ಲಂಡನ್: ತೀವ್ರವಾದ ಆಸ್ತಮಾ ಪ್ರಕರಣಗಳನ್ನು ಹೆಚ್ಚುವರಿಯಾಗಿ ಅಧಿಕ ಡೋಸ್ ಇನ್ಹೇಲ್ಡ್ ಸ್ಟಿರಾಯ್ಡ್ ಬಳಕೆ ಮಾಡದೆ ಜೈವಿಕ ಚಿಕಿತ್ಸೆಯ ಮೂಲಕ ನಿಯಂತ್ರಣ ಮಾಡಬಹುದು ಎಂದು ಹೊಸ ಅಧ್ಯಯನ ತಿಳಿಸಿದೆ.
ದಿ ಲ್ಯಾನ್ಸೆಟ್ ಜರ್ನಲ್ನಲ್ಲಿ ಈ ಅಧ್ಯಯನವನ್ನು ಪ್ರಕಟಿಸಲಾಗಿದೆ. ಅಧ್ಯಯನದಲ್ಲಿ ಬಯೋಲಾಜಿಕಲ್ ಥೆರಪಿ ಬೆನ್ರಾಲಿಜುಮಾಬ್ (ಆಸ್ತಮ ರೋಗಕ್ಕೆ ನೀಡುವ ಚಿಕಿತ್ಸೆ) ಇನ್ಹೇಲ್ಡ್ ಸ್ಟಿರಾಯ್ಡ್ ಡೋಸ್ ಅನ್ನು ಸುರಕ್ಷಿತವಾಗಿ ಕಡಿಮೆ ಮಾಡುತ್ತದೆ. ಹಾಗೇ ಶೇ 60ರಷ್ಟು ಬಳಕೆಯನ್ನು ನಿಲ್ಲಿಸುತ್ತದೆ ಎಂದು ತಿಳಿಸಿದೆ.
ಬೆನ್ರಾಲಿಜುಮಾಬ್ ಎಂಬ ಬಯೋಲಾಜಿಕಲ್ ಥೆರಪಿಯು ಹಲವು ವಿಧದಲ್ಲಿ ಆಸ್ತಮಾ ಕಾಳಜಿಯನ್ನು ಕ್ರಾಂತಿಕಾರಿಗೊಳಿಸುತ್ತದೆ. ಅಲ್ಲದೇ ಹೆಚ್ಚಿನ ಸ್ಟಿರಾಯ್ಡ್ ಚಿಕಿತ್ಸೆಗಳಿಂದ ಆಗುವ ಅಪಾಯವನ್ನು ವನ್ನು ಈ ಚಿಕಿತ್ಸೆ ಮೂಲಕ ತಡೆಯಬಹುದು ಎಂದು ಅಧ್ಯಯನ ತೋರಿಸಿದೆ ಎಂದು ಅಧ್ಯಯನ ನಡೆಸಿದ ಲಂಡನ್ನ ಕಿಂಗ್ಸ್ ಕಾಲೇಜ್ನ ಪ್ರೊ ಡೇವಿಡ್ ಜಾಕ್ಸನ್ ತಿಳಿಸಿದ್ದಾರೆ.
ಈ ಬಯೋಲಾಜಿಕಲ್ ಥೆರಪಿ ಅನೇಕ ರೋಗಿಗಳಲ್ಲಿ ಇನ್ಹೇಲ್ಡ್ ಸ್ಟಿರಾಯ್ಡ್ಗಳು ಬಳಕೆಯಿಂದ ಆಗುವ ಅಡ್ಡ ಪರಿಣಾಮವನ್ನು ಕಡಿಮೆ ಮಾಡುವ ಮತ್ತು ತೊಡೆದು ಹಾಕುವುದನ್ನು ಕಾಣಬಹುದು. ಇದು ಅಸ್ಟಿಯೊಪೊರೊಸಿಸ್, ಮಧುಮೇಹ, ಕ್ಯಾಟರಾಕ್ಟ್ಸ್ ಅಪಾಯವನ್ನು ಹೆಚ್ಚಿಸಬಹುದು.
