ಕರ್ನಾಟಕ

karnataka

ETV Bharat / sukhibhava

ಆಯುರ್ವೇದ ಮೂಲಕ ಸಂಧೀವಾತ ಉಪಶಮನ; ಬಿಎಚ್​ಯು ವಿಜ್ಞಾನಿಗಳು - ನಾರಾಸ್​ ಹಿಂದೂ ಯುನಿವರ್ಸಿಟಿ

ವಯಸ್ಕರಲ್ಲಿ ಕಾಡುವ ಸಂಧೀವಾತ ಸಮಸ್ಯೆಗೆ ಆಯುರ್ವೇದ ಮೂಲಕ ಪರಿಹಾರ ಕಂಡು ಕೊಳ್ಳಬಹುದು ಎಂದು ಬನಾರಸ್​ ಹಿಂದೂ ಯುನಿವರ್ಸಿಟಿ ತಿಳಿಸಿದೆ.

Arthritis relief through Ayurveda
Arthritis relief through Ayurveda

By ETV Bharat Karnataka Team

Published : Sep 26, 2023, 5:11 PM IST

ವಾರಣಾಸಿ: ಸಂಧೀವಾತ ಸಮಸ್ಯೆಗೆ ಆಯುರ್ವೇದ ಮೂಲಕ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದು ಬನಾರಾಸ್​ ಹಿಂದೂ ಯುನಿವರ್ಸಿಟಿ (ಬಿಎಚ್​ಯು) ವಿಜ್ಞಾನಿಗಳು ತಿಳಿಸಿದ್ದಾರೆ.

ಸಂಧೀವಾತ ರೋಗಿಯನ್ನು ವಿಶ್ವವಿದ್ಯಾಲದಯ ಆಯುರ್ವೇದ ಅಧ್ಯಾಪಕರ ಭೌತಚಿಕಿತ್ಸೆಯ ವಿಭಾಗದಲ್ಲಿ ಅಧ್ಯಯನಕ್ಕೆ ಒಳಪಡಿಸಲಾಗಿದೆ. ಈ ವೇಳೆ ಅಮೃತದಿ ಚುರ್ಣಾ ಎಂಬ ಆಯುರ್ವೇದ ಔಷಧಿಯೂ ಸಂಧೀವಾತ ಸಮಸ್ಯೆ ವಿರುದ್ಧ ಪರಿಣಾಮಕಾರಿಯಾಗಿದೆ ಎಂದು ತಿಳಿಸಿದ್ದಾರೆ.

ವಿಭಾಗದ ಪ್ರೋ. ಜ್ಯೋತಿ ಶಂಕರ್​ ತ್ರಿಪಾಠಿ ಮತ್ತು ಪ್ರೋ. ರಾಜೇಂದ್ರ ಪ್ರಸಾದ್​ ಮಾರ್ಗದರ್ಶನದಲ್ಲಿ ಡಾ ಖುಷ್ಬೂ ಅಗರ್ವಾಲ್​ ಈ ಸಂಶೋಧನೆಯನ್ನು ನಡೆಸಿದ್ದಾರೆ.

ಸಂಧೀವಾತದ ಪ್ರಮುಖ ಲಕ್ಷಣ ಎಂದರೆ, ನೋವು, ಊತ ಮತ್ತು ಜ್ವರ ಸೇರಿದಂತೆ ದೇಹದ ಅನೇಕ ಭಾಗದಲ್ಲಿ ಕೀಲು ನೋವು ಉಂಟು ಮಾಡುತ್ತದೆ. ಇದಕ್ಕೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡದೇ ಇದ್ದಲ್ಲಿ, ಬೆರಳು ಸೇರಿದಂತೆ ಇತರೆ ಅಂಗಾಂಗಗಳು ಹಾನಿಗೆ ಒಳಗಾಗುತ್ತವೆ. ಬಹುತೇಕ ಸಮಯದಲ್ಲಿ ಇದರಿಂದ ರೋಗಿಗಳು ಖಿನ್ನತೆಗೆ ಒಳಗಾಗುತ್ತಾರೆ ಎಂದಿದ್ದಾರೆ.

