ವಾಷಿಂಗ್ಟನ್: ಸಿಕಲ್ ಸೆಲ್ ಡಿಸೀಸ್ (ಎಸ್ಸಿಡಿ) ಆನುವಂಶಿಕ ರಕ್ತ ಕಾಯಿಲೆಯು ತಾಯಂದಿರ ಸಾವಿನ ಅಪಾಯವನ್ನು ಹೆಚ್ಚಿಸುವ ಸಾಧ್ಯತೆ ಹೊಂದಿದೆ ಎಂದು ಜಾನ್ ಹಾಪ್ಕಿನ್ಸ್ ಮೆಡಿಸಿನ್ ಸಂಶೋಧಕರು ತಿಳಿಸಿದ್ದಾರೆ. ರಕ್ತಹೀನತೆ ಹೊಂದಿರುವ ಗರ್ಭಿಣಿಯರ ರಾಷ್ಟ್ರೀಯ ಆಡಳಿತಾತ್ಮಕ ದತ್ತಾಂಶದ ಅನುಸಾರ ಈ ವಿಶ್ಲೇಷಣೆ ನಡೆಸಲಾಗಿದೆ. ರಾಷ್ಟ್ರಮಟ್ಟದ ಸರಾಸರಿಗೆ ಹೋಲಿಸಿದರೆ ತಾಯಂದಿರ ಸಾವಿನ ಪ್ರಮಾಣ ಶೇ 26ರಷ್ಟು ಹೆಚ್ಚಿದೆ ಎಂದು ಪತ್ತೆಯಾಗಿದೆ. ಕಳೆದ ಜನಸಂಖ್ಯೆಗೆ ಹೋಲಿಕೆ ಮಾಡಿದಾಗ ಈ ಅಂಕಿ ಅಂಶದಲ್ಲಿ ಯಾವುದೇ ಸುಧಾರಣೆ ಕಂಡಿಲ್ಲ.
ಎಸ್ಸಿಡಿಯೊಂದಿಗಿನ ಗರ್ಭಿಣಿಯರಿಗೆ ಹೆಚ್ಚಿದ ರೋಗ-ನಿರ್ದಿಷ್ಟ ಪರಿಹಾರದ ಅಗತ್ಯ ಇದೆ. ಅಮೆರಿಕ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ಪ್ರಕಾರ, ಯುನೈಟೆಡ್ ಸ್ಟೇಟ್ಸ್‌ನಲ್ಲಿ, ಕಪ್ಪು ಸಮುದಾಯದವರಲ್ಲಿ ಈ ಸ್ಥಿತಿಯು ಹೆಚ್ಚು ಪ್ರಚಲಿತದಲ್ಲಿದೆ. 2000 ರಿಂದ 2003 ರವರೆಗೆ ರಕ್ತ ಹೀನತೆ ಕಾಯಿಲೆ ಇರುವ ಜನರ ತಾಯಿಯ ಮರಣ ಪ್ರಮಾಣವು 10,000 ಕ್ಕೆ 7.2 ಸಾವಿನ ಪ್ರಮಾಣ ಇದೆ. 15 ವರ್ಷಗಳ ನಂತರ ಸಂಗ್ರಹಿಸಿದ ದತ್ತಾಂಶದಲ್ಲಿ ಗರ್ಭಿಣಿಯರ ಮರಣ ಪ್ರಮಾಣವು 10,000 ಕ್ಕೆ 13.3 ಸಾವುಗಳಷ್ಟಿದೆ. ರಕ್ತಹೀನತೆ ರೋಗ ಹೊಂದಿರುವ ಜನರು ಈಗಾಗಲೇ ಸಂಶೋಧನೆ ಮತ್ತು ಕ್ಲಿನಿಕಲ್ ಕೇರ್ ಕೊರತೆ ಹೊಂದಿದ್ದಾರೆ. ರಕ್ತ ಹೀನತೆ ರೋಗ ಹೊಂದಿರುವ ಗರ್ಭಿಣಿಯರು ಹೆಚ್ಚಿನ ಅನಾನುಕೂಲತೆ ಹೊಂದಿರುತ್ತಾರೆ ಎಂದು ಅಸಿಸ್ಟಂಟ್ ಪ್ರೊಫೆಸರ್ ಲೈಡಿಯ ಪೀಕರ್ ತಿಳಿಸಿದ್ದಾರೆ.
ಪ್ರಸವ ಸಮಯದಲ್ಲಿ ಅಥವಾ ಪ್ರಸವದ ನಂತರದಲ್ಲಿ ತಾಯಂದಿರ ಸಾವಿನ ಪ್ರಮಾಣವನ್ನು ವ್ಯಾಖ್ಯಾನಿಸಬಹುದು. ಇದರಲ್ಲಿ ರಕ್ತಹೀನತೆ ಸಮಸ್ಯೆ ಹೊಂದಿರುವವರು ಹೆಚ್ಚಿದ್ದಾರೆ. 10,000ದಿಂದ 1.2ರಷ್ಟು ದಿಂದ 10,000ರಲ್ಲಿ 13.3 ಕಪ್ಪು ವರ್ಣೀಯ ಗರ್ಭಿಣಿಯರು ರಕ್ತಹೀನತೆ ಹೊಂದಿಲ್ಲ, ಕಪ್ಪು ವರ್ಣೇತರ ಗರ್ಭಿಣಿಯರಲ್ಲಿ 0.5 ಮಂದಿ ಈ ಎಸ್ಸಿಡಿ ಹೊಂದಿಲ್ಲ ಎಂದು ಅಧ್ಯಯನದ ವೇಳೆ ತಿಳಿಸಿದೆ. ಗರ್ಭಾವಸ್ಥೆಯು ಯಾವುದೇ ಪೂರ್ವ ಅಸ್ತಿತ್ವದಲ್ಲಿರುವ ಸ್ಥಿತಿಯ ಋಣಾತ್ಮಕ ಅಡ್ಡ ಪರಿಣಾಮಗಳನ್ನು ತರಬಹುದು. ಸಿಎಸ್ಡಿ ರೋಗವು ಇದಕ್ಕೆ ಹೊರತಾಗಿಲ್ಲ ಎಂದು ಅಸೋಸಿಯೇಟ್ ಪ್ರೊಫೆಸರ್ ತಿಳಿಸಿದ್ದಾರೆ. ಸಿಕಕ್ ಸೆಲ್ ಹೊಂದಿರುವ ರೋಗಿಗೆ ರಕ್ತ ವರ್ಗಾವಣೆ ಮತ್ತು ಭ್ರೂಣದ ಸ್ಥಿತಿ ತಿಳಿಯಲು ಹೆಚ್ಚು ಅಲ್ಟ್ರಾಸೌಂಡ್ ಬೇಕಾಗುತ್ತದೆ.