ಕರ್ನಾಟಕ

karnataka

ETV Bharat / sukhibhava

IVF ಚಿಕಿತ್ಸೆಯಲ್ಲಿ ಭ್ರೂಣ ನಿರ್ಧರಿಸಲು ಕೃತಕ ಬುದ್ಧಿಮತ್ತೆ ಸಹಕಾರಿ

ವಿಟ್ರೊ ಫರ್ಟಿಲೈಸೇಶನ್ ಚಿಕಿತ್ಸೆಯಲ್ಲಿ ಭ್ರೂಣವನ್ನು ನಿರ್ಧರಿಸಲು ಕೃತಕ ಬುದ್ಧಿಮತ್ತೆ ಸಹಕಾರಿ ಎಂದು ನ್ಯೂಯಾರ್ಕ್‌ನ ವಾಲ್ ಕಾರ್ನೆಲ್ ಮೆಡಿಸಿನ್‌ ವಿಜ್ಞಾನಿಗಳು ಕಂಡುಕೊಂಡಿದ್ದಾರೆ.

ivf
ವಿಟ್ರೊ ಫರ್ಟಿಲೈಸೇಶನ್ ಚಿಕಿತ್ಸೆ

By

Published : Dec 22, 2022, 2:20 PM IST

ನ್ಯೂಯಾರ್ಕ್: ಕೃತಕ ಬುದ್ಧಿಮತ್ತೆ ಅಲ್ಗಾರಿದಮ್ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್- ಎಐ) ವಿಟ್ರೊ ಫರ್ಟಿಲೈಸೇಶನ್ (IVF) ಮೂಲಕ ಅಭಿವೃದ್ಧಿ ಹೊಂದಿದ ಭ್ರೂಣವು ಸಾಮಾನ್ಯ ಸಂಖ್ಯೆಯ ವರ್ಣತಂತುಗಳನ್ನು ಹೊಂದಿದೆಯೇ ಅಥವಾ ಅಸಹಜ ಸಂಖ್ಯೆ ಹೊಂದಿದೆಯೇ ಎಂಬುದನ್ನು ಶೇಕಡಾ 70 ರಷ್ಟು ನಿಖರವಾಗಿ ನಿರ್ಧರಿಸುತ್ತದೆ ಎಂದು ಹೊಸ ಅಧ್ಯಯನವೊಂದು ಬಹಿರಂಗಪಡಿಸಿದೆ.

ನ್ಯೂಯಾರ್ಕ್‌ನ ವಾಲ್ ಕಾರ್ನೆಲ್ ಮೆಡಿಸಿನ್‌ ವಿಜ್ಞಾನಿಗಳು ಈ ಅಧ್ಯಯನ ನಡೆಸಿದ್ದಾರೆ. ಅಸಹಜ ಸಂಖ್ಯೆಯ ವರ್ಣತಂತುಗಳನ್ನು 'ಅನ್ಯೂಪ್ಲಾಯ್ಡಿ' (Aneuploidy) ಎಂದು ಕರೆಯಲಾಗುತ್ತದೆ. ಐವಿಎಫ್‌ನಲ್ಲಿ ಭ್ರೂಣಗಳು ವಿಫಲಗೊಳ್ಳಲು ಇದು ಕೂಡ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಪ್ರಸ್ತುತ ಅನ್ಯೂಪ್ಲಾಯ್ಡಿಯನ್ನು ಪತ್ತೆಹಚ್ಚಲು ಬಯಾಪ್ಸಿ ಅಂತಹ ಪರೀಕ್ಷೆಯನ್ನು ಮಾಡಲಾಗುತ್ತದೆ.

ಇದರಲ್ಲಿ ಭ್ರೂಣಗಳಿಂದ ಕೋಶಗಳನ್ನು ಸಂಗ್ರಹಿಸಿ, ಆನುವಂಶಿಕ ಪರೀಕ್ಷೆಗಳನ್ನು ಮಾಡಲಾಗುತ್ತದೆ. ಹೀಗೆ ಮಾಡುವುದರಿಂದ ಐವಿಎಫ್ ವೆಚ್ಚವೂ ಹೆಚ್ಚುತ್ತದೆ. ಆದರೆ, ಹೊಸದಾಗಿ ಕಂಡುಹಿಡಿದ ಅಲ್ಗಾರಿದಮ್, Stork-A, ಭ್ರೂಣದ ಚಿತ್ರಗಳನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ:ಹೃದಯ ಕಾಯಿಲೆ ಪತ್ತೆಗೆ ಕೃತಕ ಬುದ್ಧಿಮತ್ತೆಯ ಡಿಜಿಟಲ್ ಮಾರ್ಕರ್ ಯಂತ್ರ

ABOUT THE AUTHOR

...view details