ನ್ಯೂಯಾರ್ಕ್: 2017ರಲ್ಲಿ ಮೊದಲ ಬಾರಿಗೆ ಅಮೆರಿಕದ ಸಂಶೋಧಕರು ಕೃತಕ ಗರ್ಭದ ಪ್ರಯೋಗ ನಡೆಸಿದ್ದರು. ಇದೀಗ ಈ ಪ್ರಯೋಗವನ್ನು ಮಾನವರಲ್ಲಿ ನಡೆಸುವ ಸಂಬಂಧ ಫುಡ್ ಅಂಡ್ ಡ್ರಗ್ ಆಡ್ಮಿನಿಸ್ಟ್ರೇಷನ್ (ಎಫ್ಡಿಎ) ಅನುಮತಿ ಕೇಳಿದ್ದಾರೆ. ಅವಧಿಪೂರ್ವ ಜನನವಾಗುವ ಮಕ್ಕಳ ಸಾವು ಮತ್ತು ಅಂಗವೈಕಲ್ಯತೆಯನ್ನು ಕೃತಕ ಗರ್ಭಗಳು ತಡೆಯಲಿದ್ದು, ಗರ್ಭಾಶಯವನ್ನು ಅನುಕರಿಸುವ ವ್ಯವಸ್ಥೆಯ ಈ ಪ್ರಯೋಗವನ್ನು ನಿಯಂತ್ರಕರು ಪರಿಗಣಿಸುವ ನಿರೀಕ್ಷೆ ಇದೆ.
ವಿಶ್ವ ಆರೋಗ್ಯ ಸಂಸ್ಥೆಯ ಅನುಸಾರ, ಐದು ವರ್ಷದೊಳಗಿನ ಮಕ್ಕಳ ಸಾವು ಮತ್ತು ಅಂಗವೈಕಲ್ಯತೆಯಲ್ಲಿನ ಪ್ರಮುಖ ಕಾರಣಗಳಲ್ಲಿ ಒಂದು, ಅವಧಿ ಪೂರ್ವವಾಗಿ ಮಕ್ಕಳ ಜನನ. 2020ರಲ್ಲಿ 13.4 ಮಿಲಿಯನ್ ಮಕ್ಕಳು ಅವಧಿ ಪೂರ್ವ ಜನಿಸಿವೆ.
2017ರಲ್ಲಿ ಪೆನ್ಸಿಲ್ವೇನಿಯಾದಲ್ಲಿ ಚಿಲ್ಡ್ರನ್ ಹಾಸ್ಪಿಟನ್ ಆಫ್ ಪಿಲಡೆಲ್ಫೀಯಾದ ವಿಜ್ಞಾನಿಗಳು ಸ್ಟೇರಿಲೈಡ್ಸ್ ಬ್ಯಾಗ್ನಲ್ಲಿ ಫ್ಲುಯಿಡ್(ದ್ರವ) ತುಂಬಿ 28 ದಿನಗಳ ಕಾಲ ಕುರಿ ಮರಿ ಭ್ರೂಣವನ್ನು ಅಭಿವೃದ್ಧಿಪಡಿಸಿದರು. ಜೊತೆಗೆ ಅದರ ಹೊಕ್ಕಳು ಬಳ್ಳಿಯ ಟಿಶ್ಯೂ ಸಂಪರ್ಕಿತ ಟ್ಯೂಬ್ನಿಂದ ಆಮ್ನಿಯೋಟಿಕ್ ಫ್ಲುಯಿಡ್, ಔಷಧಿ ಮತ್ತು ಆಕ್ಸಿಜನ್ ಅನ್ನು ನೀಡಲಾಗುತ್ತಿತ್ತು. ಈ ಪ್ರಯೋಗದಲ್ಲಿ ಕುರಿಮರಿ ಶ್ವಾಸಕೋಶ, ಜಿಐ ಟ್ರಾಕ್ಟ್ ಮತ್ತು ಮಿದುಳು ಸಕಾರಾತ್ಮಕ ಬೆಳವಣಿಗೆ ಕಂಡಿತು.
ಇದೀಗ ಸಿಎಚ್ಒಪಿ ತಂಡ ಇದನ್ನು ಮನುಷ್ಯರ ಮೇಲೆ ಪ್ರಯೋಗ ನಡೆಸಲು ಅನುಮತಿ ಕೋರಿದೆ. ಇದಕ್ಕಾಗಿ ಎಕ್ಸ್ಟ್ರಾ- ಯುಟೆರಿನೆ ಎನ್ವರ್ನಮೆಂಟ್ ಫಾರ್ ನ್ಯೂಬಾರ್ನ್ ಡೆವೆಲಪ್ಮೆಂಟ್ ಅಥವಾ ಎಕ್ಸೆಟೆಂಡ್ ಎಂಬ ಸಾಧನವನ್ನೂ ಕೂಡ ಪರೀಕ್ಷೆಗೆ ಒಳಪಡಿಸಿದ್ದಾರೆ.