ಬೆಂಗಳೂರು: ಪುರುಷರಾಗಲಿ ಅಥವಾ ಮಹಿಳೆಯರಾಗಲಿ ಕೆಲವೊಮ್ಮೆ ಲೈಂಗಿಕ ನಿರಾಸಕ್ತಿ ತೋರುತ್ತಾರೆ. ವಯಸ್ಸಾದಂತೆ ಈ ರೀತಿಯ ಆಸಕ್ತಿ ಕಡಿಮೆಯಾಗುವುದು ಸಹಜ. ಆದರೆ, ದೈಹಿಕ ಮತ್ತು ಮಾನಸಿಕ ಸಮಸ್ಯೆಗಳು ಕೂಡ ಇದಕ್ಕೆ ಕಾರಣವಾಗಬಹುದು. ಗಂಭೀರ ಸಮಸ್ಯೆಗಳಿಂದ ಕೂಡ ಈ ನಿರಾಸಕ್ತಿ ಕಾಡಬಹುದು. ಈ ಸಮಸ್ಯೆ ಗೋಚರತೆ ಬಳಿಕವೂ ಈ ಕುರಿತು ಮಾತನಾಡಲು ಪುರುಷ ಮತ್ತು ಮಹಿಳೆಯರು ಹಿಂಜರಿಯುತ್ತಾರೆ. ಈ ಹಿಂಜರಿಕೆಗೆ ಅವರ ಆರೋಗ್ಯ ಮತ್ತು ಸಂಬಂಧಗಳ ಮೇಲೆ ಪರಿಣಾಮ ಬೀರುತ್ತದೆ.
ಈ ಕುರಿತು ಮಾತನಾಡಿರುವ ಲಕ್ನೋ ವೈದ್ಯ ಡಾ ಇರ್ಫಾನ್ ಖುರೇಷಿ, ಲೈಂಗಿಕ ಕ್ರಿಯಾಶೀಲತೆಯಿಂದ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಪ್ರಯೋಜನಗಳಿವೆ. ಇದು ಒತ್ತಡದ ಮಟ್ಟವನ್ನು ಕಡಿಮೆ ಮಾಡುವುದರ ಜೊತೆಗೆ ದೇಹದ ನೋವು ಕಡಿಮೆ ಗೊಳಿಸುತ್ತದೆ. ಜೊತೆಗೆ ರಕ್ತದ ಪರಿಚಲನೆ ಹೆಚ್ಚಿಸಿ ರಕ್ತದೊತ್ತಡ ನಿಯಂತ್ರಣ ಮಾಡುವುದರ ಜೊತೆಗೆ ಹೃದಯ ಸಮಸ್ಯೆ ಕಡಿಮೆ ಮಾಡಿ, ರೋಗ ನಿರೋಧಕ ಶಕ್ತಿ, ಚರ್ಮದ ಆರೋಗ್ಯ, ನಿದ್ದೆಯ ಮಟ್ಟ ಹೆಚ್ಚಿಸುತ್ತದೆ. ಜೊತೆಗೆ ಕ್ಯಾಲೋರಿ ನಷ್ಟಕ್ಕೂ ಸಹಾಯ ಮಾಡುತ್ತದೆ.
ಲೈಂಗಿಕ ಚಟುವಟಿಕೆಯಿಂದ ದೇಹದಲ್ಲಿ ಡೊಮೈನ್, ಆಕ್ಸಿಟೊಸಿನ್, ನೊರೆಪಿನೆಫೈರಿನ್ಮ ಸೆರೊಟೊನಿನ್ ಮತ್ತು ಪ್ರೊಲಕ್ಟಿನ್ನಂತಹ ಹಾರ್ಮೋನ್ಗಳು ಉತ್ಪಾದನೆ ಹೆಚ್ಚುತ್ತದೆ. ಈ ಹಾರ್ಮೋನ್ಗಳ ಸ್ರವಿಸುವಿಕೆಯಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ಸುಧಾರಣೆ ಆಗಿ, ಮನಸ್ಸನ್ನು ಆರೋಗ್ಯವಾಗಿಡುತ್ತದೆ. ಇದರಿಂದ ಜೋಡಿಗಳ ಮಧ್ಯೆ ಕೂಡ ಆರೋಗ್ಯಯುತ ಸಂಬಂಧ ಕಾಣುತ್ತದೆ.
ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಆರೋಗ್ಯ ಮತ್ತು ನಡುವಳಿಕೆಗಳು ಪುರುಷ ಮತ್ತು ಮಹಿಳೆರಯಲ್ಲಿನ ಲೈಂಗಿಕ ಆಸಕ್ತಿ ಕಡಿಮೆಗೊಳಿಸಬಹುದು. ಇದಕ್ಕೆ ಸಾಮಾನ್ಯ ಆರೋಗ್ಯ ಸಮಸ್ಯೆ ಮತ್ತು ವಯಸ್ಸಿನ ಹೆಚ್ಚಳ, ಹಾರ್ಮೋನ್ ಅಸಮತೋಲ ಮತ್ತು ಕೆಲವು ವೇಳೆ ಸಂಗಾತಿ ನಡುವಳಿಕೆಗಳು ಇದರ ಆಸಕ್ತಿ ಕಡಿಮೆ ಮಾಡುವಲ್ಲಿ ಕಾರಣವಾಗಬಹುದು.