಹುದು. ಈ ವೇಳೆ ಅವರಲ್ಲಿ ಮೂಳೆಗೆ ಬೆಂಬಲ ನೀಡುವ ಹಾರ್ಮೋನ್ ಮಟ್ಟ ಕಡಿಮೆಯಾಗುತ್ತದೆ. ಸಾಮಾನ್ಯವಾಗಿ ಇದನ್ನು ನಿಶಬ್ಧ ರೋಗ ಎನ್ನಲಾಗುವುದು. ಅಸ್ಟಿಯೊಪೊರಾಸಿಸ್ ಇದರ ಲಕ್ಷಣವನ್ನು ಹೆಚ್ಚಾಗಿ ತೋರಿಸುವುದಿಲ್ಲ. ಇದನ್ನು ಆರಂಭಿಕ ಹಂತದಲ್ಲಿ ಪತ್ತೆ ಮಾಡುವುದು ಕಷ್ಟ. ಆದರೆ, ಈ ಲಕ್ಷಣಗಳು ಅವುಗಳ ಸೂಚನೆಯಾಗಿದ್ದು, ಇವುಗಳನ್ನು ನಿರ್ಲಕ್ಷ್ಯ ಮಾಡಬಾರದಾಗಿದೆ.
ಆಗ್ಗಾಗ್ಗೆ ಮೂಳೆ ಮುರಿತ: ಅನೇಕ ಪ್ರಕರಣದಲ್ಲಿ ಮೂಳೆ ಮುರಿತ ಮತ್ತು ಬಿರುಕು ಕಾಣಿಸುತ್ತದೆ. ಅಸ್ಟಿಯೊಪೊರಾಸಿಸ್ನ ಆರಂಭಿಕ ಹಂತ ಇದಾಗಿದ್ದು, ಈ ಜನರಲ್ಲಿ ಕಡಿಮೆ ಮೂಳೆ ಸಾಂದ್ರತೆ ಕಂಡು ಬರುತ್ತದೆ.