ದೀರ್ಘಕಾಲ ಕಾಡುವ ಮೈಗ್ರೇನ್ಗೆ ಅಟೋಜೆಪೆಂಟ್ ಔಷಧ ಸುರಕ್ಷಿತ ಮತ್ತು ಪರಿಣಾಮಕಾರಿಯಾಗಿದೆ ಎಂದು ಅಧ್ಯಯನ ತಿಳಿಸಿದೆ. ಜಗತ್ತಿನಲ್ಲಿ ಪ್ರತಿ ವರ್ಷ ಒಂದು ಬಿಲಿಯನ್ಗೂ ಅಧಿಕ ಮಂದಿಯನ್ನು ಈ ಮೈಗ್ರೇನ್ ಕಾಡುತ್ತಿದೆ. ಇದಕ್ಕೆ ಈ ಔಷಧವನ್ನು ಸೂಚಿಸಲಾಗಿದೆ ಎಂದು ದಿ ಲ್ಯಾನ್ಸೆಟ್ನಲ್ಲಿ ವರದಿಯೊಂದನ್ನು ಪ್ರಕಟಿಸಲಾಗಿದೆ.
ಮೈಗ್ರೇನ್ ಅನ್ನು ಬೆಳಕು ಮತ್ತು ಶಬ್ಧ ಅಥವಾ ಚಲನೆಯ ಸೂಕ್ಷಮತೆ ಹೊಂದಿರುವ ಕೆಲವು ವಿಶಿಷ್ಟ ಗುಣಲಕ್ಷಣಗಳೊಂದಿಗೆ ಸಂಬಂಧ ಹೊಂದಿರುವ ಎಪಿಸೊಡಿಕ್ ತಲೆನೋವು ಎಂದು ಗುರುತಿಸಲಾಗಿದೆ. ಅಥವಾ ನರವೈಜ್ಞಾನಿಕ ಅಪಸಾಮಾನ್ಯ ಕ್ರಿಯೆಯ ಇತರ ರೋಗಲಕ್ಷಣಗಳೊಂದಿಗೆ ಸಂಬಂಧಿಸಿದ ತಲೆನೋವು ಮರುಕಳಿಸುವ ಸಿಂಡ್ರೋಮ್ ಇದು ಎಂದು ಗುರುತಿಸಲಾಗಿದೆ.
ಜಾಗತಿಕವಾಗಿ ಅಂಗವೈಕಲ್ಯಕ್ಕೆ ಕಾರಣವಾಗುತ್ತಿರುವ ಎರಡನೇ ಪ್ರಮುಖ ಕಾರಣ ಇದಾಗಿದೆ. ನರ ಸಮಸ್ಯೆಯಲ್ಲಿ ಇದು ಸಾಮನ್ಯವಾಗಿದೆ. ಯುವ ಜನತೆ ಅದರಲ್ಲೂ ಮಹಿಳೆಯರು ಈ ಮೈಗ್ರೇನ್ ಸಮಸ್ಯೆಗೆ ಹೆಚ್ಚು ತುತ್ತಾಗುತ್ತಿದ್ದಾರೆ.
ಇಂಟರ್ನ್ಯಾಷನಲ್ ಟೀಮ್ ಆಫ್ ರಿಸರ್ಚರ್ಸ್ ನೇತೃತ್ವದ ಹೊಸ ಅಧ್ಯಯನ ತಂಡ, ಈ ಅಟೋಜೆಪೆಂಟ್ನ ಸಾಮರ್ಥ್ಯ, ಸುರಕ್ಷತೆ ಮತ್ತು ಸಹಿಷ್ಣುತೆಯ ಮೌಲ್ಯಮಾಪನ ನಡೆಸುತ್ತದೆ. ಅಮೆರಿಕದ ಪ್ರಮುಖ ಔಷಧ ಸಂಸ್ಥೆ ಅಬ್ಬವೀ ಇದನ್ನು ಅಭಿವೃದ್ಧಿ ಪಡಿಸಿದ್ದು, ಕ್ಯೂಲಿಪ್ಟ್ ಇದನ್ನು ಮಾರುಕಟ್ಟೆ ಮಾಡುತ್ತದೆ. ದೀರ್ಘ ಮೈಗ್ರೇನ್ನಲ್ಲಿ ತಡೆಯಬಹುದಾದ ಚಿಕಿತ್ಸೆಗೆ ಇದನ್ನು ಬಳಕೆ ಮಾಡಲಾಗುವುದು.
ಅಮೆರಿಕ, ಇಂಗ್ಲೆಂಡ್, ಕೆನಾಡ, ಚೀನಾ, ಜೆಕ್ ರಿಪಬ್ಲಿಕ್, ಡೆನ್ಮಾರ್ಕ್, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ದಕ್ಷಿಣ ಕೊರಿಯಾ, ಪೊಲಾಂಡ್, ರಷ್ಯಾ, ಸ್ಪೇನ್, ಸ್ವಿಡನ್ ಮತ್ತು ತೈವನ್ನಿ 778 ಭಾಗಿದಾರರನ್ನು ಯಾದೃಚಿಕ, ಡಬ್ಬಲ್ ಬ್ಲೈಂಡ್, ಪ್ಲೆಸೆಬೊ ನಿಯಂತ್ರಣದಲ್ಲಿ ಪೇಸ್ 3 ಟ್ರಯಲ್ ನಡೆಸಲಾಗಿದೆ.
ಅಧ್ಯಯನದಲ್ಲಿ ಯಾರೆಲ್ಲ ಭಾಗಿ:ಈ ಅಧ್ಯಯನದಲ್ಲಿ 18ರಿಂದ 80 ವರ್ಷದ ವಯಸ್ಕರು ಭಾಗಿಯಾಗಿದ್ದಾರೆ. ಒಂದು ವರ್ಷದ ಅಥವಾ ದೀರ್ಘದ ಮೈಕ್ರೇನ್ ಹೊಂದಿರುವವರಿಗೆ ದಿನಕ್ಕೆ ಎರಡು ಸಮಯ ಆಟೋಜೆಪೆಂಟ್ 30 ಎಂಜಿಯಷ್ಟು ನೀಡಲಾಗಿದೆ. ಮಾತ್ರೆ ಮೂಲಕವಾಗಿ 60 ಎಂಜಿ ಅನ್ನು ದಿನಕ್ಕೆ ನೀಡಲಾಗಿದೆ.