ಜಾಗತಿನಾದ್ಯಂತ ಇರುವ ಸಾಮಾನ್ಯ ಶ್ವಾಸಕೋಶ ರೋಗದಲ್ಲಿ ಆಸ್ತಮಾವೂ ಒಂದಾಗಿದೆ. ಇದರಿಂದ 300 ಮಿಲಿಯನ್ ಮಂದಿ ಪರಿಣಾಮಕ್ಕೆ ಒಖಗಾಗುತ್ತಿದ್ದಾರೆ. ಇದರಲ್ಲಿ ಶೇ 3 ರಿಂದ 5 ಮಂದಿ ಗಂಭೀರ ಆಸ್ತಮಾದ ಪರಿಣಾಮಕ್ಕೆ ಒಳಗಾಗಿದ್ದಾರೆ.
ಯುಕೆ, ಫ್ರಾನ್ಸ್, ಇಟಲಿ ಮತ್ತು ಜರ್ಮನಿಯಂತಹ ನಾಲ್ಕು ದೇಶದಲ್ಲಿ ಈ ಅಧ್ಯಯನವನ್ನು ನಡೆಸಲಾಗಿದೆ. ಅಧ್ಯಯನದಲ್ಲಿ 208 ರೋಗಿಗಳನ್ನು 32 ವಾರಗಳ ಕಾಲ ಅಧಿಕ ಡೋಸ್ನ ಇನ್ಹೇಲ್ಡ್ ಸ್ಟಿರಾಯ್ಡ್ಗಳನ್ನು ನೀಡಲಾಗಿದ್ದು, 16 ವಾರಗಳ ಅವಧಿಯಲ್ಲಿ ನಿರ್ವಹಣೆ ಮಾಡಲಾಗಿದೆ. ಶೇ 90ರಷ್ಟು ರೋಗಿಗಳ ಆರೋಗ್ಯವೂ ಇದರಿಂದ ಹೆಚ್ಚು ಬಿಗಡಾಯಿಸಿದೆ ಎಂದು ಅಧ್ಯಯನ ತಿಳಿಸಿದೆ
ಬೆನ್ರಾಲಿಜುಮಾಬ್ ಜೈವಿಕ ಚಿಕಿತ್ಸೆಯು ಇಸಿನೊಫಿಲ್ ಎಂದು ಕರೆಯುವ ಉರಿಯೂತದ ಕೋಶವನ್ನು ಕಡಿಮೆ ಮಾಡಿದೆ. ಈ ಪ್ರಕ್ರಿಯೆಯು ತೀವ್ರತರದ ಆಸ್ತಮಾ ರೋಗಿಗಳ ವಾಯುಮಾರ್ಗದಲ್ಲಿ ಅಸಹಜ ಸಂಖ್ಯೆಯಲ್ಲಿ ಉತ್ಪತ್ತಿಯಾಗುತ್ತದೆ.
ಏನಿದು ಇನ್ಹೇಲ್ಡ್ ಸ್ಟಿರಾಯ್ಡ್: ಅಸ್ತಮಾ ನಿಯಂತ್ರಿಸುವಲ್ಲಿ ಇನ್ಹಲೇಷನ್ ಚಿಕಿತ್ಸೆ ಪರಿಣಾಮಕಾರಿ ಪಾತ್ರ ವಹಿಸುತ್ತದೆ. ಶ್ವಾಸಕೋಶಕ್ಕೆ ನೇರವಾಗಿ ಔಷಧ ಪೂರೈಸುವಲ್ಲಿ ಇನ್ಹಲೇಷನ್ ಚಿಕಿತ್ಸೆ ಉಪಯುಕ್ತ. ಆದರೆ, ರೋಗಿಗಳು ನಿಯಮಿತವಾಗಿ ಔಷಧ ತೆಗೆದುಕೊಳ್ಳಬೇಕಾಗುತ್ತದೆ. ರೋಗದ ಶಕ್ತಿ ಮೇಲೆ ಪ್ರತಿರೋಧಕವಾಗಿ ವರ್ತಿಸುತ್ತದೆ. (ಐಎಎನ್ಎಸ್)
ಇದನ್ನೂ ಓದಿ : ಕೋವಿಡ್ನಿಂದ ಚೇತರಿಕೆ ಕಂಡರೂ 2ವರ್ಷಗಳ ಕಾಲ ಶ್ವಾಸಕೋಶದಲ್ಲೇ ಇರುತ್ತೆ ಸೋಂಕು; ಅಧ್ಯಯನ