ಆಲೋಪತಿ ಔಷಧಿಗಳು ಇದರಲ್ಲಿ ಪ್ರಯೋಜನ ಹೊಂದಿದೆ. ಆದರೆ ಇದಕ್ಕೆ ಶಾಶ್ವತ ಪರಿಹಾರ ಲಭ್ಯವಾಗಿಲ್ಲ. ಅಲ್ಲದೇ ಈ ನೋವಿಗೆ ಪರಿಹಾರ ಕಾಣಲು ಅನೇಕ ಸಮಯ ತೆಗೆದುಕೊಳ್ಳುತ್ತದೆ. ಈ ಔಷಧವೂ ಯಕೃತ್​, ಮೂತ್ರಪಿಂಡ ಮತ್ತು ಹೊಟ್ಟೆಯಲ್ಲಿ ನೋವಿಗೆ ಕಾರಣವಾಗುತ್ತದೆ.

ಅಮೃತದಿ ಚೂರ್ಣವು ಗಿಲೋಯ್, ಗೋಕ್ಷುರಾ, ಸೋಂತ್, ಗೋರಖ್ಮುಂಡಿ ಮತ್ತು ವರುಣ್ ಸಂಯುಕ್ತಗಳಿಂದ ಕೂಡಿದೆ ಎಂದು ಪ್ರೋ. ಪ್ರಸಾದ್​ ತಿಳಿಸಿದ್ದಾರೆ.

ಈ ಅಧ್ಯಯನ ಉದ್ದೇಶಕ್ಕೆ 60 ಸಂಧೀವಾತ ರೋಗಿಗಳನ್ನು ತಲಾ 20ರಂತೆ ಮೂರು ಗುಂಪುಗಳಾಗಿ ಅಧ್ಯಯನ ನಡೆಸಲಾಗಿದೆ. ಅಧ್ಯಯನದ ಮೊದಲ ಗುಂಪಿನಲ್ಲಿ ಅಮೃತದಿ ಪೌಡರ್​ ಅನ್ನು ಎರಡನೇ ಗುಂಪಿನಲ್ಲಿ ಸತ್ತವಜಯ ಚಿಕಿತ್ಸೆ ಜೊತೆಗೆ ಅಮೃತದಿ ಪೌಡರ್​​ ನೀಡಲಾಗಿದೆ. ಇದು ಮಾನಸಿಕ ಖಿನ್ನತೆಗೆ ಹೆಚ್ಚು ಪ್ರಯೋಜನಕಾರಿಯಾಗಿದೆ.

ಮೂರನೇ ಗುಂಪಿನಲ್ಲಿ ಅಲೋಪೆಥಿಕ್​ ಚಿಕಿತ್ಸೆಯನ್ನು ನೀಡಲಾಗಿದೆ. ಮೂರು ತಿಂಗಳ ಕಾಲ ಮೂರು ತಿಂಗಳ ಗುಂಪಿನವರಿಗೆ ಚಿಕಿತ್ಸೆ ನೀಡಲಾಗಿದೆ. ಇದರಲ್ಲಿ ಮೊದಲ ಗುಂಪಿನಲ್ಲಿ ರೋಗದ ವಿರುದ್ಧ ಉತ್ತಮ ಪ್ರಯೋಜನ ಕಂಡು ಬಂದಿದೆ.

ದೀರ್ಘ ಸಂಧೀವಾತ ಸಮಸ್ಯೆ ಅನುಭವಿಸುತ್ತಿರುವವರಲ್ಲಿ ಈ ಅಮೃತದಿ ಚೂರ್ಣ ಸಾಕಷ್ಟು ಪ್ರಯೋಕನ ನೀಡುವ ಜೊತೆಗೆ ಶಾಶ್ವತ ಉಪಶಮನವನ್ನು ನೀಡುತ್ತದೆ. ಯಾವುದೇ ಅಡ್ಡಪರಿಣಾಮ ಹೊಂದಿಲ್ಲದೆ, ಲಕ್ಷಣವನ್ನು ನಿಯಂತ್ರಣ ಮಾಡುತ್ತದೆ ಎಂದಿದ್ದಾರೆ. ಈ ಅಧ್ಯಯನದ ವರದಿಯೂ ಅನ್ನಲಸ್​ ಆಫ್​ ಆಯುರ್ವೇದಿಕ್​ ಮೆಡಿಸಿನ್​ನಲ್ಲಿ ಪ್ರಕಟಿಸಲಾಗಿದೆ. (ಐಎಎನ್​ಎಸ್​)

ಇದನ್ನೂ ಓದಿ: ಎಲ್ಲೆಡೆ ಹೆಚ್ಚುತ್ತಿದೆ ಡೆಂಘೀ; ಲಕ್ಷಣ, ಮುನ್ನೆಚ್ಚರಿಕೆ ಬಗ್ಗೆ ತಜ್ಞರ ಸಲಹೆ

ABOUT THE AUTHOR

...view details