ವೃತ್ತಿ ಜೀವನದಕ್ಕೆ ಪೋಷಕರು ಸಂಬಂಧಿಕರಿಂದ ದೂರಾಗಿ ಗೊತ್ತಿಲ್ಲದ ಊರಿನಲ್ಲಿ ಬದುಕು ಆರಂಭಿಸಲು ಅನೇಕ ಯುವತಿಯರು ಮುಂದಾಗುತ್ತಾರೆ. ಕಚೇರಿ ಕೆಲಸದಲ್ಲಿ ಸುಸ್ತಾಗುವ ಅವರು ಮನೆಗೆ ತಲುಪುವ ಹೊತ್ತಿಗೆ ಆಲಸಿಗಳಾಗಿ, ಅವರ ಎಲ್ಲಾ ಶಕ್ತಿ ಕೂಡ ಕುಂದಿರುತ್ತದೆ. ಈ ವೇಳೆ ಹೊಟ್ಟೆ ಹಸಿದಾಗ ಆರ್ಡರ್ ಮಾಡಿ ಅಥವಾ ಸ್ನೇಹಿತರ ಜೊತೆಗೆ ಹೋಗಿ ಊಟ ಮುಗಿಸುತ್ತಾರೆ. ಇದರಿಂದ ನೀವು ಬೇಸತ್ತಿದ್ದೀರಾ ಎಂದರೆ, 'ನಿಮಗಾಗಿ' ನೀವು ಏನನ್ನಾದರೂ ತಯಾರಿಸಿಕೊಳ್ಳಿ ಎನ್ನುತ್ತಾರೆ ಆಹಾರ ತಜ್ಞರು. ಇದು ಕೇವಲ ಹೊಟ್ಟೆ ತುಂಬಲು ಅಲ್ಲ, ನಿಮ್ಮ ಒತ್ತಡ ನಿವಾರಣೆಗೆ ಕೂಡ ಪರಿಹಾರವಾಗುತ್ತದೆ.
ಹೌದು, ಅನೇಕ ಮಂದಿ ತಮಗಾಗಿ ಯಾವತ್ತೂ ಚಿಂತಿಸುವುದೇ ಇಲ್ಲ. ಆದರೆ, ಇದು ನಂತರದಲ್ಲಿ ಅವರಿಗೆ ಎಲ್ಲಾ ರೀತಿಯ ಪ್ರಯೋಜನವನ್ನು ನೀಡದೇ ಇರಲಾರದು. ಅಡುಗೆ ಗೊತ್ತಿಲ್ಲ ಎಂದರೂ ಸಣ್ಣದಾಗಿ ನಿಮಗಿಷ್ಟದ ಸರಳವಾದ ತಿಂಡಿಯನ್ನು ತಯಾರಿಸಿ. ಉತ್ತಮ ಆಲೋಚನೆಗಳು ಹೊಟ್ಟೆ ತುಂಬಿದಾಗ ಮಾತ್ರ ಬರುತ್ತವೆ ಎಂಬುದನ್ನು ನೆನಪಿನಲ್ಲಿಡಬೇಕು. ಇದಕ್ಕಾಗಿ ನಿಮ್ಮನ್ನು ನೀವು ತೃಪ್ತಿಯಿಂದ ಇಟ್ಟುಕೊಳ್ಳಬೇಕು. ನೀವು ಖುಷಿಯಿಂದ ಇದ್ದರೆ, ಅದರ ಹಿಂದೆ ಎಲ್ಲವೂ ಸುಗಮವಾಗಿ ಸಾಗುತ್ತದೆ.
ಆರೋಮೆಟಿಕ್ಸ್: ಅರೋಮ ಥೆರಪಿ ಎಂಬುದು ಅಂತಹ ಒಂದು ಪರಿಹಾರದ ಮೂಲವಾಗಿದೆ. ನೀವು ಯಾವಾಗ ಒತ್ತಡವನ್ನು ಅನುಭವಿಸುತ್ತೀರೋ ಆಗ ಅಡುಗೆಯನ್ನು ಮಾಡಿ. ಅದರ ಘಮ ನಿಮ್ಮ ಎಲ್ಲಾ ಸಮಸ್ಯೆಗಳನ್ನು ದೂರ ಓಡಿಸುತ್ತದೆ ಎಂದು ಈ ಚಿಕಿತ್ಸೆ ತಿಳಿಸುತ್ತದೆ.